
ಒಬ್ಬ ಯುವತಿ ಐವತ್ತು ಜನರೊಂದಿಗೆ ವಿವಾಹವಾದ ಘಟನೆ ಒಂದು ನಡೆದಿದ್ದು ನಿಜಕ್ಕೂ ಇದು ನಂಬಲು ಅಸಾಧ್ಯ ಆದರೆ ಸತ್ಯ ಸಾಮಾನ್ಯವಾಗಿ ಹುಡುಗಿಯರನ್ನು ವಂಚಿಸಿ ಹುಡುಗರು ಎರಡು-ಮೂರು ವಿವಾಹವಾಗುವುದನ್ನು ನಾವು ಕೇಳಿದ್ದೇವೆ ನೋಡಿದ್ದೇವೆ ಆದರೆ ಈ ಘಟನೆ ಭಿನ್ನವಾಗಿದೆ.
ಏನಿದು ಪ್ರಕರಣ ..?!
ತಮಿಳುನಾಡಿನ ತಿರುಪುರ್ ಜಿಲ್ಲೆಯ ತಾರಾಪುರಂನ ಯುವಕ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ 35 ವರ್ಷ ವಯಸ್ಸಾಗಿದ್ದರೂ, ಇನ್ನೂ ಮದುವೆಯಾಗಿರಲಿಲ್ಲ. ಆತ ಮದುವೆ ಕನಸು ಹೊತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ ‘ಅಂಬಿ ಡೇಟ್ ದಿ ತಮಿಳು ವೇ’ ನಲ್ಲಿ ನೋಂದಾಯಿಸಿದ್ದಾನೆ.
ಈ ವೆಬ್ ಸೈಟ್ ನಲ್ಲಿ ಸಂಧ್ಯಾ (30) ವಯಸ್ಯು ಪರಿಚಯವಾಗಿತ್ತು. ಈರೋಡ್ ಜಿಲ್ಲೆಯ ಕೊಡುಮುಡಿ ಮೂಲದ ಸಂಧ್ಯಾ ಆತನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ. ಇಬ್ಬರೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ದಿನ ಚಾಟ್ ಮಾಡುತ್ತಿದ್ದರು. ಆಕೆಗೆ ಬೇಕಾದಾಗಲೆಲ್ಲ ಯುವಕ ಹಣ ಕಳುಹಿಸುತ್ತಿದ್ದ. ಇವರ ಮದುವೆಗೆ ಹುಡುಗನ ತಂದೆ-ತಾಯಿಯೂ ಒಪ್ಪಿಗೆ ಸೂಚಿಸಿದ್ದರು. ವಧುವಿಗೆ ಬೇಕಾದ ಎಲ್ಲಾ ಆಭರಣಗಳು ಮತ್ತು ರೇಷ್ಮೆ ಸೀರೆಗಳನ್ನು ವರನ ಮನೆಯವರು ಖರೀದಿಸಿದರು.ಕಡೆಗೆ ಒಂದು ದಿನ ಪಳನಿ ಬಳಿಯ ದೇವಸ್ಥಾನದಲ್ಲಿ ಸಂಧ್ಯಾ ಮತ್ತು ಯುವಕ ವಿವಾಹವಾದರು.
ವಿವಾಹವಾದ 3 ತಿಂಗಳು ಸಂತೋಷವಾಗಿದ್ದರು.ನಂತರ, ಅವಳ ನಡವಳಿಕೆಯು ಸ್ವಲ್ಪ ಬದಲಾಗಲಾರಂಭಿಸಿತು. ಸಂಧ್ಯಾ ಹೇಳಿದ ವಯಸ್ಸಿಗೆ ಅವಳ ಲಕ್ಷಣಗಳು ಕಾಣುತ್ತಿಲ್ಲ ನಂತರ ಆಕೆಯ ಆಧಾರ್ ಕಾರ್ಡ್ ನೋಡಿದಾಗ ಶಾಕ್ ಆಗಿದ್ದರು..
ಕಾರ್ಡ್‌ನಲ್ಲಿ ಪತಿ ಎಂದು ಚೆನ್ನೈ ಮೂಲದ ಮತ್ತೊಬ್ಬ ವ್ಯಕ್ತಿಯ ಹೆಸರಿತ್ತು. ಇದರಿಂದ ಗಾಬರಿಗೊಂಡ ಯುವಕ ಕೂಡಲೇ ಆಕೆಗೆ ಪ್ರಶ್ನಿಸಿದ್ದಾನೆ. ತಾನು ಸಿಕ್ಕಿಬಿದ್ದಿದ್ದೇನೆಂದು ತನ್ನ ಪತಿ ಹಾಗೂ ಆತನ ಕುಟುಂಬಸ್ಥರನ್ನು ಭಯಭೀತಗೊಳಿಸಿದ್ದಾಳೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಕೂಡಲೇ ಯುವಕ ತಾರಾಪುರಂ ಪೊಲೀಸರಿಗೆ ದೂರು ನೀಡಿದ್ದಾನೆ.
ಪೊಲೀಸರು ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು, ವಿಚಾರಣೆ ವೇಳೆ ಯುವತಿಯ ಕುರಿತಾದ ರೋಚಕ ಸಂಗತಿಗಳು ಬಯಲಾಗಿದೆ.
ಹತ್ತು ವರ್ಷದ ಹಿಂದೇನೆ ಮದುವೆ..?!
ಹತ್ತು ವರ್ಷಗಳ ಹಿಂದೆ ಒಬ್ಬ ನೊಂದಿಗೆ ಮದುವೆಯಾಗಿ ಆತನನ್ನು ವಂಚಿಸಿ ಆತನಿಂದ ಹೊರಬಂದು ಬೇರೆ ಬೇರೆ ಉದ್ಯಮಿಗಳು , ಫೈನಾನ್ಸರ್ ಗಳ ಜೊತೆ ಮದುವೆಯಾಗಿ ಅವರನ್ನು ವಂಚಿಸಿ ಅವರಿಂದನು ಬೇರ್ಪಟ್ಟಿದ್ದಾಳೆ ಎಂದು ಈಗ ಬೆಳಕಿಗೆ ಬಂದಿದೆ.
ಮೊದಲು ಮದುವೆಯಾಗುವುದು ನಂತರ ಸ್ವಲ್ಪ ದಿನ ಜೊತೆಗಿದ್ದು ನಂತರ ಜಗಳವಾಡಿ, ಚಿನ್ನಾಭರಣದ ಜೊತೆ ಓಡಿ ಹೋಗುವುದು ಈಕೆಯ ಹವ್ಯಾಸವಾಗಿತ್ತು.
ಪೊಲೀಸ್ ಅಧಿಕಾರಿಗಳನ್ನು ಬಿಟ್ಟಿಲ್ಲ ಈಕೆ..!
ಈ ಯುವತಿ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಡಿಎಸ್ಪಿ, ಎಸ್‌ಐಗಳನ್ನು ಮದುವೆಯಾಗಿ ವಂಚಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿ ಕೆಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.