
ತೀರ್ಥಹಳ್ಳಿ: ಆಯನೂರು ತೀರ್ಥಹಳ್ಳಿ ರಸ್ತೆ ಮಾರ್ಗದ ತಮಡಿಹಳ್ಳಿಯ ಗೇಟ್ ಮುಂದೆ ಇರುವ ಸಂಪಿಗೆ ಹಳ್ಳದ ಹತ್ತಿರ ಸಂಜೆ ಸುಮಾರು ಆರು ಮೂವತ್ತೈದರ ಹೊತ್ತಿಗೆ ಗಂಡು ಜಿಂಕೆ ಅಪಘಾತದಿಂದ ಸಾವನ್ನಪ್ಪಿದ್ದು ಅಪರಿಚಿತ ವಾಹನವು ಜಿಂಕೆಗೆ ಗುದ್ಧಿ ಹೋಗಿದೆ ಎನ್ನಲಾಗುತ್ತಿದೆ.
ಆ ವಾಹನ ಯಾವುದು ಎನ್ನುವ ಹುಡುಗಾಟದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದಾರೆ ಘಟನೆ ನಡೆದ ಸ್ಥಳಕ್ಕೆ ರೇಂಜರ್ ವಿಜಯಕುಮಾರ್ ಹಾಗೂ ಗಾರ್ಡ್ ಸರಸ್ವತಿ ಹಾಗೂ ಸಿಬ್ಬಂದಿಗಳು ಮಾಹಿತಿಯ ಮೇರೆಗೆ ಆಗಮಿಸಿದ್ದು ಸಾವನ್ನಪ್ಪಿರುವ ಜಿಂಕೆಯನ್ನು ತೆಗೆದುಕೊಂಡು ಹೋಗಿದ್ದಾರೆ.
ಮಾರುತಿ ಬ್ರಿಜಾ ಕಾರು ಗುದ್ದಿರುವ ಶಂಕೆ ವ್ಯಕ್ತವಾಗುತ್ತಿದೆ.
ತಮಡಿಹಳ್ಳಿ ಬಳಿ ಇರುವ ಗೇಟಿನ ತಪಾಸಣೆ ನಡೆಸಿದರೆ ಮಾಹಿತಿ ಲಭ್ಯವಾಗಬಹುದು ಆದರೆ ಸರಿಯಾದ ಗೇಟಿನ ವ್ಯವಸ್ಥೆ ಇಲ್ಲ ಅಲ್ಲಿ ಸಿಬ್ಬಂದಿಗಳ ಸರಿಯಾದ ತಪಾಸಣೆ ನಡೆಸುವುದಿಲ್ಲ ಹಾಗೂ ಸಿಸಿ ಕ್ಯಾಮೆರಾದ ವ್ಯವಸ್ಥೆ ಕೂಡ ಇರುವುದಿಲ್ಲ ಹಾಗಾಗಿ ಅಲ್ಲಿ ಮಾಹಿತಿ ಲಭ್ಯವಾಗುವುದು ಕಷ್ಟ.
ಅನಿರೀಕ್ಷಿತವಾಗಿ ವಾಹನಕ್ಕೆ ಈ ರೀತಿ ಕಾಡುಪ್ರಾಣಿಗಳು ಅಡ್ಡ ಬಂದಾಗ ಅಪಘಾತವಾದರೆ ಏನು ಮಾಡಲು ಆಗುವುದಿಲ್ಲ ಆದರೆ ಕನಿಷ್ಠ ಸೌಜನ್ಯಕ್ಕಾದರೂ ಅಪಘಾತವಾದ ನಂತರ ನಿಲ್ಲಿಸಿ ನೋಡುವ ಔದಾರ್ಯ ಮೆರೆಯಬಹುದಿತ್ತು ವಾಹನ ಮಾಲೀಕರು ಅದು ಈ ಪ್ರಕರಣದಲ್ಲಿ ನಡೆದಿಲ್ಲ.