Saturday, May 3, 2025
Google search engine
Homeರಾಜ್ಯವಿ ಎನ್ ಅಶ್ವಥ್ ಅವರ ನಾಟಕದ ವಿಮರ್ಶೆ ನಿರ್ದೇಶಕನ ಪರಿಶ್ರಮದಲ್ಲಿ ಮೂಡಿ ಬಂದ ಒಂದು ರಂಗಕೃತಿ..!

ವಿ ಎನ್ ಅಶ್ವಥ್ ಅವರ ನಾಟಕದ ವಿಮರ್ಶೆ ನಿರ್ದೇಶಕನ ಪರಿಶ್ರಮದಲ್ಲಿ ಮೂಡಿ ಬಂದ ಒಂದು ರಂಗಕೃತಿ..!

ನಿರ್ದೇಶಕನ ಪರಿಶ್ರಮದಲ್ಲಿ ಮೂಡಿ ಬಂದ ಒಂದು ರಂಗಕೃತಿ ಸಾರ್ಥಕಗೊಳ್ಳುವುದು ಅದು ಪ್ರೇಕ್ಷಕನ ಮುಂದೆ ಯಶಸ್ವಿಯಾಗಿ ಪ್ರಯೋಗಗೊಂಡಾಗ ಮಾತ್ರ. ಅಂತಹ ಒಂದು ಪ್ರಯೋಗ ದಿನಾಂಕ 14:06: 2024 ರಂದು “ಆದಿಶಕ್ತಿ ರಂಗ ಕಲಾ ಸಂಸ್ಥೆ” ತಂಡವು ಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ ಅವರ ನಾಟಕಗಳನ್ನು ಆಧರಿಸಿ ಶ್ರೀ ಸಂದೀಪ್ ಭಟ್ಟಾಚಾರ್ಯ (ಎನ್ ಎಸ್ ಡಿ) ಅವರ ಪರಿಕಲ್ಪನೆಯಲ್ಲಿ ರಚಿಸಿದ ನಾಟಕ “ದಿ ರೈಸಿಂಗ್ ಆಫ್ ಡೆತ್” ಹಿಂದಿ ಭಾಷೆಯಲ್ಲಿದ್ದ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದವರು ಶ್ರೀ “ರಂಗನಾಥ್ ಮಾವಿನಕೆರೆ”ಯವರು ನಿಜಕ್ಕೂ ಒಂದು ಅದ್ಭುತ ಪ್ರಯೋಗ. ಸಾಕಷ್ಟು ಶ್ರದ್ದೆ ತಾಳ್ಮೆ ಆಸಕ್ತಿವಹಿಸಿ, ನಟರನ್ನು ತರಬೇತಿಗೊಳಿಸಿ, ಯಶಸ್ವಿಯಾಗಿ ಮೂಡಿಸುವಲ್ಲಿ ರಂಗನಾಥ್ ಅವರ ಸೃಜನಶೀಲತೆ ಯಶಸ್ವಿಯಾಗಿದೆ.

ನಾಟಕದ ಸಂಭಾಷಣೆ ಸೊಗಸಾಗಿದೆ. ಈ ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸಂಭಾಷಣೆ ಪ್ರಧಾನವಾದ ಈ ನಾಟಕದಲ್ಲಿ ಒಥೆಲೋ ಪಾತ್ರ ನಿರ್ವಹಿಸಿದ ರಾಕೇಶ್ ಎಸ್ ಪಿ ಗೌಡ ಅವರು ಸತ್ವಭರಿತ ಸಂಭಾಷಣ ನಿರ್ವಹಣೆ ಶೈಲಿ ಹಾವಭಾವಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಉಳಿದಂತೆ ಹ್ಯಾಮ್ಲೆಟ್ ಪಾತ್ರದಲ್ಲಿ ಜೀವನ್ ರಾಜ್, ಲೇಡಿ ಮ್ಯಾಕ್ ಬೆತ್ ಪಾತ್ರದಲ್ಲಿ ಸುಗುಣ, ಮ್ಯಾಕ್ಬತ್ ಪಾತ್ರದಲ್ಲಿ, ತೇಜಸ್ ಗೌಡ, ಲಿಯರ್ ಪಾತ್ರದಲ್ಲಿ ಶಿವಕುಮಾರ್ ಎಸ್ ,ಕ್ಯಾಸಿಯೋ ಪಾತ್ರದಲ್ಲಿ ಯಶ್ವರ್ಧನ್, ಹ್ಯಾಮ್ಲೆಟ್ ತಾಯಿಯ ಪಾತ್ರದಲ್ಲಿ ವಿಜಯಲಕ್ಷ್ಮಿ ಮಂಡ್ಯ, ಡೆಸ್ಟಿಮೋನ ಪಾತ್ರಧಾರಿ ಅನುಷಾ, ಒಪಿಲಿಯ ಪಾತ್ರಧಾರಿ ನೇಹಾ, ಭೂತಗಳ ಪಾತ್ರಗಳನ್ನು ನಿರ್ವಹಿಸಿದ ರವಿಕುಮಾರ್, ಆದಿತ್ಯ ಪ್ರಭು, ಯಶ್ವಂತ್ ಹಾರ ಆಚಾರ್ಯ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದಾರೆ.


