ಖ್ಯಾತ ನಿರೂಪಕಿಯಾಗಿದ್ದ ಆಕಾಶವಾಣಿ ಹಾಗೂ ಹಲವು ದೂರದರ್ಶನದ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದ ಸುಲಲಿತವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದ ನಮ್ಮ ಮೆಟ್ರೋ ಗೆ ಧ್ವನಿಯಾಗಿದ್ದ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ನಟಿ ಅಪರ್ಣಾ ಕ್ಯಾನ್ಸರ್ ನಿಂದ ಕಣ್ಮರೆಯಾಗಿದ್ದಾರೆ.
ತನ್ನ ನಿರೂಪಣಾ ಶೈಲಿಯಿಂದಲೇ ಕರ್ನಾಟಕದ ಜನತೆಯ ಮನೆಗೆದ್ದಿದ್ದ ಅಪರ್ಣಾ ಇತ್ತೀಚಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡಿದ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ ಎನ್ನುವುದು ಆಪ್ತರ ಮಾತು .
ವಯಸ್ಸಾಗಿದ್ದರು ಕೂಡ ತನ್ನ ಯೌವನವನ್ನು ಕಾಪಾಡಿಕೊಂಡು ಬಂದಿದ್ದ ಅಪರ್ಣಾ ಹಲವು ಮಹಿಳೆಯರಿಗೆ ಮಾದರಿಯಾಗಿದ್ದರು.
ಗಟ್ಟಿ ಧ್ವನಿಯಾ ಅಪರ್ಣಾ ಹಲವರಿಗೆ ಮಾರ್ಗದರ್ಶಕರಾಗಿದ್ದರು.
ಅಪರ್ಣಾ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಂತಾಪಸೂಚಿಸಿದ್ದಾರೆ.