
ಹಾವೇರಿ ಗದಗ್ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪುತ್ರ ಕೆಇ ಕಾಂತೇಶ್ ರನ್ನು ಬಿಜೆಪಿ ಹೈಕಮಾಂಡ್ ಪರಿಗಣಿಸಿಲ್ಲ ಎನ್ನುವ ನೋವಿನಲ್ಲಿರುವ ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ನಿಲ್ಲುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪಕ್ಷ ನಿಷ್ಠೆಯಿಂದ ಕಳೆದ ಚುನಾವಣೆಯಲ್ಲೂ ತಮ್ಮ ಮಗನಿಗೆ ಹಾಗೂ ತಮಗೆ ಟಿಕೆಟ್ ನೀಡದಿದ್ದರೂ ಪಕ್ಷ ಹೇಳಿದಂತೆ ತಾವು ನಿವೃತ್ತಿ ತೆಗೆದುಕೊಂಡು ತಮ್ಮ ಮಗನನ್ನು ಸಮಾಧಾನಪಡಿಸಿ ಪಕ್ಷ ಟಿಕೆಟ್ ನೀಡಿದ ಚನ್ನಬಸಪ್ಪ ಚೆನ್ನಿಯನ್ನು ಗೆಲ್ಲಿಸಿಕೊಂಡು ಬಂದಿರುವ ಈಶ್ವರಪ್ಪನವರಿಗೆ ಅಂದು ಪಕ್ಷದ ಹೈಕಮಾಂಡ್ ಮುಂದೆ ತಮ್ಮ ಮಗನಿಗೆ ಒಳ್ಳೆಯ ಅವಕಾಶ ನೀಡುವುದಾಗಿ ಭರವಸೆ ನೀಡಿತ್ತು.
ಅದೇ ಭರವಸೆಯ ಮೇಲೆ ತಮ್ಮ ಮಗನನ್ನು ಗದಗ್ ಹಾವೇರಿ ಲೋಕ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಲು ಎಲ್ಲಾ ತಯಾರಿ ನಡೆಸಿದರು ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ನೀಡುವುದು ಕಷ್ಟ ಎನ್ನಲಾಗುತ್ತಿದೆ ಇದರಿಂದ ಬೇಸರಗೊಂಡಿರುವ ಈಶ್ವರಪ್ಪ ತಮ್ಮ ನಿಲುವನ್ನು ಪ್ರಕಟಿಸಲು ಇದೇ ಶುಕ್ರವಾರ ಸಂಜೆ 5:00 ಗಂಟೆಗೆ ಶಿವಮೊಗ್ಗ ನಗರದ ಕೋರ್ಟ್ ಎದುರುಗಡೆ ಇರುವ ಬಂಜಾರ ಸಮುದಾಯ ಭವನದಲ್ಲಿ ತಮ್ಮ ಆಪ್ತರು ಅಭಿಮಾನಿಗಳು ಕಾರ್ಯಕರ್ತರು ಅವರನ್ನು ಒಳಗೊಂಡ ಸಭೆಯನ್ನು ಕರೆದಿದ್ದು ಈ ಸಭೆಯಲ್ಲಿ ತಮ್ಮ ಮುಂದಿನ ನಿರ್ಧಾರ ಏನು ತೆಗೆದುಕೊಳ್ಳಬೇಕು ಎನ್ನುವ ಸುಧೀರ್ಘ ಚರ್ಚೆ ಮಾಡುವ ಸಾಧ್ಯತೆ ಇದೆ.
ಒಂದು ಕಾಲದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಈಶ್ವರಪ್ಪನವರಿಗೆ ಪಕ್ಷ ಎಲ್ಲಾ ಸ್ಥಾನಮಾನಗಳನ್ನು ಪಕ್ಷ ನೀಡಿದೆ. ಆದರೆ ಉಳಿದ ನಾಯಕರ ಮಕ್ಕಳಂತೆ ತಮ್ಮ ಮಗನನ್ನು ರಾಜಕೀಯವಾಗಿ ಬೆಳೆಸಬೇಕು ಎನ್ನುವ ಹಂಬಲ ವನ್ನು ಬಿಜೆಪಿ ಹೈಕಮಾಂಡ್ ಮಾತ್ರ ಏಕೋ ಪರಿಗಣಿಗೆ ತೆಗೆದುಕೊಳ್ಳುತ್ತಿಲ್ಲ ಇದರಲ್ಲಿ ತಮ್ಮ ಪಕ್ಷದ ಕೆಲವರದ್ದು ಆಟ ಇದೆ ಎನ್ನುವುದು ಕೂಡ ಅವರಿಗೆ ಮನವರಿಕೆಯಾಗಿದೆ ಹಾಗಾಗಿ ತಮ್ಮ ಮುಂದಿನ ನಿಲುವು ಏನು ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸಬೇಕಾ ಅಥವಾ ಪಕ್ಷ ನಿಷ್ಠರಾಗಿ ಉಳಿದುಕೊಳ್ಳಬೇಕಾ ಎನ್ನುವ ನಿರ್ಧಾರಕ್ಕೆ ಬರಬೇಕು ಎನ್ನುವ ಆಲೋಚನೆಯಿಂದ ಈ ಸಭೆಯನ್ನು ಕರೆದಿದ್ದು ಈ ಸಭೆ ಕುತೂಹಲ ಮೂಡಿಸಿದ್ದು ಈಶ್ವರಪ್ಪನವರ ನಿರ್ಧಾರದ ಮೇಲೆ ಶಿವಮೊಗ್ಗದ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದೆ.
ರಘುರಾಜ್ ಹೆಚ್. ಕೆ..9449553305.