
ಮುಂಬರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಈಗಾಗಲೇ ಹಲವು ಟಿಕೆಟ್ ಆಕಾಂಕ್ಷಿಗಳ ಹೆಸರು ಅಂತಿಮಗೊಳಿಸಿದ್ದು ಇನ್ನಷ್ಟು ಜನರ ಹೆಸರು ಇನ್ನೆರಡು ಮೂರು ದಿವಸದಲ್ಲಿ ಅಂತಿಮಗೊಳಿಸುವ ಸಾಧ್ಯತೆ ಇದೆ.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪುತ್ರ ಕೆಇ ಕಾಂತೇಶ್ ಹೆಸರು ಮುನ್ನೆಲೆಗೆ :
ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ್ ಕೆ ಗದಗ್ ಹಾವೇರಿ ಜಿಲ್ಲಾ ಲೋಕಸಭಾ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಟಿಕೆಟ್ ಸಿಗದ ನಂತರ ಗದಗ್ ಹಾವೇರಿಯಲ್ಲಿ ಬೀಡುಬಿಟ್ಟ ಕೆಇ ಕಾಂತೇಶ್ ಅಲ್ಲಿ ಸಾಕಷ್ಟು ಬಾರಿ ಓಡಾಡಿ ಪಕ್ಷ ಸಂಘಟಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾನು ಒಬ್ಬ ಪ್ರಬಲ ಆಕಾಂಕ್ಷಿ ಎನ್ನುವುದನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ ಇದಕ್ಕೆ ಪೂರಕ ಎಂಬುವಂತೆ ಕೆಎಸ್ ಈಶ್ವರಪ್ಪನವರು ಕೂಡ ಸಾಕಷ್ಟು ಸಾರಿ ನನ್ನ ಮಗನಿಗೆ ಅಲ್ಲಿ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳುತ್ತಿದ್ದರು.
ಅಖಾಡಕ್ಕೆ ಜಗದೀಶ್ ಶೆಟ್ಟರ್ ಬಸವರಾಜ್ ಬೊಮ್ಮಾಯಿ ಎಂಟ್ರಿ..!
ಗದಗ್ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತವಾಗಿ ರೆಬಲ್ ಆಗಿ ಕಾಂಗ್ರೆಸ್ ಗೆ ಹೋಗಿ ಮತ್ತೆ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿರುವ ಜಗದೀಶ್ ಶೆಟ್ಟರ್ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ವಿಧಾನಸಭಾ ಚುನಾವಣೆಗೆ ವಯಸ್ಸಿನ ಅಂತರ ಕಾಡಿದ್ದು ಲೋಕಸಭಾ ಚುನಾವಣೆಗೆ ವಯಸ್ಸಿನ ಅಂತರ ಕಾಡೋದಿಲ್ವಾ :
ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಯಸ್ಸಿನ ಕಾರಣಕ್ಕಾಗಿ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಸಚಿವ ಈಶ್ವರಪ್ಪನವರಿಗೆ ಟಿಕೆಟ್ ನೀಡಿರಲಿಲ್ಲ ಆದರೆ ಜಗದೀಶ್ ಶೆಟ್ಟರ್ ರೆಬೆಲ್ ಆಗಿ ಕಾಂಗ್ರೆಸ್ಗೆ ಸೇರಿಕೊಂಡು ಟಿಕೆಟ್ ಪಡೆದುಕೊಂಡರು ಆದರೆ ಈಶ್ವರಪ್ಪ ಪಕ್ಷನಿಷ್ಠೆ ಮೆರೆದು ಪಕ್ಷದಲ್ಲೇ ಉಳಿದುಕೊಂಡು ಟಿಕೆಟ್ ನೀಡದಿದ್ದರೂ ಪಕ್ಷಕ್ಕೆ ನಿಷ್ಠರಾಗಿ ಕಾರ್ಯನಿರ್ವಹಿಸಿದರು ಆದರೆ ಈಗ ಜಗದೀಶ್ ಶೆಟ್ಟರ್ ಲೋಕಸಭಾ ಚುನಾವಣೆಗೆ ಆಣೆಯಾಗುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಲೋಕಸಭಾ ಚುನಾವಣೆಗೆ ವಯಸ್ಸಿನ ಅಂತರವನ್ನು ಪರಿಗಣಿಸುವುದಿಲ್ವಾ..? ಲೋಕಸಭಾ ಚುನಾವಣೆನೇ ಬೇರೆ ..?ವಿಧಾನಸಭಾ ಚುನಾವಣೆ ಬೇರೆನಾ ..? ಹೈಕಮಾಂಡ್ ಯಾವ ನಿಲುವು ತೆಗೆದುಕೊಳ್ಳುತ್ತದೆ ಜಗದೀಶ್ ಶೆಟ್ಟರ್ ವಿಚಾರದಲ್ಲಿ ಹಾಗೆ ಬಸವರಾಜ್ ಬೊಮ್ಮಾಯಿ ಈಗಾಗಲೇ ಸಾಕಷ್ಟು ಅಧಿಕಾರವನ್ನು ಅನುಭವಿಸಿ ಕೊನೆಯ ಬಾರಿ ಮುಖ್ಯಮಂತ್ರಿ ಕೂಡ ಆಗಿರುವ ಬೊಮ್ಮಾಯಿಗೆ ಮತ್ತೆ ಅಧಿಕಾರದ ಆಸೆ ಏಕೆ ಎನ್ನುವುದು ಈಶ್ವರಪ್ಪ ಅಭಿಮಾನಿಗಳ ಪ್ರಶ್ನೆ ..?!
