
ಧಾರವಾಡದ ಗಣಕರಂಗ ಸಂಸ್ಥೆಯು ಪ್ರೇಮಿಗಳ ದಿನಾಚರಣೆಯ (14-02-2024) ಪ್ರಯುಕ್ತ ಆಯೋಜಿಸಿದ್ದ “ಪ್ರೇಮ ಪ್ರಸಂಗಗಳು” ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದೆ.
ಬಾಗಲಕೋಟ ಜಿಲ್ಲೆಯ ಇಲಕಲ್ಲಿನ ಉಪನ್ಯಾಸಕಿ ಡಾ.ನಾಗರತ್ನ ಅಶೋಕ ಭಾವಿಕಟ್ಟಿಯವರು ನಗದು ಒಂದು ಸಾವಿರ ರೂ.ಗಳೊಂದಿಗೆ ಪುಸ್ತಕ ಮತ್ತು ಪ್ರಮಾಣಪತ್ರ ಹೊಂದಿದ ಪ್ರಥಮ ಬಹುಮಾನ ವಿಜೇತರಾಗಿದ್ದಾರೆ. ಮಂಗಳೂರಿನ ವೈಧ್ಯಸಾಹಿತಿ ಡಾ.ಸುರೇಶ ನೆಗಳಗುಳಿಯವರು ನಗದು ಐನೂರು ರೂ.ಗಳೊಂದಿಗೆ ಪುಸ್ತಕ ಮತ್ತು ಪ್ರಮಾಣಪತ್ರ ಹೊಂದಿರುವ ದ್ವಿತೀಯ ಬಹುಮಾನ ವಿಜೇತರಾಗಿದ್ದಾರೆ.
ಹುಬ್ಬಳ್ಳಿಯ ಸಾಹಿತಿ ಪದ್ಮಜಾ ಜಯತೀರ್ಥ ಉಮರ್ಜಿಯವರು ನಗದು ಮುನ್ನೂರು ರೂ.ಗಳೊಂದಿಗೆ ಪುಸ್ತಕ ಮತ್ತು ಪ್ರಮಾಣಪತ್ರ ಹೊಂದಿರುವ ತೃತೀಯ ಬಹುಮಾನ ವಿಜೇತರಾಗಿದ್ದಾರೆ.
ಪುಸ್ತಕ ಮತ್ತು ಪ್ರಮಾಣಪತ್ರದ ಗೌರವ ಹೊಂದಿರುವ ತೀರ್ಪುಗಾರರ ಮೆಚ್ಚುಗೆ ಬಹುಮಾನ ಪಡೆದು ವಿಜೇತರಾದವರು :
ಕುಮಾರ ಚಲವಾದಿ ಹಾಸನ, ಎಂ.ಕೆ.ಶೇಖ್(ಮೌಕುಶೇ) ಕುಡಚಿ, ವಿದ್ಯಾ ಕದಂ ಧಾರವಾಡ, ಸುಹಾಸಿನಿ ಕುಕಡೊಳ್ಳಿ (ಸುಶೇ) ಧಾರವಾಡ, ಗಂಗಾಧರ ಬನ್ನಿಹಟ್ಟಿ ಶಿವಮೊಗ್ಗ, ಸಂತೋಷ ಪಿಶೆ ಹಾವೇರಿ ಮತ್ತು ಡಾ.ಇಸಬೆಲ್ಲಾ ಝೇವಿಯರ್ ಧಾರವಾಡ. ಆಕಾಶವಾಣಿಯ ನಗೆನಾಟಕಕಾರರು ಮತ್ತು ಹಾಸ್ಯ ಲೇಖಕರಾದ ಬೆಳಗಾವಿಯ ಜಯಪ್ರಕಾಶ ಅಬ್ಬಿಗೇರಿ ಅವರು ತೀರ್ಪುಗಾರರಾಗಿದ್ದರು. ಗಣಪತಿ ಚಲವಾದಿ ಸ್ಪರ್ಧಾ ಸಂಯೋಜಕರಾಗಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂಧನೆಗಳನ್ನು ಗಣಕರಂಗ ಸ್ಪರ್ಧಾ ಸಮಿತಿಯು ತಿಳಿಸಿದೆ. ವಿಜೇತರಿಗೆ ನಗದು ಹಣವನ್ನು ಪೋನ್ ಪೇ ಮೂಲಕ ಮತ್ತು ಪುಸ್ತಕ ಪ್ರಮಾಣಪತ್ರವನ್ನು ಅಂಚೆಯ ಮೂಲಕ ತಲುಪಿಸಲಾಗುವುದೆಂದು ಗಣಕರಂಗ ಲೇಖನ ಸ್ಪರ್ಧೆ ಸಮಿತಿಯ ಅಧ್ಯಕ್ಷರಾದ ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಮಾಹಿತಿ ನೀಡಿದ್ದಾರೆ.