
“ಬ್ರ್ಯಾಂಡೆಡ್ ಲವ್” ಇದು ಹೊಸ ಪ್ರತಿಭೆಗಳು ಸೇರಿ ತಯಾರಿಸಿರುವ ಹೊಸ ಕಿರುಚಿತ್ರ. ಈ ಹಿಂದೆ ‘ಮಿಸ್ಟರ್ ಜೈ’ ಎನ್ನುವ ಕಿರುಚಿತ್ರ ನಿರ್ದೇಶನ ಮಾಡಿರುವ , ಸಿದ್ದು ನಟಿಸಿ ನಿರ್ದೇಶಿಸಿದ ಕಿರುಚಿತ್ರ “ಬ್ರ್ಯಾಂಡೆಡ್ ಲವ್”
ಇಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹೆತ್ತ ತಂದೆ ಮಗನ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕನಸುಗಳನ್ನು, ಮಗನ ಆಸೆಗಳ ಮೇಲೆ ಹೇರಿ, ಪುತ್ರನ ಚಿಗುರುಗನಸನ್ನು ಹೊಸಕಿ ಹಾಕುತ್ತಾನೆ. ಆದರೆ ಬೆಳೆದು ದೊಡ್ಡವನಾದ ಮಗನು, ತಂದೆಯ ಮಮತೆ ಅರಿಯದೆ ವಯೋಸಹಜ ಪ್ರೇಮಕ್ಕೆ ವ್ಯಾಮೋಹಿತನಾಗಿ ತನ್ನ ತಂದೆಯ ಅಪೇಕ್ಷೆಗಳನ್ನು ಗಾಳಿಗೆ ತೂರಿ, ತನ್ನಾಸೆಯಂತೆ ಬದುಕಲು ಬಿಡದ ತಂದೆಯನ್ನು ವಿರೋಧಿಸಿ ನಡೆದು, ಮುಂದೊಂದು ದಿನ ಪ್ರೇಯಸಿಯ ಪ್ರೇಮ ವೈಫಲ್ಯದಿಂದ, ತಂದೆಯ ಅನುರಾಗ ಹಂಬಲಿಸಿ ಬಂದಾಗ, ಪ್ರೀತಿ ನೀಡೋ ತಂದೆಯೇ ಮರೆಯಾಗಿರುತ್ತಾನೆ. ಕೇವಲ ಸ್ಟೈಲ್, ಶೋಕಿ, ಎಂದು ನಡೆದು ಅಮೂಲ್ಯವಾದ ಸಮಯ ಕಳೆದ ಮಗನಿಗೆ, ಕಾಲವು ತನ್ನ ಮೌಲ್ಯವನ್ನು ತಿಳಿಸಿ. ಅವನಿಗೆ ಬೇಕಾದ ನಿಜವಾದ ಪ್ರೀತಿಯನ್ನು ಒದಗಿಸಿ, ಆ ಪ್ರೀತಿಗೆ ತನ್ನದೇ ಆದ ನೈತಿಕ ಮೌಲ್ಯಗಳನ್ನು, ಪವಿತ್ರತೆಯನ್ನು ಹಾಗೂ ನಿಜವಾದ ಜೀವನಾನುಭವವನ್ನು ನೀಡುತ್ತದೆ. ಇಲ್ಲಿ ಸಿದ್ದು ಅವರ ಕಥೆ-ಚಿತ್ರಕತೆ-ಸಂಭಾಷಣೆ, ಸಾಹಿತ್ಯ, ನಿರ್ದೇಶನ ಅದ್ಭುತವಾಗಿ ಮೂಡಿ ಬಂದಿದೆ. ಇಂದಿನ ಯುವಜನಾಂಗಕ್ಕೆ ಅನಿವಾರ್ಯವಾದ ಹಾಗೂ ಪರಿಣಾಮಕಾರಿಯಾದ ಸಂದೇಶವನ್ನು ಈ ಕಿರುಚಿತ್ರ ನೀಡಿದೆ. ಈ ಚಿತ್ರ ಯುವ ಪೀಳಿಗೆ ಅಷ್ಟೇ ಅಲ್ಲ, ಎಲ್ಲ ಜನ-ಸಾಮಾನ್ಯರ ಮನಸನ್ನು ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಎಚ್ ಎಮ್ ಸಿದ್ದು