
ಶಿವಮೊಗ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಬಿಗ್ ಫೈಟ್ ನಡೆಯುತ್ತಿದ್ದು ಮೋದಿ ಭಾವಚಿತ್ರ ಬಳಸಲು ಈಶ್ವರಪ್ಪ ಯಾರು ಮೋದಿ ಬಿಜೆಪಿಯಿಂದ ಪ್ರಧಾನಿಯಾಗಿರುವುದು ಅವರ ಭಾವಚಿತ್ರ ಬಳಸಲು ಬಿಜೆಪಿಗೆ ಮಾತ್ರ ಅವಕಾಶವಿದೆ ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಗೆ ಬೆಂಬಲಿಸದೆ ಚುನಾವಣೆಯಲ್ಲಿ ನಿಂತಿರುವುದರಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಈಶ್ವರಪ್ಪ ಬಳಸಲು ಅವಕಾಶವಿಲ್ಲ ಆದ್ದರಿಂದ ನ್ಯಾಯಾಲಯ ಈಶ್ವರಪ್ಪನವರಿಗೆ ಮೋದಿ ಭಾವಚಿತ್ರ ಬಳಸದಂತೆ ನಿರ್ಬಂಧ ಹೇರಬೇಕು ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ರವರು ನ್ಯಾಯಾಲಯದ ಮರೆಹೋಗಿದ್ದಾರೆ.
ಖುದ್ದು ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ..!
ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ ಮೋದಿ ಭಾವಚಿತ್ರ ತೆಗೆಯುವಂತೆ ಮನವಿ ಸಲ್ಲಿಸಿರುವ ಜಿಲ್ಲಾಧ್ಯಕ್ಷರ ಮನವಿಗೆ ನ್ಯಾಯಾಲಯ ಈಶ್ವರಪ್ಪನವರ ಉತ್ತರ ಕೇಳಿದ್ದಕ್ಕೆ ಈಶ್ವರಪ್ಪ ಸಮಯ ಅವಕಾಶ ಕೇಳಿದ್ದಾರೆ.
ಇದೇ ತಿಂಗಳ 18ಕ್ಕೆ ದಿನಾಂಕ ನಿಗದಿ ಪಡಿಸಿದ ನ್ಯಾಯಾಲಯ :
ಇದೇ ತಿಂಗಳ 18ನೇ ತಾರೀಖು ನ್ಯಾಯಲಯಕ್ಕೆ ತಮ್ಮ ಉತ್ತರ ತಿಳಿಸುವಂತೆ ನ್ಯಾಯಾಲಯ ಈಶ್ವರಪ್ಪನವರಿಗೆ ಸಮಯ ಅವಕಾಶ ನೀಡಿದೆ.
ಮುಂದೇನು..?
ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಮೋದಿ ಭಾವಚಿತ್ರ ಹಾಕಿಕೊಳ್ಳಲು ಕಾನೂನಿನಲ್ಲಿ ಈಶ್ವರಪ್ಪನವರಿಗೆ ಅವಕಾಶವಿದೆಯಾ..? ಈಶ್ವರಪ್ಪನವರು ಮೋದಿ ಭಾವಚಿತ್ರವನ್ನು ಹಾಕಿಕೊಂಡು ತಮ್ಮ ಚುನಾವಣಾ ಪ್ರಚಾರ ಮುಂದುವರಿಸಬಹುದಾ..? ನ್ಯಾಯಾಲಯ ಇದಕ್ಕೆ ಸಮ್ಮತಿ ನೀಡುತ್ತಾ..?! ಅಥವಾ ಬಿಜೆಪಿ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರು ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿ ಈಶ್ವರಪ್ಪನವರು ಮೋದಿ ಭಾವಚಿತ್ರವನ್ನು ಹಾಕಿಕೊಳ್ಳದಂತೆ ಆದೇಶ ನೀಡುತ್ತಾ..? ಎನ್ನುವ ಕುತೂಹಲ ಕೆರಳಿಸಿದ್ದು ಇದೇ ತಿಂಗಳ 18ನೇ ತಾರೀಖು ಪ್ರಕರಣ ಒಂದು ಹಂತದ ತಿರುವು ಪಡೆಯುವ ಸಾಧ್ಯತೆ ಇದೆ.