ಶಿವಮೊಗ್ಗ: ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿ ವಿರುದ್ಧ ಮಹಿಳಾ ಒಬ್ಬರು ನಗರದ ಮಹಿಳಾ ಠಾಣೆಯಲ್ಲಿ ತನಗೆ ಮೋಸ ಮಾಡಿ ಸುಳ್ಳು ಹೇಳಿ ವಂಚಿಸಿ ತನ್ನನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದು ಕೊಲೆ ಮಾಡುವುದಾಗಿ ಬೆದರಿಸಿ ಮದುವೆಯಾಗುವುದಾಗಿ ನಂಬಿಸಿ ತನ್ನ ಹತ್ತಿರ ಹಣ ತೆಗೆದುಕೊಂಡು ತನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ದೂರು ನೀಡಿದ್ದರು.
ದೂರು ನೀಡಿದ ಬೆನ್ನಲ್ಲೇ ಶರತ್ ಕಲ್ಯಾಣಿ ಪರಾರಿಯಾಗಿದ್ದು ಆತನ ಹುಡುಕಾಟದಲ್ಲಿ ಶಿವಮೊಗ್ಗ ಪೊಲೀಸರು ಇದ್ದಾರೆ .
ಈ ಬೆಳವಣಿಗೆಗಳ ಮಧ್ಯೆ ಶಿಸ್ತಿನ ಪಕ್ಷ ಬಿಜೆಪಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಶರತ್ ಕಲ್ಯಾಣಿಯನ್ನು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಸ್ಥಾನದಿಂದ ತೆಗೆದುಹಾಕಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿಡಿ ಮೇಘರಾಜ್ಅವರು ಪತ್ರಿಕೆ ಜೊತೆ ಮಾತನಾಡುತ್ತಾ ಶರತ್ ಕಲ್ಯಾಣಿ ಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಯಾವುದೇ ರೀತಿಯ ನೆರವನ್ನು ಪಕ್ಷ ನೀಡುವುದಿಲ್ಲ ಕಾನೂನಿನ ಚೌಕಟ್ಟಿನಲ್ಲಿ ಆತನ ಮೇಲೆ ದೂರು ದಾಖಲಾಗಿದ್ದು ಆತನನ್ನು ಆ ಸ್ಥಾನದಿಂದ ತೆಗೆದು ಹಾಕಲಾಗಿದೆ.
ಆತನಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಮಹಿಳೆಯರ ಬಗ್ಗೆ ಬಿಜೆಪಿ ಪಕ್ಷಕ್ಕೆ ವಿಶೇಷವಾದ ಗೌರವವಿದೆ ಆಸ್ಥಾನದಲ್ಲಿದ್ದ ಶರತ್ ಕಲ್ಯಾಣಿ ಸರಿಯಾಗಿ ನಡೆದುಕೊಳ್ಳಬೇಕಿತ್ತು ಒಂದು ವೇಳೆ ಆತ ತಪ್ಪಿಸಸ್ಥ ಎಂದು ಸಾಬೀತಾದರೆ ಪಕ್ಷ ಎಂದಿಗೂ ಆತನನ್ನು ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಹಾಗೆ ಮುಂದುವರೆದು ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದ್ದಾರೆ.