
ವಿಷಯ: “ಮತದಾನ ಪ್ರಕ್ರಿಯೆಯಲ್ಲಿ ನಗರ ವಾಸಿಗಳ ನಿರಾಸಕ್ತಿ” (Urban apathy) ವಿಷಯದ ಕುರಿತು ಕಿರುಚಿತ್ರ (Short Video) ವನ್ನು ಚಿತ್ರೀಕರಣಕ್ಕೆ ಅವಕಾಶ.
ಕಳೆದ ಬಾರಿಯ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ- 2023 ರ ಚುನಾವಣೆಯಲ್ಲಿ ಶೇಕಡವಾರು ಮತದಾನ ಪ್ರಮಾಣವು ರಾಜ್ಯ ಮಟ್ಟಕ್ಕೆ ಹೋಲಿಕೆ ಮಾಡಿದಲ್ಲಿ ನಗರ ಪ್ರದೇಶಗಳಲ್ಲಿ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗಳ ವಿಧಾನ ಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿರುವುದು ಕಂಡುಬರುತ್ತದೆ.
ಈ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗವು ವಿಶೇಷವಾಗಿ ಮತದಾನ ಪ್ರಕ್ರಿಯೆಯಲ್ಲಿ ನಗರ ವಾಸಿಗಳ ನಿರಾಸಕ್ತಿಗೆ (Urban apathy) ಕಾರಣ ಹಾಗೂ ನಗರ ಪ್ರದೇಶಗಳ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಒಂದು ನಿಮಿಷದೊಳಗಿನ ಕಿರುಚಿತ್ರ (Short Video) ಚಿತ್ರೀಕರಿಸಲು ತೀರ್ಮಾನಿಸಿರುತ್ತದೆ.
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿರುವ ಶಾಲಾ/ಕಾಲೇಜುಗಳಲ್ಲಿನ ಮತದಾರರ ಸಾಕ್ಷರತಾ ಸಂಘಗಳ ಮುಖೇನ, ಎಲ್ಲಾ ಸಾರ್ವಜನಿಕರು ಮುಕ್ತವಾಗಿ ದಿನಾಂಕ: 10.01.2024 ರೊಳಗಾಗಿ ಭಾಗವಹಿಸಿ ವಿಡಿಯೋ ಚಿತ್ರೀಕರಿಸಿ ಸಲ್ಲಿಸುವಂತೆ ಹಾಗೂ ಪ್ರತಿ ಜಿಲ್ಲೆಯಿಂದ ಪ್ರಥಮ ಮತ್ತು ದ್ವಿತೀಯ, ತೃತೀಯ ಸ್ಥಾನ ಪಡೆದ ಕಿರುಚಿತ್ರ (Short Video) ಗಳಿಗೆ ಈ ಕೆಳಕಂಡಂತೆ
1)ಪ್ರಥಮ ಸ್ಥಾನ Rs 5,000/-
2)ದ್ವಿತೀಯ ಸ್ಥಾನ Rs 3,000/-
3)ತೃತೀಯ ಸ್ಥಾನ Rs 2,000/-
ನಗದು ಬಹುಮಾನ ಘೋಷಿಸಿ, ರಾಷ್ಟ್ರೀಯ ಮತದಾರರ ದಿನಾಚರಣೆ-2024 ರ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಿಂದ ಪ್ರಮಾಣ ಪತ್ರ ವಿತರಿಸಲು ಕ್ರಮ ವಹಿಸುವಂತೆ,-ಅಪರ ಮುಖ್ಯ ಚುನಾವಣಾಧಿಕಾರಿ ಸಿ.ಆ.ಸು.ಇಲಾಖೆ (ಚುನಾವಣೆಗಳು), ಬೆಂಗಳೂರು ಪತ್ರಿಕಾ ಪ್ರಕಟಣೆ ಮೂಲಕ ಜಾಗೃತಿ ಮೂಡಿಸುವಂತೆ ಕೋರಿದ್ದಾರೆ.