Wednesday, April 30, 2025
Google search engine
Homeತೀರ್ಥಹಳ್ಳಿಮಲೆನಾಡಿನಲ್ಲಿ ಮಣಿಕಂಠನ ಮಹಿಮೆ ಕೊಲೆ ಮಾಡಿ ಎಸ್ಕೇಪ್ ..! ತೀರ್ಥಹಳ್ಳಿ ಪೊಲೀಸರಿಗೊಂದು ಹ್ಯಾಂಡ್ಸ್ ಆಫ್..!

ಮಲೆನಾಡಿನಲ್ಲಿ ಮಣಿಕಂಠನ ಮಹಿಮೆ ಕೊಲೆ ಮಾಡಿ ಎಸ್ಕೇಪ್ ..! ತೀರ್ಥಹಳ್ಳಿ ಪೊಲೀಸರಿಗೊಂದು ಹ್ಯಾಂಡ್ಸ್ ಆಫ್..!

ಮಲೆನಾಡಿನ ಹೆಬ್ಬಾಗಿಲು ತೀರ್ಥಹಳ್ಳಿ ಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರೈಂ, ಗಾಂಜ, ದನದ ಮಾರಾಟ, ಅಕ್ರಮ ಮರಳು ಮಾಫಿಯಾ , ಅಕ್ರಮ ಕಲ್ಲು ಗಣಿಗಾರಿಕೆ, ಲೇಔಟ್ ಗಳ ದಂದೆ, ಹೆಚ್ಚಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಕೆಲವು ಪೊಲೀಸ್ ಸಿಬ್ಬಂದಿಗಳೇ ಮರಳುಗಾರಿಕೆಯಲ್ಲಿ ಪಾರ್ಟ್ನರ್ ಗಳಾಗಿದ್ದಾರೆ ಆ ವಿಷಯ ಬಿಡಿ ಇನ್ನೊಂದು ಸಲ ಬರೆಯೋಣ.. ಈಗ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ನಾಲೂರು ಹತ್ತಿರದ ಊರಿನಲ್ಲಿ ಆಗಿರುವ ಮರ್ಡರ್ ಬಗ್ಗೆ ತಿಳಿಯೋಣ.

ಕಳೆದ ಗುರುವಾರ ಪೂಜಾ ಎನ್ನುವ 24 ವರ್ಷದ ವಿವಾಹಿತೆ ಆದರೆ ಗಂಡನನ್ನು ಬಿಟ್ಟಿದ್ದು ತವರು ಮನೆಯಲ್ಲಿ ವಾಸವಿದ್ದ ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆಯ ಮನೆಯವರು ಹಾಗೆ ಆಕೆ ಕಾರ್ಯ ನಿರ್ವಹಿಸುತ್ತಿದ್ದ ಧರ್ಮಸ್ಥಳ ಸಂಘದವರು ದೂರು ನೀಡುತ್ತಾರೆ.

ಈ ದೂರಿನ ಆಧಾರದ ಮೇಲೆ ಆಗುಂಬೆ ಪೊಲೀಸರು ತನಿಖೆ ಕೈಗಳ್ಳುತ್ತಾರೆ ಈಕೆ ನಾಪತ್ತೆಯಾಗಿದ್ದು ಹೇಗೆ ಈಕೆ ಹೋಗಿದ್ದಾದರೂ ಎಲ್ಲಿಗೆ? ಈಕೆ ಬದುಕಿದ್ದಾಳ ..?ಬದುಕಿದ್ದರೆ ಎಲ್ಲಿದ್ದಾಳೆ..? ಅಥವಾ ಸತ್ತಿದ್ದಾಳ ..?ಸತ್ತಿದ್ದರೆ ಯಾರು ಸಾಯಿಸಿದ್ದಾರೆ ..?ಎನ್ನುವ ಹಲವು ಪ್ರಶ್ನೆಗಳು ಪೊಲೀಸರಲ್ಲಿ ಮೂಡುತ್ತವೆ ಈ ಪ್ರಶ್ನೆಗಳ ಬೆನ್ನಲ್ಲೇ ಪೂಜಾ ಫೋನ್ ನಂಬರ್ ನ ಸಿಡಿಆರ್ ಪೊಲೀಸಿನವರು ತೆಗೆಸುತ್ತಾರೆ ಅದರಲ್ಲಿ ಈಕೆಯ ಸಂಪರ್ಕದಲ್ಲಿದ್ದ ಸುಮಾರು 15 ರಿಂದ 20 ಜನರ ವಿಚಾರಣೆ ನಡೆಸುತ್ತಾರೆ. ಆ ಎಲ್ಲಾರ ವಿಚಾರಣೆಯಲ್ಲಿ ಮುಂಚೂಣಿಯಲ್ಲಿದ್ದಿದ್ದು ಮಣಿಕಂಠನ ಹೆಸರು …

