
ಕಳೆದ ಆರು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ ರಾಜೇಶ್ ಸುರ್ಗಿಹಳ್ಳಿ ಅವರನ್ನು ವರ್ಗಾವಣೆ ಮಾಡಿದ್ದು.
ಅವರ ಸ್ಥಾನಕ್ಕೆ ತೀರ್ಥಹಳ್ಳಿಯಲ್ಲಿ ತಾಲೂಕ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ/ ನಟರಾಜ್ ಕೆಎನ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜೇಶ್ ಸುರಗಿಹಳ್ಳಿ ಅವರಿಗೆ ಇನ್ನೂ ಸ್ಥಳ ತೋರಿಸಿಲ್ಲ :
ಶಿವಮೊಗ್ಗ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್ ನಂತಹ ಕಠಿಣ ಪರಿಸ್ಥಿತಿಗಳಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಜೇಶ್ ಸುರಗಿಹಳ್ಳಿ ಅವರ ವರ್ಗಾವಣೆ ಸಿಬ್ಬಂದಿಗಳಲ್ಲಿ ಬೇಸರ ತರಿಸಿದೆ. ರಾಜೇಶ್ ಸುರಗಿಹಳ್ಳಿ ಅವರಿಗೆ ಇನ್ನು ಸರ್ಕಾರ ಸ್ಥಳ ತೋರಿಸಿಲ್ಲ ಇನ್ನೇನು ನಿವೃತ್ತಿಗೆ ಒಂದು ವರುಷ 3 ತಿಂಗಳು ಅಂತರದಲ್ಲಿ ವರ್ಗಾವಣೆ ಆಗಿರುವುದು ಅದು ಚುನಾವಣೆ ಹೊತ್ತಿನಲ್ಲಿ ಒಂದಷ್ಟು ಕುತೂಹಲ ಮೂಡಿಸಿದೆ. ಕಳೆದ 6 ರಿಂದ 8 ತಿಂಗಳಿಂದ ವರ್ಗಾವಣೆ ಆಗುತ್ತಾರೆ ಎಂದು ಎಲ್ಲ ಕಡೆ ಸುದ್ದಿ ಹಬ್ಬಿತು ಅದು ಈಗ ನಿಜವಾಗಿದೆ.
ರಘುರಾಜ್ ಹೆಚ್. ಕೆ..9449553305.