
ತೀರ್ಥಹಳ್ಳಿ : ಇಂದು ಬೆಳಿಗ್ಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜೆಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಎ ಜಿ ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್ ನೇತೃತ್ವದಲ್ಲಿ ಓಮಿನಿ ಕಾರ್ ನಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾ ಸೊಪ್ಪನ್ನು ಮಾರಾಟ ಮಾಡುವ ಸಲುವಾಗಿ ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಅಶ್ವತ್ ಗೌಡ ಜೆ
ಪಿ ಐ ತೀರ್ಥಹಳ್ಳಿ ಪೊಲೀಸ್ ಠಾಣೆ, ಶಿವನಗೌಡ ಪಿಎಸ್ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಆರೋಪಿಗಳಾದ 1) ಮಹಮ್ಮದ್ ಬೇಗ್, 38 ವರ್ಷ, ಆಚಾಪುರ, ಆನಂದಪುರ, ಸಾಗರ ತಾ, ಮತ್ತು 2) ಗಜೇಂದ್ರ @ ಗಜ, 37 ವರ್ಷ, ಕೆಂಚನಾಳ, ಹೊಸನಗರ,ಇವರನ್ನು ದಸ್ತಗಿರಿ ಮಾಡಿ
ಆರೋಪಗಳಿಂದ ಅಂದಾಜು ಮೌಲ್ಯ 1,60,000/- ರೂ ಗಳ 2 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ ಮತ್ತು ಅಂದಾಜು ಮೌಲ್ಯ 2,50,000 ರೂ ಗಳ ಓಮಿನಿ ಕಾರನ್ನು ವಶಕ್ಕೆ ಪಡೆದು
ಕೊಂಡಿದ್ದು
ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0127/2024 ಕಲಂ 20(b)(ii)(B) ಎನ್ ಡಿ ಪಿ ಎಸ್ ಖಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿರುತ್ತಾರೆ.