ಯಾರು ಈ ಮಣಿಕಂಠ..?

ಸುಮಾರು 28 ವರ್ಷ ವಯಸ್ಸಿನ ಯುವಕ ಮಣಿಕಂಠ ನಾಲೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ವಾಸಿ ಈತ ಚೇನಿ ಮಾಡುವುದು, ಪಿಕಪ್ ಓಡಿಸುವುದು ,ಮೇಸ್ತ್ರಿ ಕೆಲಸ ಮಾಡುವುದು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹಿಂದೆ ಪೂಜಾ ಮದುವೆಯಾಗುವ ಮುನ್ನ ಆಕೆಯನ್ನು ಈತ ಪ್ರೀತಿಸುತ್ತಿದ್ದ ಎನ್ನಲಾಗುತ್ತಿದೆ. ಆದರೆ ಹತ್ತಿರದ ಸಂಬಂಧಿಯಾಗಿದ್ದ ಇಬ್ಬರ ನಡುವೆ ಪ್ರೀತಿ ಮದುವೆಯಾಗಿ ಮಾರ್ಪಾಡಾಗಲಿಲ್ಲ ನಂತರ ಪೂಜಾಳಿಗೆ ವಿವಾಹ ವಾಗುತ್ತದೆ ಆಕೆ ಸುಮಾರು ಒಂದರಿಂದ ಒಂದುವರೆ ವರ್ಷ ಸಂಸಾರ ನಡೆಸಿ ಗಂಡನನ್ನು ಬಿಡುತ್ತಾಳೆ. ಇತ್ತ ಮಣಿಕಂಠ ಪೂಜಾ ಕುಟುಂಬದೊಂದಿಗೆ ಮುಂಚೆಯಿಂದಲೂ ಸಂಪರ್ಕದಲ್ಲಿದ್ದ ಹಣಕಾಸಿನ ವ್ಯವಹಾರ ಈತನಿಗೂ ಇವರ ಕುಟುಂಬದವರಿಗೂ ಇತ್ತು ಎನ್ನಲಾಗುತ್ತಿದೆ. ಇದೇ ಸಲುಗೆಯಿಂದ ಪೂಜಾಳೊಂದಿಗೆ ಮಣಿಕಂಠ ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದ ಆದರೆ ಪೂಜಾ ಇತ್ತೀಚಿಗೆ ಆಕೆಯ ಬರ್ತಡೇ ಸಂಭ್ರಮದಲ್ಲಿ ಮಣಿಕಂಠನನ್ನು ಬಿಟ್ಟು ಇನ್ನೊಬ್ಬ ವ್ಯಕ್ತಿಯೊಡನೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಳು ಎನ್ನುವ ಸಿಟ್ಟು ಮಣಿಕಂಠನಲ್ಲಿ ಕಾಡಿತ್ತು . ಒಂದು ಕಡೆ ಹಣಕಾಸಿನ ವ್ಯವಹಾರ ಇನ್ನೊಂದು ಕಡೆ ಆಕೆ ತನ್ನೊಟ್ಟಿಗೆ ಹುಟ್ಟಿದ ಹಬ್ಬದ ಸಂಭ್ರಮ ಆಚರಿಸಿಕೊಳ್ಳಲಿಲ್ಲ ಹಾಗೆ ತನ್ನ ಹತ್ತಿರ ಮುಂಚಿನ ಹಾಗೆ ಸಲುಗೆಯಿಂದ ಇಲ್ಲ ಎನ್ನುವ ಸಿಟ್ಟು ಇವೆರಡು ಸೇರಿ ಮಣಿಕಂಠ ಪೂಜಾ ನನ್ನು ಸಾಯಿಸಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಕೊಲೆ ಮಾಡಿ ಆರಾಮಾಗಿದ್ದ ಮಣಿಕಂಠ..!

