
ಶಿವಮೊಗ್ಗ ಬಿಜೆಪಿಯ ರೆಬೆಲ್ ನಾಯಕ ಸದ್ಯ ಪಕ್ಷೇತರ ಅಭ್ಯರ್ಥಿ ಮಾಜಿ ಸಚಿವ ಮಾಜಿ ಉಪಮುಖ್ಯಮಂತ್ರಿಗಳು ಬಿಜೆಪಿ ಹಿರಿಯ ಮುಖಂಡರು ಆದ ಕೆ ಎಸ್ ಈಶ್ವರಪ್ಪ ಈಗಾಗಲೇ ತಮ್ಮ ಉಮೇದುದಾರಿಕೆಯನ್ನು ಸಾಬೀತುಪಡಿಸುವ ಸಲುವಾಗಿ ಮೂರು ಸಲ ನಾಮಪತ್ರ ಸಲ್ಲಿಸಿದ್ದಾರೆ.
ಕೆಎಸ್ ಈಶ್ವರಪ್ಪನವರ ನಾಮಪತ್ರ ಹಿಂಪಡೆಯಲು ಫೈನಲ್ ವಾರ್ನಿಂಗ್ ನೀಡಿದ ಹೈಕಮಾಂಡ್ :
ಈ ಬಗ್ಗೆ ಹಿಂದೆಯೇ ಪತ್ರಿಕೆ ಸುದ್ದಿ ಮಾಡಿತ್ತು ಹೈಕಮಾಂಡ್ ಕೆಎಸ್ ಈಶ್ವರಪ್ಪನವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಸಾಧ್ಯತೆ ಇದೆ ಎಂದು ಸುದ್ದಿ ಬಿತ್ತರಿಸಿತ್ತು ಇದರ ಬೆನ್ನಲ್ಲೇ ಈಗ ಇದೇ ತಿಂಗಳ 22 ರ ವರೆಗೂ ಗಡವು ನೀಡಿದ್ದ ಹೈಕಮಾಂಡ್ ಈಶ್ವರಪ್ಪನವರು ನಾಮಪತ್ರ ಸಲ್ಲಿಕೆಯನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡುವ ದಿಟ್ಟ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗುತ್ತಿದೆ.
ಈಶ್ವರಪ್ಪನವರ ಮುಂದಿನ ನಡೆ ಏನು..?
ಒಂದು ವೇಳೆ ಬಿಜೆಪಿ ಪಕ್ಷದಿಂದ ಈಶ್ವರಪ್ಪನವರನ್ನು ಉಚ್ಚಾಟನೆ ಮಾಡಿದರೆ ಆ ನಂತರದ ಬೆಳವಣಿಗೆಯಲ್ಲಿ ಈಶ್ವರಪ್ಪನವರು ಯಾವ ರೀತಿ ಬಿಜೆಪಿ ಪಕ್ಷದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೂ ಅಥವಾ ಈಗ ನಡೆದುಕೊಂಡಂತೆ ಮುಂದೆ ಕೂಡ ಬಿಜೆಪಿ ಪರ ಇರುತ್ತೇನೆ ಯಡಿಯೂರಪ್ಪ ಕುಟುಂಬದ ವಿರುದ್ಧ ನನ್ನ ಹೋರಾಟ ಎನ್ನುವ ನಿಲುವನ್ನು ಮುಂದುವರಿಸುತ್ತಾರೂ ಕಾದು ನೋಡಬೇಕು.