
ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆ ಎಸ್ ಈಶ್ವರಪ್ಪ ಸಿಡಿದೆದ್ದಿದ್ದು ತಮ್ಮ ಪುತ್ರ ಕೆಇ ಕಾಂತೇಶ್ ಗೆ ಗದಗ್ ಹಾವೇರಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇರುವುದರಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗದಗ್ ಹಾವೇರಿ ಕ್ಷೇತ್ರದಲ್ಲಿ ತಮ್ಮ ಮಗ ಕೆಇ ಕಾಂತೇಶ್ ಕೆ ಟಿಕೆಟ್ ಸಿಗುವ ಎಲ್ಲಾ ಲಕ್ಷಣಗಳು ಇದ್ದು ಅದಕ್ಕಾಗಿ ಸಾಕಷ್ಟು ತಿಂಗಳಿಗಳಿಂದ ಪೂರ್ವ ತಯಾರಿ ಕೂಡ ನಡೆದಿತ್ತು ಆದರೆ ಕೊನೆಯ ಹಂತದಲ್ಲಿ ಟಿಕೆಟ್ ಕೈತಪ್ಪುವ ಸಾಧ್ಯತೆ ಅಧಿಕವಾಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ರೆಬೆಲ್:
ಟಿಕೆಟ್ ಹಂಚಿಕೆ ವಿಚಾರದಲ್ಲಿ ತಮ್ಮ ಪುತ್ರ ಕೆಇ ಕಾಂತೇಶ್ ಬಗ್ಗೆ ಬ್ಯಾಟಿಂಗ್ ಮಾಡಿಲ್ಲ ಬಸವರಾಜ್ ಬೊಮ್ಮಾಯಿಗೆ ಟಿಕೆಟ್ ಕೊಡಿಸುವಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಹಾಗಾಗಿ ಅವರ ಮಗನ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ನಿಂತು ಗೆದ್ದು ತೋರಿಸುತ್ತೇನೆ ಎನ್ನುವ ಮಾತುಗಳು ಕೆ ಎಸ್ ಈಶ್ವರಪ್ಪನವರ ಆಪ್ತ ವಲಯಗಳಲ್ಲಿ ಕೇಳಿ ಬರುತ್ತಿದೆ.
ಬಿಎಸ್ ವೈ ಫ್ಯಾಮಿಲಿಗೆ ಬಿಗ್ ಶಾಕ್ :
ಬಿಎಸ್ಐ ಕುಟುಂಬಕ್ಕೆ ಬಿಗ್ ಶಾಕ್ ನೀಡಲು ರೆಡಿಯಾಗಿರುವ ಮಾಜಿ ಸಚಿವ ಈಶ್ವರಪ್ಪ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ರಾಜಕೀಯವಾಗಿ ಬೆಳೆಯಲು ಬಿಡದ ಬಿಎಸ್ ವೈ ವಿರುದ್ಧ ಸದಾ ಕೆಂಡಮಂಡಲವಾಗುತ್ತಿದ್ದ ಈಶ್ವರಪ್ಪ ಮತ್ತು ಬಿ ಎಸ್ ವೈ ನಡುವೆ ಶೀತಲಸಮರ ಯಾವಾಗಲೂ ಇತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಸ್ವಲ್ಪ ಪ್ರಮಾಣದಲ್ಲಿ ತಣ್ಣಗಾಗಿತ್ತು ಆದರೆ ಈ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಮತ್ತೆ ಅದು ರೆಬೆಲ್ ಆಗುವ ಎಲ್ಲಾ ಸಾಧ್ಯತೆ ಇದ್ದು ಬಿ ಎಸ್ ವೈ ಕುಟುಂಬಕ್ಕೆ ಶಾಕ್ ನೀಡಲು ಈಶ್ವರಪ್ಪ ಕುಟುಂಬ ಸಜ್ಜಾಗಿದೆ ಎನ್ನಲಾಗುತ್ತಿದೆ.
ಕುರುಬ ಸಮುದಾಯಕ್ಕೆ ಅನ್ಯಾಯವಾಯಿತಾ..?!