ಇತ್ತ ಮಣಿಕಂಠ ಆಕೆಯನ್ನು ಮುಗಿಸಲು ಪ್ಲಾನ್ ರೂಪಿಸಿದ್ದು ಅದು ಯಾವ ತರ ಇತ್ತೆಂದರೆ ಯಾವ ಸಿನಿಮಾಗೂ ಕಡಿಮೆ ಇಲ್ಲ ಇತ್ತ ಆಕೆಯ ಕೊಲೆನೂ ಆಗಬೇಕು ಅದು ನಾನು ಮಾಡಿದ್ದು ಎನ್ನುವುದು ಗೊತ್ತಾಗಬಾರದು ಹಾಗೆ ಮಣಿಕಂಠ ಉಪಾಯವನ್ನು ಹಾಕಿದ್ದ ಆತನ ಸಂಚು ವಿಫಲವಾಗಲಿಲ್ಲ ಕಳೆದ ಶನಿವಾರ ಆಕೆಯನ್ನು ನಾಲೂರು ಕೊಳಿಗೆ ಗ್ರಾಮದ ಹೊಸಮನೆ ಕವಲೇ ಗುಡ್ಡ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ ಅಲ್ಲಿ ಆಕೆಯನ್ನು ಕೊಲೆ ಮಾಡಿ ಕೇವಲ 45 ನಿಮಿಷ ದಿಂದ ಒಂದು ಗಂಟೆ ಅವಧಿಯಲ್ಲಿ ಮರಳಿ ಬಂದು ತನ್ನ ಸ್ನೇಹಿತರನ್ನು ಕರೆದುಕೊಂಡು ಸೋಮೇಶ್ವರಕ್ಕೆ ಹೋಗುತ್ತಾನೆ ಎಲ್ಲೂ ಕೂಡ ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ಸಂಚುರೂಪಿಸಿರುತ್ತಾನೆ.

ಹ್ಯಾಂಡ್ಸ್ ಆಫ್ ತೀರ್ಥಹಳ್ಳಿ ಪೊಲೀಸ್..!

