
ಮಂಡ್ಯ : ಕೆರಗೋಡು ಹನುಮಧ್ವಜ ಸ್ಥಂಭ ಪ್ರಕರಣ ಇದೀಗ ಬೇರೆ ತಿರುವು ಪಡೆದುಕೊಂಡಿದ್ದು ಹನುಮಧ್ವಜ ಸ್ಥಂಭ ಹೋರಾಟಗಾರರ ವಿರುದ್ದ ರೌಡಿ ಶೀಟರ್ ಅಸ್ತ್ರವನ್ನು ಸರ್ಕಾರ ಪ್ರಯೋಗಿಸಲು ಮುಂದಾಗಿದ್ದು ಹನುಮಧ್ವಜ ಸ್ಥಂಭಕ್ಕಾಗಿ ಹೋರಾಟ ನಡೆಸಿದ್ದ ಮೂವರಿಗೆ ನೋಟಿಸ್ ನೀಡಲಾಗಿದ್ದು.
ಮಂಡ್ಯದ ಕೆರಗೋಡು ಪೊಲೀಸರಿಂದ ರೌಡಿ ಶೀಟರ್ ತೆರೆಯುವ ನೋಟಿಸ್ ಜಾರಿ ಮಾಡಲಾಗಿದೆ.
ಬಾಲಕೃಷ್ಣ @ ಚಿಕ್ಕಬಳ್ಳಿ ಬಾಲು, ಕಾರ್ತಿಕ್ ಮತ್ತು ಹರೀಶ್ ಗೆ ನೋಟೀಸ್ ನೀಡಲಾಗಿದೆ.
ಕೆರಗೋಡು ಹನುಮಧ್ವಜ ಸ್ಥಂಭಕ್ಕಾಗಿ ಹೋರಾಟ ನಡೆಸಿದ್ದ ಈ ಮೂವರು ಬಾರಿ ಹೋರಾಟ ನಡೆಸಿದ್ದರು.
ದೇಶಾಧ್ಯಂತ ಬಾರೀ ಸಂಚಲನ ಉಂಟುಮಾಡಿದ್ದ ಪ್ರಕರಣ ಇದಾಗಿತ್ತು.
ಹನುಮಧ್ವಜ ಹೋರಾಟದ ಸಂದರ್ಭ ಐಪಿಸಿ ಸೆಕ್ಷನ್ 143, 341,353,149 ರ ಅಡಿಯಲ್ಲಿ ಇವರ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು.
ಹನುಮಧ್ವಜ ಹೋರಾಟದ ಸಂದರ್ಭ ಅನ್ಯಕೋಮಿನವರನ್ನ ಹೆದರಿಸುವುದು, ಬೆದರಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಕೊಟ್ಟು ನೋಟಿಸ್ ಜಾರಿಗೊಳಿಸಿ 7 ದಿನಗಳ ಒಳಗೆ ಕೆರಗೋಡು ಪೊಲೀಸ್ ಠಾಣೆಗೆ ಹಾಜರಾಗಿ ನೋಟಿಸ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.
ನೋಟಿಸ್ ತಲುಪಿದ ನಂತರ ಹನುಮಧ್ವಜ ಹೋರಾಟಗಾರರ ಆಕ್ರೋಶ ಹೊರಹಾಕಿದ್ದು
ಹಿಂದು ಕಾರ್ಯಕರ್ತರನ್ನ ಹತ್ತಿಕ್ಕಲಾಗ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.