
ಕೇಂದ್ರ ಸರ್ಕಾರದ ಗೃಹ ಸಚಿವರು ಬಿಜೆಪಿಯ ಮುಖಂಡರು ಆದ ಅಮಿತ್ ಶಾ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿಯ ಬಂಡಾಯ ಅಭ್ಯರ್ಥಿ ಬಿಜೆಪಿಯ ಹಿರಿಯ ಮುಖಂಡ ಮಾಜಿ ಸಚಿವರಾದ ಈಶ್ವರಪ್ಪನವರಿಗೆ ಕರೆ ಮಾಡಿದ್ದು.
ನಾಳೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಈಶ್ವರಪ್ಪನವರು ಬರುತ್ತೇನೆ ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ನಿರ್ಧಾರದಿಂದ ಹಿಂದೆ ಸರಿಯುತ್ತಾರಾ ಅಥವಾ ಮುಂದುವರಿಯುತ್ತಾರಾ..?
ಈಗಾಗಲೇ ಬಿಜೆಪಿಯ ಅಭ್ಯರ್ಥಿ ರಾಘವೇಂದ್ರ ವಿರುದ್ಧ ಕುಟುಂಬ ರಾಜಕಾರಣದ ವಿರುದ್ಧ ಹಾಗೂ ಬಿಜೆಪಿ ಶುದ್ಧೀಕರಣದ ಮಾತನಾಡುತ್ತಿರುವ ಈಶ್ವರಪ್ಪನವರು ಅಮಿತ್ ಶಾ ಕರೆಯಿಂದ ಮನಸೋತು ಮತ್ತೆ ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತಾರಾ ಅಥವಾ ತಮ್ಮ ಆಚಲ ನಿರ್ಧಾರದಂತೆ ಮುಂದುವರಿಯುತ್ತಾರ ಎನ್ನುವುದನ್ನು ಕಾದುನೋಡಬೇಕು.