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ತೀರ್ಥಹಳ್ಳಿ ಪೊಲೀಸರು ಎಸ್ ಪಿ ಮಿಥುನ್ ಕುಮಾರ್ ಅವರ ಆದೇಶದ ಮೇರೆಗೆ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಆಗುಂಬೆ ಪಿಎಸ್ಐ ರಂಗನಾಥ್ ಒಳಗೊಂಡ ತಂಡ ತನಿಖೆಗೆ ರೆಡಿಯಾಗುತ್ತದೆ. ಅನುಮಾನ ಬಂದ ಎಲ್ಲರನ್ನು ಕರೆಸಿ, ತೀವ್ರ ವಿಚಾರಣೆ ನಡೆಸುತ್ತಾರೆ ಆದರೆ ಎಲ್ಲಿಯೂ ಸತ್ಯ ಹೊರ ಬರುವುದಿಲ್ಲ ಮಣಿಕಂಠ ಕೂಡ ಪೊಲೀಸರಿಗೂ ಪ್ರಾರಂಭದಲ್ಲಿ ಚಳ್ಳೆಹಣ್ಣು ತಿನಿಸುತ್ತಾನೆ ನಂತರ ಪೊಲೀಸರಿಗೆ ಮಣಿಕಂಠನ ಮೇಲೆ ಕೊಂಚ ಅನುಮಾನ ಶುರುವಾಗುತ್ತದೆ ಪೂಜಾ ನನ್ನು ಕೊಲೆ ಮಾಡಿದ ಮಣಿಕಂಠ ಕೊಲೆ ಮಾಡಿ ನಂತರ ಆಕೆಯ ಮೊಬೈಲ್ ನಿಂದ ಮೆಸೇಜ್ ಕಳಿಸಿಕೊಳ್ಳುತ್ತಾನೆ ಹಾಗೆ ಕೊಲೆ ಮಾಡುವ ಮುಂಚೆ ಕೂಡ ಈತ ಒಂದು ಮೆಸೇಜ್ ಆಕೆಯ ಮೊಬೈಲ್ಗೆ ಹಾಕಿರುತ್ತಾನೆ ಆದರೆ ವಿಚಾರಣೆಯಲ್ಲಿ ನಿನ್ನ ಮೊಬೈಲ್ನಲ್ಲಿ ಚಾರ್ಜ್ ಖಾಲಿಯಾಗಿತ್ತಲ್ಲ ಎಲ್ಲಿ ಮಾಡಿಕೊಂಡೆ ಎಂದು ಕೇಳಿದಾಗ ನಾನು ಆಕಸ್ಮಿಕ ಹೋಟೆಲ್ ಹತ್ತಿರ ಮಾಡಿಕೊಂಡೆ ಎಂದು ಹೇಳುತ್ತಾನೆ ಆದರೆ ಆತ ಸೋಮೇಶ್ವರಕ್ಕೆ ಹೋಗಿದ್ದ ಕಾರಿನಲ್ಲೇ ಚಾರ್ಜರ್ ಇತ್ತಲ್ಲ ಎಂದು ಪ್ರಶ್ನಿಸಿದಾಗ ಇಲ್ಲ ಎನ್ನುತ್ತಾನೆ ಕಾರಿನ ಮಾಲೀಕನಿಗೆ ಪ್ರಶ್ನೆ ಮಾಡಿದಾಗ ಚಾರ್ಜರ್ ಕಾರಿನಲ್ಲಿ ಇತ್ತು ಎನ್ನುತ್ತಾನೆ ಅಲ್ಲಿಗೆ ಮೊದಲ ಬಾರಿಗೆ ಪೊಲೀಸರಿಗೆ ಮಣಿಕಂಠನ ಮೇಲೆ ಅನುಮಾನ ಶುರುವಾಗುತ್ತದೆ.

ನಂತರ ಮಣಿಕಂಠ ಪದೇಪದೇ ಪೂಜಾ ಗೆ ಫೋನ್ ಮಾಡಿರುತ್ತಾನೆ ಅದು ಆಕೆಯ ಮೊಬೈಲ್ಸಿ ನಲ್ಲಿ ಸಿ ಡಿಆರ್ ನಲ್ಲಿ ಸಿಕ್ಕಿರುತ್ತದೆ ಹಾಗೆ ಕಾರಿನ ಮಾಲೀಕನಿಗೂ ಕರೆ ಮಾಡಿರುತ್ತಾನೆ ಒಂದು ಮೊಬೈಲ್ ಚಾರ್ಜರ್ ನ ಸುಳ್ಳು ಇನ್ನೊಂದು ಮೊಬೈಲ್ನ ಸಿಡಿಆರ್ ನ ಮಾಹಿತಿಯಿಂದ ಪೊಲೀಸರಿಗೆ ಮಣಿಕಂಠನ ಮೇಲೆ ಅನುಮಾನ ಶುರುವಾಗಿ ಆತನನ್ನು ತೀವ್ರ ವಿಚಾರ ನಡೆಸುತ್ತಾರೆ ವಿಚಾರಣೆಯ ವೇಳೆ ಸತ್ಯ ಬಾಯಿಬಿಡುತ್ತಾನೆ ಅಲ್ಲಿಯವರೆಗೂ ನಾನು ಕೊಲೆ ಮಾಡಿಲ್ಲ ನಾನು ಬರುವಷ್ಟರಲ್ಲಿ ಆಕೆ ಬೇರೆ ಕಾರಿನಲ್ಲಿ ಹೋಗಿದ್ದನ್ನು ನೋಡಿದೆ ಎಂದು ಪೊಲೀಸರ ‌ ದಾರಿ ತಪ್ಪಿಸಿರುತ್ತಾನೆ.

