
ಶಿವಮೊಗ್ಗ:ಇತ್ತೀಚಿಗೆ ನಗರದ ಹೊಸಮನೆಯ ಮೂರನೇ ಕ್ರಾಸಿನಲ್ಲಿ ತಡರಾತ್ರಿ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಗಳನ್ನು ಒಡೆದು ದಾಂದಲೆ ನಡೆಸಿದ ಪುಂಡರನ್ನು ಶಿವಮೊಗ್ಗ ಪೊಲೀಸರು ಖಡಕ್ ಕಾರ್ಯಾಚರಣೆ ನಡೆಸುವುದರ ಮೂಲಕ ಸೆರೆಹಿಡಿದಿದ್ದು ಈ ಕೃತ್ಯಗಳಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸುವುದರ ಶಿವಮೊಗ್ಗದಲ್ಲಿ ಈ ತರಹದ ದಾಂದಲೆ ನಡೆಸುವವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ ಬಾಲ ಬಿಚ್ಚಿದ್ರೆ ಹುಷಾರ್ ಎನ್ನುವ ಸಂದೇಶವನ್ನು ಶಿವಮೊಗ್ಗ ಪೊಲೀಸರು ನೀಡಿದ್ದಾರೆ.
ಇನ್ನು ಮುಂದೆ ಈ ತರಹದ ಕೃತ್ಯಗಳಲ್ಲಿ ಭಾಗಿಯಾದರೆ ಅಂತವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದು ಇದು ಇಂಥ ಕೃತ್ಯಗಳನ್ನು ನಡೆಸುವ ಪುಂಡ ಪೋಕರಿಗಳಿಗೆ ಒಂದು ಸಂದೇಶವಾಗಿದೆ.
ಇನ್ನು ಮುಂದೆಯಾದರೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮುನ್ನ ಕೂಂಚ ಯೋಚಿಸಿದರೆ ಒಳಿತು ಇಲ್ಲವಾದರೆ ಜೈಲಿನಲ್ಲಿ ಮುದ್ದೆ ಊಟ ಗ್ಯಾರಂಟಿ ಎನ್ನುವ ಸಂದೇಶವನ್ನು ಪೊಲೀಸರು ನೀಡಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಕ್ರಮವಾಗಿ,
1) ನೀರಜ್ @ಬಿಕ್ಲಾ 21 ವರ್ಷ ಸುಬ್ಬಯ್ಯ ಆಸ್ಪತ್ರೆಯ ಪಕ್ಕ ಹೊಸಮನೆ ಶಿವಮೊಗ್ಗ ನಗರ.
2) ಮಣಿಕಂಠ ಎನ್ @ಮಾರವಾಡಿ ಮಣಿ 20 ವರ್ಷ ಕಾಮಾಕ್ಷಿ ಬೀದಿ ಶಿವಮೊಗ್ಗ ನಗರ.
3) ಗಗನ್ ಇ@ಕಪಾಲಿ ಬಿನ್ ಈಶ್ವರ 19 ವರ್ಷ ಹೊಸ ಮನೆ ಶಿವಮೊಗ್ಗ ನಗರ.
4) ದರ್ಶನ್ ಎಸ್ ದಾಸ @20ವರ್ಷ ಕಾಮಾಕ್ಷಿ ಬೀದಿ ಶಿವಮೊಗ್ಗ ನಗರ.
5) ರಾಕೇಶ್ @ಅಪ್ಪು 20 ವರ್ಷ ಜಟ್ ಪಟ್ ನ ಗರ ವಿನೋಬನಗರ ನಗರ ಶಿವಮೊಗ್ಗ . ಶಿವಮೊಗ್ಗ.
6) ಶ್ರೀನಿವಾಸ್ @ಅಪ್ರಿಲ್ಲ ಸೀನಾ 24 ವರ್ಷ ಮೇದಾರ್ ಕೇರಿ ವಿನೋಬನಗರ.
ಮೇಲ್ಕಂಡ ಈ ಆರು ಜನ ಆರೋಪಿಗಳನ್ನು ಹಿಡಿಯಲು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್ ಕುಮಾರ್ ಬೂಮ್ ರೆಡ್ಡಿ ಹಾಗೂ ಕಾರಿಯಪ್ಪ ಎ ಜಿ ಅವರ ಮಾರ್ಗದರ್ಶನದಲ್ಲಿ ಬಾಬು ಅಂಜನಪ್ಪ ಡಿವೈಎಸ್ಪಿ ಹಾಗು ಸುರೇಶ್ ಡಿವೈಎಸ್ಪಿ ರವಿ ಪಾಟೀಲ್ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿ ಐ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿರುತ್ತಾರೆ.
ಈ ತಂಡ ಯಶಸ್ವಿಯಾಗಿ ಬೆನ್ನತ್ತಿ ಕಾರ್ಯನಿರ್ವಹಿಸಿ ಆರು ಜನ ಆರೋಪಿಗಳನ್ನು ಸದೆ ಬಡಿದು ಘನ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಘನ ನ್ಯಾಯಾಲಯ ಆರು ಜನರನ್ನು ಜೈಲಿಗೆ ಕಳಿಸಿದೆ.
ಈ ತನಿಖಾ ತಂಡದ ಕಾರ್ಯವನ್ನು ಮೆಚ್ಚಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ಅವರು ಇಡೀ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿ ಮುಂದೆ ಈ ತರದ ಕೃತ್ಯಗಳನ್ನು ನಡೆಸಿದರೆ ಅಂತವರಿಗೆ ಕಠಿಣ ಕ್ರಮ ಜರುಗಿಸಲಾಗುವುದು ಎನ್ನುವ ಖಡಕ್ ಸಂದೇಶವನ್ನು ನೀಡಿದ್ದಾರೆ.
ರಘುರಾಜ್ ಹೆಚ್. ಕೆ..9449553305.