ಈ ನಾಟಕಕ್ಕೆ ವಸ್ತ್ರ ವಿನ್ಯಾಸ, ರಂಗ ಸಜ್ಜಿಕೆ, ಸಂಗೀತ ಮತ್ತು ನಿರ್ದೇಶನದ ಹೊಣೆ ಹೊತ್ತವರು ರಂಗನಾಥ್ ಮಾವಿನಕೆರೆ ಅವರು. ವಸ್ತ್ರ ವಿನ್ಯಾಸ ಕಥೆಗೆ ಪೂರಕವಾಗಿತ್ತು. ಸಂಗೀತವಂತು ಯಾವುದೋ ಇಂಗ್ಲಿಷ್ ಚಿತ್ರವನ್ನು ವೀಕ್ಷಿಸುತ್ತಿರುವ ಹಾಗೆ ಭಾಸವಾಗುತ್ತಿತ್ತು. ನಿಜಕ್ಕೂ ಈ ಎಲ್ಲಾ ಜವಾಬ್ದಾರಿ ಹೊತ್ತ ಗೆಳೆಯ ರಂಗನಾಥ್ ಅವರು ಅಭಿನಂದನಾರ್ಹರು. ಪ್ರದೀಪ್ ತಿಪಟೂರ್ ಅವರ ಬೆಳಕಿನ ವಿನ್ಯಾಸ ಸಹ ಪರಿಣಾಮಕಾರಿಯಾಗಿತ್ತು. ರಂಗನಾಥ್ ಅವರಿಂದ ಇನ್ನೂ ಹೆಚ್ಚು ನಾಟಕಗಳು ರಚನೆಯಾಗಲಿ ಎಂದು ಹಾರೈಸುತ್ತೇನೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಂತಹ ನಾಟಕಗಳನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂಥಾಗಲಿ, ಎಲ್ಲಾ ಕಲಾವಿದರು ಶುಭವಾಗಲಿ.ವಿ ಎನ್ ಅಶ್ವಥ್ ( ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ನಟರು, ಪೌರಾಣಿಕ ಹಾಗೂ ಸಾಮಾಜಿಕ ಖ್ಯಾತ ನಾಟಕ ನಿರ್ದೇಶಕರು, ಬರಹಗಾರರು, ಹಾಗೂ ವಿಮರ್ಶಕರು)

ನಾನು ನೋಡಿದ ಅಧ್ಬುತ ನಾಟಕ
ನಾನು ಇತ್ತೀಚೆಗೆ ನೋಡಿದ ನಾಟಕ….ಅಲ್ಲ.ಅಲ್ಲ ಸಿನೆಮಾ..