ನಂತರ ಪೊಲೀಸರ ತನಿಕೆಯಿಂದ ಎಲ್ಲವೂ ಬಹಿರಂಗವಾಗುತ್ತದೆ ಆಗ ನಿಜ ಬಾಯಿ ಬಿಟ್ಟ ಮಣಿಕಂಠ ನಾನು ಆಕೆಯನ್ನು ಪ್ರೀತಿಸುತ್ತಿದ್ದೆ ಆದರೆ ಒಪ್ಪಲಿಲ್ಲ ನಂತರ ಆಕೆಯ ಮದುವೆಯಾಗುತ್ತದೆ ಆದರೆ ಮದುವೆಯ ನಂತರ ಕೂಡ ಅವರ ಕುಟುಂಬದ ನಡುವೆ ನಮ್ಮ ವ್ಯಾವಹಾರಿಕ ಸಂಬಂಧ ವಿರುತ್ತದೆ ಒಂದು ಕಡೆ ಹಣಕಾಸಿನ ವ್ಯವಹಾರ ಇನ್ನೊಂದು ಕಡೆ ಆಕೆ ಇನ್ನೊಬ್ಬ ವ್ಯಕ್ತಿಯ ನಡುವೆ ಅನೂನ್ಯವಾಗಿರುವುದನ್ನು ಸಹಿಸಲಾರದೆ ನಾನು ಈ ಕೆಲಸ ಮಾಡಿಬಿಟ್ಟೆ ಎಂದು ಒಪ್ಪಿಕೊಳ್ಳುತ್ತಾನೆ ಅಲ್ಲಿಗೆ ಮಣಿಕಂಠ ಪೊಲೀಸರ ಎದುರುಗಡೆ ಅಸಲು ಸತ್ಯ ಬಾಯಿಬಿಡುತ್ತಾನೆ.

ಒಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪ್ರಕರಣ ಒಂದು ಪೊಲೀಸರ ತನಿಕೆಯಿಂದ ಬಯಲಾಗಿದ್ದು ಪೊಲೀಸರು ಮನಸ್ಸು ಮಾಡಿದರೆ ಎಂಥ ಪ್ರಕರಣವನ್ನು ಭೇದಿಸಬಹುದು ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿ ಆಗುಂಬೆಯ ಭಾಗದ ಈ ಪ್ರಕರಣ ನಿಲ್ಲುತ್ತದೆ ಎನ್ನಬಹುದು.

ಒಂದು ಚಿಕ್ಕ ಸುಳಿವು ಸಿಕ್ಕರೆ ಸಾಕು ಪೊಲೀಸ್ ಇಲಾಖೆ ಎಂಥವರನ್ನಾದರೂ ಕರೆದುಕೊಂಡು ಬಂದು ಎಡೆಮುರಿಗೆ ಕಟ್ಟಿ ಜೈಲಿಗೆ ಕಳಿಸುವ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ ಸಾಕಷ್ಟು ಬುದ್ಧಿವಂತಿಕೆಯಿಂದ ಮಣಿಕಂಠ ಈ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಆದರೆ ಪೊಲೀಸರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು ಅಲ್ಲಿಗೆ ಕೆಲವು ಪಾತಕಿಗಳಿಗೆ ಎಚ್ಚರಿಕೆಯ ಗಂಟೆ ಈ ಪ್ರಕರಣ ಎನ್ನಬಹುದು.

ರಘುರಾಜ್ ಹೆಚ್.ಕೆ.9449553305..

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...