ನಾಯಕನಟನಾಗಿ ಅಭಿನಯಿಸುವುದರ ಮೂಲಕ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ತಾರಾಬಳಗದಲ್ಲಿ ನಾಯಕಿ ನಟಿಯಾಗಿ ಸುಪ್ರೀತಾ, ತಂದೆ ಪಾತ್ರದಲ್ಲಿ ಮೈಕೋ ಮಂಜು, ತಂದೆಯ ಸ್ನೇಹಿತರ ಪಾತ್ರದಲ್ಲಿ ಹುಬ್ಬಳ್ಳಿಯ ಜನಪ್ರಿಯ ಕಲಾವಿದರಾದ ಸಿದ್ಧರಾಜ್ ಕಲ್ಯಾಣಕರ್ , ವೆಂಕಟೇಶ ರಾವ್, ಸ್ನೇಹಿತೆಯ ಪಾತ್ರದಲ್ಲಿ ಚಿತ್ರಾ, ಸ್ನೇಹಿತನ ಪಾತ್ರದಲ್ಲಿ ಉಮಾಪತಿ, ಶಿವು ಸಿರಿಗೆರೆ, ರಮೇಶ್ ಭಟ್, ದೀಪು ಸೋಮರಾಜ್, ಕಲಾ ಯೋಗಿ, ಸಂತೋಷ್ ಕುಲಕರ್ಣಿ, ಮೋಹನ್ ಎಂ.ಎಸ್ , ಜಿತೇಶ್ ಡಿ ಗೌಡ, ಅಭಿಷೇಕ್ ಎಂ ಮುರಡ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.

ಸಿನಿ ಪ್ಯಾಲೇಸ್ ಸಂಸ್ಥೆಯ ಅಡಿಯಲ್ಲಿ, ಮನು ಬಿ.ಕೆ ಅವರ ಛಾಯಾಗ್ರಹಣ, ಅಕ್ಷಯ್, ರಿಷಬ್ ಅವರ ಸಂಗೀತ, ಭರಾಟೆ ಖ್ಯಾತಿಯ ಪ್ರಮೋದ್ ಸೋಮರಾಜು ಅವರ ಸಂಕಲನ, ವಿಎಫ್ಎಕ್ಸ್ ದರ್ಶನ್ ಶೆಟ್ಟಿ, ಕಲರಿಸ್ಟ್ ಅಮೀತ್, ಎಸ್ಎಫ್ಎಕ್ಸ್ ಆಹೋರಾತ್ರ ಸ್ಟುಡಿಯೋಸ್, ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ಅರವಿಂದ್ ಮೆನನ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಟಿ ಮಲಗೊಂಡ , ನಿರ್ದೇಶನ ವಿಭಾಗದಲ್ಲಿ ಸಂದೀಪ್ ಬಿ.ಯು, ಆನಂದ್ ಕಾಂತಿ, ಪ್ರಶಾಂತ್, ಮೇಕಪ್ ಅನೀಲ್ ಹಾಗೂ ಅರುಣ್, ಮುಂತಾದ ತಾಂತ್ರಿಕ ಬಳಗ ಈ ಕಿರುಚಿತ್ರಕ್ಕಿದೆ. ಈ “ಬ್ರಾಂಡೆಡ್ ಲವ್” ಕಿರುಚಿತ್ರಕ್ಕೆ ಪತ್ರಿಕೆಯ ಬಳಗ,ಮಾಧ್ಯಮದವರು,ಹಿರಿಕಿರಿಯರ ಪ್ರೋತ್ಸಾಹ ದೊರೆಯಲಿ ಎಂಬುದು ಕಿರುಚಿತ್ರ ತಂಡದ ಆಶಯ.
ಮಾಧ್ಯಮ ಮಾಹಿತಿ ಡಾ/ ಪ್ರಭು ಗಂಜಿಹಾಳ….
ಪತ್ರಿಕೆಗೆ ವರದಿಗಾರರಾಗಲು ಸಂಪರ್ಕಿಸಿ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…