ಬಿಎಸ್ ವೈ ಕೆ ಎಸ್ ಈಶ್ವರಪ್ಪ ಶೀತಲ ಸಮರ ಮುಂದುವರಿಯುತ್ತಾ..?
ಬಿಜೆಪಿಯಲ್ಲಿ ಕಳೆದ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಈಶ್ವರಪ್ಪ ಕುಟುಂಬಕ್ಕೆ ವಂಚಿತವಾದಾಗ ಖುದ್ದು ಯಡಿಯೂರಪ್ಪ ಈಶ್ವರಪ್ಪ ಜೊತೆ ನಾನಿದ್ದೇನೆ ಮುಂದೆ ಅನುಕೂಲವಾಗುತ್ತದೆ ಎಂದು ಹೈಕಮಾಂಡ್ ಜೊತೆ ತಾವು ಕೂಡ ಆಶ್ವಾಸನೆ ನೀಡಿದ್ದರು ಅದೇ ಪ್ರಕಾರ ಕಾಂತೇಶ್ ಗೆ ಗದಗ್ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವುದು ಆಗಿ ಮಾತು ನೀಡಿದ್ದರು ಅದಕ್ಕಾಗಿ ಹೋರಾಟ ನಡೆಸುತ್ತಾರಾ ಇಲ್ಲವೇ ಹಳೆ ಮುನಿಸನ್ನು ಇಟ್ಟುಕೊಂಡು ಟಿಕೆಟ್ ಕೊಡಿಸದೆ ಕಾಂತೇಶ್ ಟಿಕೆಟ್ ವಂಚಿತರಾಗಲು ಕಾರಣವಾಗಿ ಈಶ್ವರಪ್ಪ ಕುಟುಂಬದ ಮುನಿಸಿಗೆ ಕಾರಣವಾಗಿ ಇತ್ತ ತಮ್ಮ ಮಗ ಎಂಪಿ ರಾಘವೇಂದ್ರ 4ನೇ ಬಾರಿ ಲೋಕಸಭೆಗೆ ಪ್ರವೇಶವಾಗಿ ಸಚಿವರಾಗಲು ಕನಸು ಕಾಣುತ್ತಿರುವುದನ್ನು ಬಗ್ನಗೊಳಿಸಲು ಈಶ್ವರಪ್ಪ ಸಜ್ಜಾಗಲು ಪರೋಕ್ಷವಾಗಿ ನೆರವಾಗುತ್ತಾರಾ ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ..? ಹೀಗಾಗದಿರಲಿ ಬಿಎಸ್ ವೈ ಹಾಗೂ ಈಶ್ವರಪ್ಪ ಶೀತಲಸಮರ ಅಂತ್ಯವಾಗಲಿ ಅವರ ಸ್ನೇಹ ಮುಂದುವರಿಯಲಿ ಕಾಂತೇಶ್ ಕೆ ಟಿಕೆಟ್ ಸಿಗಲಿ ಎನ್ನುವುದು ಬಿಜೆಪಿ ನಿಷ್ಠಾವಂತ ಮುಖಂಡರುಗಳ ಹಾರೈಕೆ.