ಕುರುಬ ಸಮುದಾಯದ ನಾಯಕರಲ್ಲಿ ಈಶ್ವರಪ್ಪನವರು ಕೂಡ ಪ್ರಮುಖರು ಆದರೆ ಈಶ್ವರಪ್ಪನವರ ಮಗ ಕೆ ಇ ಕಾಂತೇಶ ಕುರುಬ ಸಮುದಾಯದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಇಡೀ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋಗಿ ಸಮುದಾಯವನ್ನು ಸಂಘಟಿಸಿ ಕುರುಬ ಸಮುದಾಯದ ಏಳಿಗೆಗಾಗಿ ಶ್ರಮಿಸಿದರು ಆದರೆ ಈಗ ಇದೇ ಕುರುಬ ಸಮುದಾಯದ ನಾಯಕನಿಗೆ ಟಿಕೆಟ್ ನೀಡುವಲ್ಲಿ ಪಕ್ಷ ಹಿಂದೇಟು ಹಾಕುತ್ತಿರುವ ಹಿಂದಿನ ಉದ್ದೇಶವಾದರೂ ಏನು..? ಲಿಂಗಾಯಿತರಿಗೆ ಮಣೆ ನೀಡುವ ಕಾರಣವಾದರೂ ಏನು..? ಇದು ಮತಗಳ ಲೆಕ್ಕಾಚಾರನಾ..? ಅಥವಾ ಹಿಂದೂಳಿದ ಜಾತಿಗಳನ್ನು ತುಳಿಯುವ ಲೆಕ್ಕಾಚಾರನಾ..?ಎನ್ನುವುದು ಈಶ್ವರಪ್ಪ ಅಭಿಮಾನಿಗಳ ಪ್ರಶ್ನೆ..?
ಒಟ್ಟಿನಲ್ಲಿ ಈ ಸಲದ ಚುನಾವಣೆ ರಂಗ ರಂಗೇರಿದು ಬಿಜೆಪಿಯ ಹಾಲಿ ಕೆಲ ಸಂಸದರಿಗೂ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇರುವುದರಿಂದ ಅವರುಗಳು ರೆಬೆಲ್ ಆಗಿ ಅವರ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆ ಇದೆ. ಹಾಗೆ ಕೆಎಸ್ ಈಶ್ವರಪ್ಪನವರ ಪುತ್ರನಿಗೆ ಟಿಕೆಟ್ ಕೈತಪ್ಪಿರುವುದರಿಂದ ಈಶ್ವರಪ್ಪರವರ ನಡೆ ಕೂಡ ಕುತೂಹಲಕಾರಿಯಾಗಿದ್ದು ಅವರು ಕೂಡ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಿಂತರೆ ಬಿಎಸ್ ವೈ ಪುತ್ರ ರಾಘವೇಂದ್ರ ಅವರಿಗೆ ಕಷ್ಟ ಎದುರಾಗುವುದರಲ್ಲಿ ಸಂಶಯವಿಲ್ಲ ಕಾಂಗ್ರೆಸ್ನ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಗೆ ಇದರಿಂದ ಒಳಿತಾಗುತ್ತಾ..? ಅವರು ಗೆಲ್ಲುತ್ತಾರಾ..? ಅಥವಾ ಹಿರಿಯ ನಾಯಕ ಪಕ್ಷದ ಪಕ್ಷ ನಿಷ್ಠ ಹಿಂದುಗಳ ಪರವಾಗಿ ಸದಾ ನಿಲ್ಲುವ ಈಶ್ವರಪ್ಪನವರಿಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಮನ್ನಣೆ ನೀಡುತ್ತಾರಾ ಈಶ್ವರಪ್ಪನವರ ಪಕ್ಷನಿಷ್ಠೆಗೆ ಜನ ಮೆಚ್ಚುತ್ತಾರಾ..? ಈಶ್ವರಪ್ಪನವರನ್ನೇ ಗೆಲ್ಲಿಸುತ್ತಾರಾ..? ಆ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಕುಟುಂಬಕ್ಕೆ ಸೋಲಾಗುತ್ತಾ ಕಾದು ನೋಡಬೇಕು.
ರಘುರಾಜ್ ಹೆಚ್. ಕೆ..9449553305.