
ಶಿವಮೊಗ್ಗ: ನಗರದಲ್ಲಿ ತಮಿಳುನಾಡಿನ ಬಿಜೆಪಿಯ ರಾಜ್ಯಧ್ಯಕ್ಷರಾಗಿರುವ ಅಣ್ಣಮಲೈ ಆಪರೇಷನ್ ಕಮಲ ನಡೆಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಕಾಂತೇಶ್‌ನ ಸ್ನೇಹಿತ ಈಶ್ವರಪ್ಪನವರ ಪಟ್ಟ ಶಿಷ್ಯ ಈಶ್ವರಪ್ಪನವರು ಬಿಜೆಪಿಯಿಂದ ರೆಬೆಲ್ ಆಗಿ ಪಕ್ಷೇತರವಾಗಿ ಸ್ಪರ್ಧಿಸಿದ್ದಾಗ ನಾನು ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಹಾಗೂ ಓಡಾಡಿದ್ದ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದ ಭೂಪಾಲ್ ಅವರನ್ನು ಅಣ್ಣಮಲೈ ಅವರು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಎಳೆ ತಂದಿದ್ದಾರೆ. ಇದಕ್ಕೆ ಈಶ್ವರಪ್ಪನವರ ಪಟ್ಟ ಶಿಷ್ಯ ಬಿಜೆಪಿ ನಗರದ ಶಾಸಕ ಚನ್ನಬಸಪ್ಪ ಚೆನ್ನಿ ಅವರು ಸಾತ್ ನೀಡಿದ್ದಾರೆ. ಒಟ್ಟಿನಲ್ಲಿ ಇಬ್ಬರು ಶಿಷ್ಯಂದರು ಈಶ್ವರಪ್ಪನವರ ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ ಎನ್ನಬಹುದು ಬಿಜೆಪಿಗೆ ಬಂದಿರುವ ಭೂಪಾಲ್ ಬಿಜೆಪಿಗೆ ಬೆಂಬಲಿಸುತ್ತಾರಾ ಅಥವಾ ಬಿಜೆಪಿಯಲ್ಲಿದ್ದುಕೊಂಡೆ ಈಶ್ವರಪ್ಪನವರಿಗೆ ಬೆಂಬಲ ನೀಡುತ್ತಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಎನ್ನುವುದು ಒಂದಷ್ಟು ಜನರ ಗೊಂದಲದ ಅಭಿಪ್ರಾಯ…
