
ತೀರ್ಥಹಳ್ಳಿ : ತಾಲೂಕಿನ ಸುಪ್ರಸಿದ್ಧ ದೇವಸ್ಥಾನವಾದ ಹಣಗೆರೆ ಕಟ್ಟೆಯಲ್ಲಿ ಇರುವ ಅನಧಿಕೃತ ವಸತಿ ಗೃಹಗಳಲ್ಲಿ ರೂಂ ಬಾಡಿಗೆ ಪಡೆದಿದ್ದ ಶಿವಮೊಗ್ಗ ಮೂಲದ ಇಬ್ಬರು ವಯಸ್ಕರು ಯಾವುದೇ ದಾಖಲೆಗಳನ್ನು ವಸತಿಗೃಹಕ್ಕೆ ನೀಡಿರಲಿಲ್ಲ ಹಾಗೆ ವಸತಿಗೃಹಗಳಲ್ಲಿ ಇರುವ ಸಿಸಿ ಕ್ಯಾಮೆರಾದಲ್ಲೂ ಕೂಡ ಇವರ ಪುಟೇಜ್ ದಾಖಲಾಗಿರಲಿಲ್ಲ ಅಷ್ಟಕ್ಕೂ ಸಿಸಿ ಕ್ಯಾಮೆರಾ ವರ್ಕ್ ಆಗ್ತಾ ಇರಲಿಲ್ಲ ವರ್ಕ್ ಆಗೋ ಸಿಸಿ ಕ್ಯಾಮೆರಾ ಇದ್ರು ಕರೆಂಟ್ ಇರ್ಲಿಲ್ಲ ಅನ್ನೋ ನೆಪ ಬೇರೆ ಮೆಸ್ಕಾಂ ಅವರಿಗೂ ಇಲ್ಲಿನ ವಸತಿಗೃಹದ ಮಾಲೀಕರ ಮೇಲೆ ಪ್ರೀತಿ ಜಾಸ್ತಿ ಅದಕ್ಕೆ ಇದೇ ಟೈಮ್ ನಲ್ಲಿ ಪವರ್ ತೆಗೆದಿದ್ದಾರೆ ಅನ್ಸುತ್ತೆ.
ಅದೇನೇ ಇರಲಿ ಪೊಲೀಸರಿಗೆ ತಲೆ ನೋವಾದ ಪ್ರಕರಣ :
ರೂಮ್ ಬಾಡಿಗೆಗೆ ಪಡೆದು ಕೇವಲ ಮೂರರಿಂದ ನಾಲ್ಕು ಗಂಟೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದ್ದು ಆ ನಂತರ ಈಕೆಯನ್ನು ಮರ್ಡರ್ ಮಾಡಿರುವ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ ಆದರೆ ಇದು ಯಾವುದು ಗಮನಕ್ಕೆ ಬಂದಿಲ್ಲ ಮಾರನೇ ದಿನ ಗಮನಕ್ಕೆ ಬಂದಾಗ ಪೊಲೀಸರ ಎಂಟ್ರಿ ಆಗಿದೆ. ಪೊಲೀಸರು ಯಾವುದೇ ರೀತಿಯಲ್ಲಿ ತನಿಖೆ ಕೈಗೊಂಡರು ಕೂಡ ಈ ಪ್ರಕರಣ ಪತ್ತೆ ಹಚ್ಚುವುದು ಕಷ್ಟ ಆಗಿತ್ತು ಏಕೆಂದರೆ ಒಂದು ಸಮರ್ಪಕವಾದ ವಿಳಾಸವಿಲ್ಲ ಇನ್ನೊಂದು ಸಿಸಿ ಕ್ಯಾಮೆರಾದ ಫೂಟೇಜ್ ಇಲ್ಲ ಹೇಗೆ..? ಯಾರು..? ಏನು..? ಅಂತ ಪತ್ತೆ ಹಚ್ಚುವುದು ಹಾಗಾಗಿ ತೀರ್ಥಹಳ್ಳಿ ಪೊಲೀಸ್ ಗೆ ಇದೊಂದು ಸವಾಲಿನ ಕೆಲಸವಾಗಿತ್ತು.
