
ಬದುಕು ಕಟ್ಟಿಕೊಳ್ಳಲು ಸಾಕಷ್ಟು ಜನ ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ನೆಲೆಸಿರುತ್ತಾರೆ ಅದೇ ರೀತಿ ಉತ್ತರಕಾಂಡದಿಂದ ಬಂದ ರಾಜು ರಾವತ್ ಎನ್ನುವವನ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ ಬದುಕು ಕಟ್ಟಿಕೊಳ್ಳಲು ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡಿದ್ದ ರಾಜು ರಾವತ್ ಸುಮನದಾಸ್ ಎಂಬ ಇಬ್ಬರು ಸ್ನೇಹಿತರು ಪರಸ್ಪರ ಚೆನ್ನಾಗಿದ್ದರು ಆದರೆ ಹಣ ಎಂತವರನ್ನು ತಲೆ ಕೆಡಿಸುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ .
ರಸ್ತೆ ಬದಿಯಲ್ಲಿ ಹೆಣ ಎಸೆದು ಪರಾರಿ :
ಎರಡು ತಿಂಗಳ ಹಿಂದೆ ಫೆಬ್ರವರಿ 22ರಂದು ತರಬನಹಳ್ಳಿ ಬಳಿಯ ರಸ್ತೆ ಬದಿಯಲ್ಲಿ ಒಂದು ಅನುಮಾನಾಸ್ಪದ ಶವ ಪೊಲೀಸರಿಗೆ ಪತ್ತೆಯಾಗಿತ್ತು. ಇದರ ಜಾಡು ಹಿಡಿದ ಹೊರಟ ಪೊಲೀಸರಿಗೆ ಶಾಕ್ ಕಾದಿತ್ತು ಹಣಕ್ಕಾಗಿ ಸ್ನೇಹಿತನ ಇನ್ನೊಬ್ಬ ಸ್ನೇಹಿತನನ್ನು ಕೊಲೆ ಮಾಡಿದ್ದ. ತನ್ನ ಸ್ನೇಹಿತನ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿದ್ದಿದ್ದನ್ನು ಕಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದ.
ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು :
ಸುಮಾರು 49 ವರ್ಷ ವಯಸ್ಸಿನ ಉತ್ತರಕಾಂಡ ಮೂಲದ ರಾಜು ರಾವತ್ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು . ಸ್ಥಳಕ್ಕೆ ಭೇಟಿ ನೀಡಿದ್ದ ಚಿಕ್ಕಜಾಲ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಮೃತ ರಾಜು ರಾವತ್ ತಲೆಗೆ ಪೆಟ್ಟಾಗಿ ಗಾಯಗಳಾಗಿದ್ದು, ಅನುಮಾನಾಸ್ಪದವಾಗಿ ಬಿದ್ದಿದ್ದ ಶವವನ್ನ ನೋಡಿದ್ದ ಜನ, ಕುಡಿದು ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿರಬಹುದು ಅಂದುಕೊಂಡಿದ್ದರು. ಇನ್ನು ಪೊಲೀಸರು ಸಹ ಇದೇ ಗುಮಾನಿ ಮೇಲೆ ಮೃತ ರಾಜು ರಾವತ್ ಮೃತದೇಹವನ್ನ ಶವಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಯುಡಿಆರ್ ಕೇಸ್ ದಾಖಲು ಮಾಡಿಕೊಂಡಿದ್ದರು. ಜೊತೆಗೆ ಪೋಸ್ಟ್ ಮಾರ್ಟಮ್ ವರದಿಗೆ ಕಾಯುತ್ತಿದ್ದ ಚಿಕ್ಕಜಾಲ ಪೊಲೀಸರು ರಿಪೋರ್ಟ್ ಬರುತ್ತಿದ್ದಂತೆ ಶಾಕ್ ಆಗಿದ್ದರು. ರಾಜು ರಾವತ್ ಮೇಲೆ ಬಲವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವುದು ತಿಳಿದಿತ್ತು. ವರದಿ ಬಳಿಕ ಕೊಲೆ ಕೇಸ್ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಇದೀಗ ತನಿಖೆ ನಡೆಸಿ ಎಸ್ಕೇಪ್ ಅಗಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಹಣಕ್ಕಾಗಿ ಜೊತೆಯಲ್ಲಿದ್ದ ಸ್ನೇಹಿತನನ್ನು ಕೂಂದ ಪಾಪಿ:
ಕೊಲೆಯಾದ ರಾಜು ರಾವತ್, ಕಳೆದ 17 ವರ್ಷಗಳಿಂದ ತರಬನಹಳ್ಳಿ ಬಳಿಯ ಒಲ್ಡ್ ಬೆಂಗಳೂರು ವಿಲ್ಲಾ ಬಳಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ತನ್ನ ಜೊತೆಗೆ ತ್ರಿಪುರ ಮೂಲದ ಸುಮನ್ ದಾಸ್ ಎಂಬುವವನನ್ನು ಸಹ ಕೆಲಸಕ್ಕೆ ಸೇರಿಸಿಕೊಂಡಿದ್ದ. ಇಬ್ಬರು ದೂರದ ರಾಜ್ಯಗಳಿಂದ ಬಂದು ನೆಲೆಸಿದ್ದ ಕಾರಣ, ಇಬ್ಬರ ಮಧ್ಯೆ ಸ್ನೇಹವಾಗಿದ್ದು, ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರಂತೆ. ಜೊತೆಗೆ ಇಬ್ಬರು ಹೊರಗಡೆ ಹೋದಾಗ ಆನ್ಲೈನ್ ಪೇಮೆಂಟ್ ಮಾಡುತ್ತಿದ್ದ ಕಾರಣ, ರಾಜು ರಾವತ್ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಪಾಸವರ್ಡ್ ಸುಮಾನ್ ದಾಸ್ಗೆ ಗೊತ್ತಾಗಿದೆ. ಹೀಗಾಗಿ ಬ್ಯಾಂಕ್ ಬ್ಯಾಲೆನ್ಸ್ ನೋಡ್ತಿದ್ದಂತೆ ಹಣದ ಮೇಲೆ ಕಣ್ಣಾಕಿದ ಸುಮನ್ ದಾಸ್, ಹಣವನ್ನ ಎಗರಿಸಬೇಕು ಎಂದು ಸ್ಕೇಚ್ ಹಾಕಿದ್ದಾನೆ.
ಜೊತೆಗೆ ಪೆಬ್ರವರಿ 22 ರಂದು ಕೆಲಸ ಮುಗಿಸಿಕೊಂಡು ಬರುತ್ತಿದ್ದ ರಾಜುಗಾಗಿ ಕಾದು ಕುಳಿತಿದ್ದ ಸುಮನ್ ದಾಸ್, ರಾಜು ರಾವತ್ ತಲೆಗೆ ಹಿಂದಿನಿಂದ ಬಂದು ದೊಣ್ಣೆಯಿಂದ ಹೊಡೆದಿದ್ದಾನೆ. ಈ ವೇಳೆ ತಲೆಗೆ ಹೊಡೆಯುತ್ತಿದ್ದಂತೆ ರಾವತ್ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದು, ಮೃತದೇಹವನ್ನ ರಸ್ತೆಯ ಪಕ್ಕದ ಹಳ್ಳಕ್ಕೆ ತಳ್ಳಿ ಎಸ್ಕೇಪ್ ಆಗಿದ್ದಾಗಿ ಆರೋಪಿ ಸುಮನ್ ದಾಸ್ ಚಿಕ್ಕಜಾಲ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.