
ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ ದಾವಣಗೆರೆಯ ಶಾಸಕ ಮಾಜಿ ಸಚಿವರು ಆದ ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ದಿಡೀರನೆ ಏರುಪೇರು ಕಂಡಿದ್ದು ಕಪದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಇವರದೇ ಸಂಸ್ಥೆಯಾದ ಎಸ್ ಎಸ್ ಹಾಸ್ಪಿಟಲ್ ನ ಐಸಿಯು ತೀವ್ರನಿಗಾ ಘಟಕದಲ್ಲಿ ಸೇರಿಸಲಾಗಿದೆ.
ಸುಮಾರು 92 ವರ್ಷ ವಯಸ್ಸಿನ ಶಾಮನೂರ್ ಶಿವಶಂಕರಪ್ಪ ಸಕ್ರಿಯ ರಾಜಕಾರಣದಲ್ಲಿ ಈಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ವಯೋ ಸಹಜ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಶಾಮನೂರ್ ಶಿವಶಂಕರಪ್ಪ ಅವರನ್ನು ಇಂದು ದಿಡೀರನೆ ಆಸ್ಪತ್ರೆಗೆ ಸೇರಿಸಲಾಗಿದೆ.