ಉತ್ಪ್ರೇಕ್ಷೆಯಲ್ಲ ನೋಡಿದ್ದು ನಾಟಕಾನೇ ಆದರೂ ಒಂದು ಸಿನೆಮಾ ನೋಡಿದಂತ ಅನುಭವ ನೀಡಿತು ಅದೇ,”ದಿ ರೈಸಿಂಗ್ ಆಫ್ ಡೆತ್” ವಿಲಿಯಂಸ್ಸ್ ಷೇಕ್ಸ್ ಪಿಯರ್ನ ಈ ನಾಟಕವನ್ನು ಹಿಂದಿಯಲ್ಲಿ ರೂಪಾಂತರಿಸಿದವರು ಎನ್.ಎಸ್
ಡಿಯ ಸಂದೀಪ್ ಭಟ್ಟಾಚಾರ್ಯ. ಅವರು ಮಾಡಿದ್ದರಲ್ಲಿ ಯಾವ ಆಶ್ಚರ್ಯವಿಲ್ಲ ಏಕೆಂದರೆ ಅವರು ಎನ್.ಎಸ್.ಡಿಯವರು.ಆದರೆ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ,ರಂಗಸಜ್ಜಿಕೆ,ವಸ್ತ್ರವಿನ್ಯಾಸ,ಸಂಗೀತ ನೀಡಿ ನಿರ್ದೇಶಿಸಿದ ರಂಗನಾಥ್ ಮಾವಿನಕೆರೆ ರವರು ಯಾವ ಹಿನ್ನೆಲೆಯೂ ಇಲ್ಲದೆ ಕೇವಲ ನಾಟಕಗಳಲ್ಲಿ ಅಭಿನಯಿಸುವ ನಟನಾಗಿದ್ದು,ತನ್ನ ಎಲ್ಲಾ ಅನುಭವಗಳನ್ನು ಧಾರೆ ಎರೆದು,ತಾನೊಬ್ಬ ನಾಟಕಕಾರ,ನಿರ್ದೇಶಕ,ರಂಗಭೂಮಿಯ ಎಲ್ಲಾ ಆಯಾಮಗಳನ್ನು ಅರಿತವನು ನಾನು, ನೋಡಿ ನನ್ನ ಪ್ರತಿಭೆ ಎಂದು ನಿರೂಪಿಸಿದ್ದಾರೆ. ಸರಿ ಸುಮಾರು 15-20 ವರ್ಷಗಳಿಂದಲೂ ಪರಿಚಿತರಾಗಿರುವ ರಂಗನಾಥರಲ್ಲಿ ಇಂತಹ ಒಂದು ದೈತ್ಯ ಪ್ರತಿಭೆ ಇರುವುದನ್ನು ಕಂಡು ದಂಗಾಗಿ ಹೋದೆ.ನಿಜಕ್ಕೂ ಈ ನಾಟಕ ಅವರಲ್ಲಿರುವ ಪ್ರತಿಭೆಗೆ ಕನ್ನಡಿ ಹಿಡಿದಹಾಗೆ. ಅವರು ಅವರ ಪ್ರತಿಭೆಯನ್ನು ನಿರೂಪಿಸಿದ್ದಾರೆ,ಇನ್ನು ಉಳಿದಿರುವುದು ರಂಗಾಸಕ್ತರ ಕರ್ತವ್ಯ,ಈ ನಾಟಕ ಇನ್ನೂ ಹೆಚ್ಚು ಹೆಚ್ಚು ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳಲು, ಸಹಕರಿಸಿ ನಮ್ಮ ಕನ್ನಡ ರಂಗಭೂಮಿಗೆ ಸಿಕ್ಕ ಭರವಸೆಯ ರಂಗನಾಥ್ ಎಂಬ ಬೆಳಕನ್ನು ಉಳಿಸಿಕೊಂಡು,ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕೆಂಬುದು ನನ್ನ ಮನವಿ. ಶುಭವಾಗಲಿ ರಂಗನಾಥ್ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಇಂತಹ ಕೃತಿಗಳು ಕನ್ನಡ ರಂಗಭೂಮಿಯಲ್ಲಿ ವಿಜೃಂಭಿಸಲಿ ಶುಭ ಹಾರೈಕೆ.
ನಿಮ್ಮ ಶುಭಾಕಾಂಕ್ಷಿ
ಜೆಮ್ ಶಿವು.
( ಕೆಂಪೇಗೌಡ ಪ್ರಶಸ್ತಿ ಪುರಸ್ಕ್ರೃತ,ಸ್ವರಮಂದಾರ ಪ್ರಶಸ್ತಿ ವಿಜೇತ,
ರಂಗಭೂಮಿ,ಕಿರುತೆರೆ,ಬೆಳ್ಳಿತೆರೆಯ ನಟ ಮತ್ತು ಸಾಹಿತಿ.)

RELATED ARTICLES
- Advertisment -
Google search engine

Most Popular

Recent Comments

Latest news
ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ...