
ಶಿವಮೊಗ್ಗ: ಮಕ್ಕಳು ಕರ್ತವ್ಯದಲ್ಲಿ ಯಶಸ್ಸು ಗಳಿಸಿ ಪುರಸ್ಕರ ಹೊಂದಿದಾಗ ಪಾಲP್ಪರಿಗೆ ಆಗುವ ಸಂತೋಷ ವರ್ಣಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಪಾಲಕರಿಗೆ ವಿಶೇಷ ಗೌರವವನ್ನು ತಂದುಕೊಡುತ್ತದೆ ಎಂದು ಹಿರಿಯ ವಕೀಲ ಎಸ್.ಟಿ.ರಂಗನಾಥ್ ಅಭಿಪ್ರಾಯಪಟ್ಟರು.
ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯದಿಂದ ಬಂಗಾರದ ಪದಕ ವಿಜೇತೆ ಸಾತ್ವಿಕ. ಸಿ. ಸಿ. ಅವರನ್ನು ಶಿವಮೊಗ್ಗದಲ್ಲಿ ಯೂತ್ ಹಾಸ್ಟೆಲ್ ತರುಣೋದಯ ಘಟಕದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ತರುಣೋದಯ ಘಟಕದ ಸಂಸ್ಥಾಪಕ ವಕೀಲ ಚಂದ್ರಶೇಖರ್ ಮತ್ತು ಪೂರ್ಣಿಮ ದಂಪತಿಯ ಪುತ್ರಿಯಾದ ಇವರು ಪೋಷಕರೊಂದಿಗೆ ನಮ್ಮ ನಗರಕ್ಕೂ ಹೆಸರು ತಂದಿದ್ದಾರೆ. ಉತ್ತಮ ವೈದ್ಯೆಯಾಗಿ ಸಮಾಜಕ್ಕೆ ಆಸ್ಥಿಯಾಗಲಿ, ಯಶಸ್ಸು ಗಳಿಸಿದ ಸದಸ್ಯರನ್ನು ಗೌರವಿಸುವುದು ಅವರಿಗೆ ಉತ್ತೇಜನ ದೊರೆತು ಇನ್ನೂ ಹೆಚ್ಚಿನ ಜವಾಬ್ದಾರಿ ಹೊಂದಲು ಸಹಕಾರಿ ಎಂದರು.
ಮಕ್ಕಳಿಗೆ ಬಾಲ್ಯದಿಂದಲೇ ಸೂಕ್ತ ಮಾರ್ಗದರ್ಶನ ನೀಡಿ ಬೆಳೆಸಬೇಕು. ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿ ಸಲಹೆ ನೀಡಬೇಕು. ಸಮಾಜದಲ್ಲಿ ಉನ್ನತ ಸ್ಥಾನ ತಲುಪುವ ಜತೆಯಲ್ಲಿ ಸೇವೆ ಮಾಡುವ ಮನೋಭಾವ ಬೆಳೆಸಬೇಕು ಎಂದು ತಿಳಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಆಶಾ, ಮಕ್ಕಳು ಶ್ರಮ ವಹಿಸಿ ಓದುತ್ತಾರೆ. ಯಶಸ್ಸು ಎಲ್ಲರಿಗೂ ದೊರೆಯುವುದಿಲ್ಲ. ಸಮಾಧಾÀನ ಚಿತ್ತದಿಂದ ಪೋಷಕರು ಸ್ವೀಕರಿಸಿ, ಅವರನ್ನು ಹುರುದುಂಬಿಸುವ ಕಾರ್ಯ ಮಾಡಬೇಕು. ಸ್ಪರ್ಧಾ ಮನೋಭಾವ ಬೆಳೆಸಬೇಕು ಎಂದರು.
ಆಗಮಿಸಿದ ಎಲ್ಲರನ್ನು ಪೂರ್ಣಿಮಾ ಸ್ವಾಗತಿಸಿದರು. ಶ್ರೀಲತಾ ವಂದಿಸಿದರು. ವೇಣುಗೋಪಾಲ್, ಹರಿಪ್ರಸಾದ್, ಡಾ. ಗುರುಪಾದಪ್ಪ, ಭಾರತಿ, ಪ್ರೊ. ಚಂದ್ರಶೇಖರ್, ವಿಜಯೇಂದ್ರ, ವಾಗೇಶ್, ಜಿ.ವಿಜಯಕುಮಾರ್, ಸುರೇಶ್ ಕುಮಾರ್, ಮಲ್ಲಿಕಾರ್ಜುನ್ ಕುಟುಂಬ ಸದಸ್ಯರು, ಸ್ನೇಹಿತರು ಹಿತೈಷಿಗಳು ಅಭಿನಂದಿಸಿದರು.