
ಇತ್ತೀಚಿಗೆ ಕಳ್ಳರು ಪೊಲೀಸರ ಮನೆಯಲ್ಲೇ ಕಳ್ಳತನ ಮಾಡಲು ಶುರು ಮಾಡಿದ್ದಾರೆ ಇದಕ್ಕೆ ತಾಜಾ ಉದಾಹರಣೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಶಾ ಎನ್ನುವವರ ಮನೆಯಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.
ಕಳ್ಳರು ಬಂಗಾರ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಜಗಳೂರು ಪಟ್ಟಣದ ಹೂರವಲಯದ ಮುದ್ದಪ್ಪ ಬಡಾವಣೆಯಲ್ಲಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಶಾ ಅವರ ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯ ಆಲ್ಮೆರಾ ಒಡೆದು 5,79 ಲಕ್ಷ ಮೌಲ್ಯದ 116 ಗ್ರಾಂ ಬಂಗಾರದ ಆಭರಣ ಹಾಗೂ 10,000 ಮೊತ್ತದ 130 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಮಾಡಿ ಪರಾರಿಯಾಗಿದ್ದಾರೆ.
ಆಶಾ ಅವರು ದಾವಣಗೆರೆಗೆ ಕರ್ತವ್ಯ ನಿಮಿತ್ತ ತೆರಳಿದ್ದಾಗ ಈ ಘಟನೆ ನಡೆದಿದ್ದು ಆಶಾ ಅವರ ತಾಯಿ ಜಯಮ್ಮ ಹುಟ್ಟೂರಿಗೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು ಆಶಾ ಅವರು ತಮ್ಮ ಕಾರ್ಯವನ್ನು ಮುಗಿಸಿ ಶನಿವಾರ ಬೆಳಗ್ಗೆ ದಾವಣಗೆರೆಯಿಂದ ಹಿಂದಿರುಗಿ ಮನೆಗೆ ಬಂದಾಗ ಅವರಿಗೆ ಕಳುವಾಗಿರುವ ವಿಷಯ ತಿಳಿದಿದೆ ನಂತರ ದೂರು ದಾಖಲಾಗಿದೆ.