ಸವಾಲನ್ನು ಬೆನ್ನಟ್ಟಿದ ತೀರ್ಥಹಳ್ಳಿ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಶ್ರೀಧರ್ ತಂಡ :
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜೆ ಕೆ ಅವರ ಮಾರ್ಗದರ್ಶನದಲ್ಲಿ ಈ ಸವಾಲನ್ನು ಬೆನ್ನಟ್ಟಿದ ತೀರ್ಥಹಳ್ಳಿಯ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್ ಹಾಗೂ ಶ್ರೀಧರ್ ಅವರ ತಂಡ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊನೆಗೂ ಕೊಲೆಯಾದ ಯುವತಿಯನ್ನು ಪತ್ತೆ ಹಚ್ಚಿದ್ದಾರೆ ಆಕೆ ಶಿವಮೊಗ್ಗದ ಬಾಪೂಜಿ ನಗರದವಳು ಎಂದು ಗುರುತಿಸಲಾಗಿದೆ ಆದರೆ ಆಕೆಯನ್ನು ಕೊಲೆ ಮಾಡಿರುವ ವ್ಯಕ್ತಿ ಇನ್ನು ಪತ್ತೆಯಾಗಿಲ್ಲ ಆತನಿಗಾಗಿ ಪೊಲೀಸರು ಬಲೆಬಿಸಿದ್ದು ಶೀಘ್ರವೇ ಪತ್ತೆ ಮಾಡುವ ಸಾಧ್ಯತೆ ಇದೆ ಆದರೆ ಇದೊಂದು ಅನೈತಿಕ ಸಂಬಂಧಕ್ಕಾದ ಕೊಲೆ ಎನ್ನುವ ಸಂಶಯ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕ್ರೂರ ರೀತಿಯಲ್ಲಿ ಕೊಲೆ ಮಾಡಲು ಕಾರಣವೇನು..?!
ಅನೈತಿಕ ಸಂಬಂಧಕ್ಕೆ ಕೊಲೆಯಾಗಿದ್ದರೆ ಈ ರೀತಿಯ ಕ್ರೂರ ರೀತಿಯಲ್ಲಿ ಕೊಲೆ ಮಾಡಲು ಕಾರಣವೇನು ಕೊಲೆ ಮಾಡುವ ವ್ಯಕ್ತಿಯ ಮನಸ್ಸಿನಲ್ಲಿ ಏನಿತ್ತು ಈತ ಸೈಕೋ ಪಾತ್ ಆಗಿದ್ನಾನ..?! ಅಥವಾ ಆಕೆ ಈತನನ್ನು ಬಿಟ್ಟು ಇನ್ನೊಬ್ಬರ ಜೊತೆಗೂ ಸಂಬಂಧವನ್ನು ಇಟ್ಟುಕೊಂಡಿದ್ದನ್ನು ಸಹಿಸಲಾಗದೆ ಈ ಕೃತ್ಯ ಮಾಡಿದಾನ..?! ಎಲ್ಲವೂ ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಾಗಿದೆ.
ವಸತಿಗೃಹಗಳನ್ನು ಬಂದ್ ಮಾಡಿಸಿದ ತೀರ್ಥಹಳ್ಳಿ ಡಿವೈಎಸ್ಪಿ :
ಮತ್ತೊಮ್ಮೆ ಈ ತರಹದ ಪ್ರಕರಣಗಳು ನಡೆಯಬಾರದೆಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಹಣಗೇರಿ ಕಟ್ಟೆಯಲ್ಲಿರುವ ವಸತಿಗೃಹಗಳ ಮೇಲೆ ತೀವ್ರ ನಿಗ ವಹಿಸಿದ್ದು ಎಲ್ಲಾ ವಸತಿಗೃಹಗಳನ್ನು ಬಂದ್ ಮಾಡಿಸಿದ್ದು ಕಾನೂನು ಪ್ರಕಾರ ಮಾನ್ಯತೆ ಪಡೆದುಕೊಂಡು ಕಾನೂನು ಪ್ರಕಾರ ನಡೆಸುವ ವಸತಿಗೃಹಗಳಿಗಷ್ಟೇ ಆದ್ಯತೆ ನೀಡಲಾಗುವುದು ಎನ್ನುವ ಕಟ್ಟೆಚರವನ್ನು ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್ ಅವರು ನೀಡಿದ್ದು ಸದ್ಯ ಹಣಿಗೇರಿ ಕಟ್ಟೆಯಲ್ಲಿರುವ ವಸತಿಗೃಹಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರ ಆದೇಶದ ಮೇರೆಗೆ ಬಂದ್ ಮಾಡಿಸಿದ್ದಾರೆ.