
ತೀರ್ಥಹಳ್ಳಿ: ತಾಲೂಕಿನ ಹೋನ್ನೆ ತಾಳು ಗ್ರಾಮ ಪಂಚಾಯತ್ ಹೊನ್ನೆ ತಾಳು ಗ್ರಾಮ ನಂದನ್ ಶೆಟ್ಟಿ ಯಕ್ಷಗಾನ ಕಲಾವಿದನಾಗಿದ್ದು ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ನಿನ್ನೇ ಮಂದಾರ್ತಿ ಮಳೆಗಾಲದ ಸೇವೆಯಾಟದಲ್ಲಿ ಯಕ್ಷಗಾನದ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದು ಇವರು ನಿನ್ನೆ ಮಂದಾರ್ತಿಯಲ್ಲಿದ್ದರೂ ಅವರ ತಾಯಿ ಭಾರತಿ ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು ಈ ಸಂದರ್ಭದಲ್ಲಿ ರಾತ್ರಿ ಭಾರಿ ಮಳೆಗೆ ಮನೆ ಕುಸಿದಿದೆ .
ಇವರು ರಾತ್ರಿ ಬಾರಿ ಶಬ್ದಕ್ಕೆ ಮನೆಯಿಂದ ಆಚೆ ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಹಾಗೆಯೇ ಇವರ ಮಗ ಮಂದಾರ್ತಿ ಮೇಳದಲ್ಲಿ ಕಲಾವಿದನಾಗಿದ್ದು ಕಡುಬಡ ಕುಟುಂಬದವರಾಗಿದ್ದು ಇರಲು ಬೇರೆ ಮನೆ ಇಲ್ಲದೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನೆಯನ್ನು ಒದಗಿಸಿ ಕೊಡಬೇಕಾಗಿ ಗ್ರಾಮಸ್ಥರ ವಿನಂತಿ.
ಸ್ಥಳಕ್ಕೆ ತಕ್ಷಣ ದಾವಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿಬಿ ಮಂಜುನಾಥ್ ಹಾಗೂ ಸ್ಥಳೀಯ ಯುವಕರು ಇವರಿಗೆ ಸಹಕಾರ ನೀಡಿದ್ದಾರೆ.