
ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದ್ದು.
17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದು ತಿಂಗಳು ಫೆಬ್ರವರಿ ಎರಡರಂದು ಯಾವುದೋ ಕೆಲಸದ ನಿಮಿತ್ತ ಸಹಾಯ ಕೇಳಲು ಬಿ ಎಸ್ ಯಡಿಯೂರಪ್ಪ ಅವರ ಬಳಿ ತಾಯಿ ಮತ್ತು ಮಗಳು ಹೋದಾಗ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ತಾಯಿ ನಿನ್ನೆ ತಡರಾತ್ರಿ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೋಕ್ಸು ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 354 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿರುವ ಪ್ರಕರಣ :
ರಾಜಾಹುಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧವೇ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿರುವುದು ಅದು ಈ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಪ್ರಕರಣ ತೀವ್ರ ಸಂಚಲನ ಮೂಡಿಸಿದ್ದು ಇದು ಯಾವ ಹಂತಕ್ಕೆ ತಲುಪುತ್ತದೆ ಕಾದುನೋಡಬೇಕು ಸಾಮಾನ್ಯವಾಗಿ ಪೋಕ್ಸೋ ಕಾಯ್ದೆ ಎನ್ನುವುದು ಬಲಿಷ್ಠವಾದ ಕಾಯ್ದೆಯಾಗಿದ್ದು ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರು ಯಾರೇ ವಿರುದ್ಧ ಆರೋಪ ಬಂದಿದ್ದರು ಅವರನ್ನು ಬಂಧಿಸದೆ ಬಿಡುವುದಿಲ್ಲ ಒಂದು ವೇಳೆ ಬಂಧಿಸದಿದ್ದರೆ ಸಂಬಂಧಪಟ್ಟ ತನಿಖಾ ಅಧಿಕಾರಿಗಳ ವಿರುದ್ಧವೇ ತನಿಖೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಹಿಂದೆ ಮುರುಘಾಮಠದ ಸ್ವಾಮೀಜಿ ವಿಷಯದಲ್ಲೂ ಇದೇ ತರ ಪ್ರಕರಣ ಆಗ ಸ್ವಾಮೀಜಿ ಬಂಧನವಾಗಿ ಜೈಲಿನಲ್ಲಿದ್ದು ಇದ್ದಿದ್ದು ಇತಿಹಾಸ ಈಗ ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಾಗಿರುವುದು ಒಂದು ವೇಳೆ ಬಂಧಿಸದಿದ್ದರೆ ಇದು ವಿರೋಧಿಗಳಿಗೆ ಟೀಕೆ ಮಾಡಲು ಒಂದು ಅಸ್ತ್ರವಾಗಬಹುದು ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇರುವುದರಿಂದ ಬಂಧನ ಮಾಡುವ ಸಾಧ್ಯತೆ ಹೆಚ್ಚು. ಇಂತಹ ಪ್ರಕರಣದಲ್ಲಿ ನಿರೀಕ್ಷೆ ಜಾಮೀನು ಸಿಗುವ ಸಾಧ್ಯತೆ ಬಹಳ ಕಡಿಮೆ ಒಂದು ವೇಳೆ ನಿರೀಕ್ಷಣಾ ಜಾಮೀನು ಕೊಟ್ಟರು ಸಹ ಉಳಿದ ಕಡೆ ಬೇರೆ ವಕೀಲರಗಳು ನಮಗೂ ಕೂಡ ಇಂತಹ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಿ ಎಂದು ನ್ಯಾಯಾಧೀಶರಲ್ಲಿ ಮನವಿ ಸಲ್ಲಿಸಬಹುದು ಹಾಗಾಗಿ ಈ ಪ್ರಕರಣ ತೀವ್ರ ಕುತೂಹಲ ಕೆರಳಿಸಿದ್ದು ಮುಂದೆ ಏನಾಗುತ್ತದೆ ಎನ್ನುವುದು ಕಾದು ನೋಡಬೇಕು.
ರಘುರಾಜ್ ಹೆಚ್.ಕೆ..9449553305.