ಕೆಇ ಕಾಂತೇಶ್ ಗೆ ಟಿಕೆಟ್ ಫೈನಲ್ ಆಗುವ ಸಾಧ್ಯತೆ..?
ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ಪಕ್ಷದ ಹೈಕಮಾಂಡ್ ಅಲರ್ಟ್ ಆಗಿದ್ದು ಒಂದು ವೇಳೆ ಈಶ್ವರಪ್ಪ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ನಿಷ್ತರಾಗಿ ಪಕ್ಷ ಹೇಳಿದಾಗ ಪಕ್ಷದ ಜೊತೆ ಇದ್ದು ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿರುವ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈಶ್ವರಪ್ಪನವರು ರೆಬೆಲ್ ಆಗುವ ಸಾಧ್ಯತೆ ಇದೆ ಎನ್ನುವ ಮೆಸೇಜ್ ಹೈಕಮಾಂಡ್ ವಲಯಕ್ಕೆ ತಲುಪಿದೆ.
ಇತ್ತ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಕೂಡ ಅಲರ್ಟ್ ಆಗಿದ್ದಾರೆ ಕಾರಣ ತಮ್ಮ ಮಗ ಲೋಕಸಭೆಗೆ ಪ್ರವೇಶ ಮಾಡಲು ಈಶ್ವರಪ್ಪನವರ ಸಹಾಯ ಅತ್ಯಗತ್ಯ ಒಂದು ವೇಳೆ ಈಶ್ವರಪ್ಪನವರ ಮಗನಿಗೆ ಟಿಕೆಟ್ ಸಿಗದಿದ್ದರೆ ಈಶ್ವರಪ್ಪ ರೆಬಲ್ ಆಗಬಹುದು ತನ್ನ ಮಗನ ವಿರುದ್ಧವೇ ಎಲೆಕ್ಷನ್ ಗೆ ನಿಲ್ಲಬಹುದು ಇಲ್ಲವೇ ಪಕ್ಷಕ್ಕೆ ನಿಷ್ಠರಾಗಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳದೆ ತಟಸ್ಥವಾಗಿ ಉಳಿಯಬಹುದು ಎರಡರಲ್ಲಿ ಯಾವುದು ಮಾಡಿದರು ಕೂಡ ತನ್ನ ಮಗನ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗುತ್ತದೆ ಎನ್ನುವುದು ಬಿಎಸ್ ವೈ ಆತಂಕಕ್ಕೆ ಕಾರಣ ಹಾಗಾಗಿ ಖುದ್ದು ಬಿಎಸ್ ವೈ ಈಶ್ವರಪ್ಪನವರ ಪುತ್ರ ಕಾಂತೇಶ್ ಗೆ ಟಿಕೆಟ್ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಕಾಂತೇಶ್ ಕೂಡ ಯುವ ನಾಯಕರಾಗಿದ್ದು ಗದಗ್ ಹಾವೇರಿ ಕ್ಷೇತ್ರದಲ್ಲಿ ಸಾಕಷ್ಟು ಸಲ ಓಡಾಡಿರುವುದರಿಂದ ಅಲ್ಲಿ ಗೆಲ್ಲುವ ಸಾಧ್ಯತೆ ಇದೆ ಹಾಗೂ ಜಾತಿ ಲೆಕ್ಕಾಚಾರದಲ್ಲಿ ನೋಡಿದರೂ ಕೂಡ ಕುರುಬ ಸಮುದಾಯದ ಮತಗಳು ಅತ್ಯಧಿಕವಾಗಿವೆ ಹಾಗೂ ಲಿಂಗಾಯತ್ ಸಮುದಾಯದ ಮತಗಳು ಇರುವುದರಿಂದ ಬಿಎಸ್ ವೈ ಕೊಂಚ ಓಡಾಡಿದರು ಕಾಂತೇಶ್ ಗೆಲುವು ಸುಲಭ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ ಇವೆಲ್ಲವನ್ನು ನೋಡಿಕೊಂಡು ಬಿಜೆಪಿ ಹೈಕಮಾಂಡ್ ಆಪ್ತ ಮೂಲಗಳ ಪ್ರಕಾರ ಕೆಇ ಕಾಂತೇಶ್ ಗೆ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆ ಇದೆ.
ರಘುರಾಜ್ ಹೆಚ್. ಕೆ..9449553305.