
ತೀರ್ಥಹಳ್ಳಿ : ತಾಲೂಕಿನ ಸುಪ್ರಸಿದ್ಧ ದೇವಸ್ಥಾನವಾದ ಹಣಗೆರೆಗೆ ಕಟ್ಟೆಯಲ್ಲಿ ಮರ್ಡರ್ ನಡೆದಿದ್ದು ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ಬಂದಿರುವ ಮಾಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಲ್ಲಿ ನಡೆಯಿತು ಈ ಕೊಲೆ ..?!
ನ್ಯಾಯಬೆಲೆ ಅಂಗಡಿಯ ಮಾಲೀಕ ಹಾಗೂ ಸಿವಿಲ್ ಕಂಟ್ರಾಕ್ಟರ್ ಆದ ಅಭಿಬುಲ್ಲ ಮುನ್ನಾ ನ ವಸತಿ ಗೃಹದಲ್ಲಿ ಈ ಕೊಲೆ ನಡೆದಿದೆ.
ಅಕ್ರಮವಾಗಿ ನಡೆಯುತ್ತಿರುವ ವಸತಿಗೃಹಗಳು :
ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಎಂದೆ ನಿರ್ಮಿಸಿರುವ ಸುಮಾರು 14 ವಸತಿಗೃಹಗಳು ಅಕ್ರಮವಾಗಿ ನಡೆಯುತ್ತಿದ್ದು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ರೀತಿಯ ಪರವಾನಿಗೆಯನ್ನು ಪಡೆದುಕೊಂಡಿರುವುದಿಲ್ಲ ಇಲ್ಲಿ ಇತರದ ಪ್ರಕರಣಗಳು ಹಲವು ಅಕ್ರಮ ಚಟುವಟಿಕೆಗಳು ಅನೇಕ ನಡೆದಿದ್ದು ಕೆಲವು ಮುಚ್ಚಿ ಹೋಗಿವೆ ಅಪ್ರಾಪ್ತರಿಗೆ ವಸತಿಗೃಹ ನೀಡುವುದು ಯಾವುದೇ ದಾಖಲೆಗಳು ಇಲ್ಲದೆ ವಸತಿಗೃಹಗಳನ್ನು ನೀಡುವುದು ಹಾಗೂ ಲೆಡ್ಜರ್ಗಳನ್ನು ಮೇಂಟೇನ್ ಮಾಡದೆ ಇರುವುದು ಈ ರೀತಿಯ ಕೃತ್ಯಗಳಿಗೆ ಕಾರಣ ಎನ್ನಬಹುದು.
ಶ್ರೀಪಾದ್ ತಹಶೀಲ್ದಾರ್ ಆಗಿದ್ದಾಗ ಉತ್ತಮ ಕಾರ್ಯ :
ಹಿಂದೆ ತೀರ್ಥಹಳ್ಳಿಯಲ್ಲಿ ಶ್ರೀಪಾದ್ ತಹಸಿಲ್ದಾರ್ ಆಗಿದ್ದಾಗ ಉತ್ತಮ ಕಾರ್ಯವನ್ನು ಮಾಡಿದ್ದು ಹಣಗೆರೆ ಕಟ್ಟೆಯನ್ನು ಸ್ವಚ್ಛಗೊಳಿಸಿದರು ಹಾಗೂ ಇಲ್ಲಿ ಪ್ರಾಣಿ ಹಿಂಸೆಯನ್ನು ನಿಷೇಧ ಮಾಡಿದ್ದು ಯಾವುದೇ ರೀತಿಯ ಬಹಿರಂಗವಾಗಿ ಅಡುಗೆ ಊಟವನ್ನು ಮಾಡಬಾರದು ಎಂದು ನಿಷೇಧವನ್ನು ತಂದಿದ್ದರು ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ಇವೆಲ್ಲ ಚಟುವಟಿಕೆಗಳು ಈ ವಸತಿಗೃಹಗಳಲ್ಲಿ ನಡೆಯುತ್ತಿವೆ.
ಹಿಂದೆ ಎಸ್‌ಪಿಯಾಗಿದ್ದ ರವಿ ಡಿ ಚೆನ್ನಣ್ಣನವರ್ ಮಾಡಿದ ಔಟ್ ಪೋಸ್ಟ್ ಆಟಕ್ಕುಂಟು ಲೆಕ್ಕಕ್ಕಿಲ್ಲ..?!
ಹಿಂದೆ ರವಿ ಡಿ ಚೆನ್ನಣ್ಣವರ್ ಎಸ್ಪಿ ಆಗಿದ್ದಾಗ ಖುದ್ದು ಹಣಗೆರೆಕಟ್ಟೆಗೆ ಭೇಟಿ ನೀಡಿ ಒಂದು ಪೊಲೀಸ್ ಔಟ್ ಪೋಸ್ಟನ್ನು ಮಾಡಿದ್ದರು ಆದರೆ ಅದು ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಅದು ಕಾರ್ಯನಿರ್ವಹಿಸುತ್ತಿಲ್ಲ ಆದ್ದರಿಂದ ಈ ರೀತಿಯ ಎಲ್ಲಾ ಚಟುವಟಿಕೆಗಳು ಅಲ್ಲಿ ಹೆಚ್ಚಾಗಿವೆ ಅಕ್ರಮ ಮಧ್ಯ ಮಾರಾಟ ಗಾಂಜಾ ಮಾರಾಟ ಕೊಲೆ ಇತ್ಯಾದಿಗಳು ಇಲ್ಲಿ ಹೆಚ್ಚಾಗಿವೆ.
ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ :
ಕೊಲೆ ನಡೆದ ಸ್ಥಳಕ್ಕೆ ಸ್ಥಳೀಯ ಮಾಳೂರು ಠಾಣೆಯ ಪೊಲೀಸರು ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದು ಸಿಸಿ ಕ್ಯಾಮೆರಾದ ಪೂಟೇಜ್ ನಲ್ಲಿ ನೋಡುತ್ತಿದ್ದಾರೆ ಆದರೆ ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಒಟ್ಟಾರೆ ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬರಬೇಕು ಹಾಗೆ ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾದರೆ ಪೊಲೀಸ್ ಔಟ್ ಪೋಸ್ಟ್ ಕಡ್ಡಾಯವಾಗಿ ಮತ್ತೆ ಆಕ್ಟಿವ್ ಆಗಬೇಕು ಆ ನಿಟ್ಟಿನಲ್ಲಿ ದಕ್ಷ ಎಸ್ಪಿ ಮಿಥುನ್ ಕುಮಾರ್ ಕ್ರಮ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ಸ್ಥಳೀಯ ನಾಗರಿಕರದ್ದು.