
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಚುನಾವಣಾ ಅಧಿಕಾರಿಯಾದ ಎ ಹನುಮ ನರಸಯ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024/2025 ನೇ ಅವಧಿಯ ಜಿಲ್ಲೆ ತಾಲೂಕು ಯೋಜನಾ ಶಾಖೆಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯ ಸ್ಥಾನದ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ದಿನಾಂಕ 12.09.2024ರಂದು ಸಂಘದ ಚುನಾವಣೆ ಅಧಿಕಾರಿಗಳು ಚುನಾವಣೆ ಅಧಿಸೂಚನೆಯನ್ನು ಹೊರಡಿಸಿರುತ್ತಾರೆ.

ಅದರಂತೆ ದಿನಾಂಕ 17.09.2024 ರಂದು ಬೆಂಗಳೂರಿನ ನಗರ ರಾಜ್ಯ ಪರಿಷತ್ ಸದಸ್ಯ ಸ್ಥಾನದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ಈಗಾಗಲೇ ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಅವಿರೋಧವಾಗಿ ಆಯ್ಕೆ ಆದವರ ಪಟ್ಟಿಯನ್ನು ಪ್ರಕಟಿಸಲಾಗಿದೆ ಮುಂದುವರೆದು ಅವಿರೋಧವಾಗಿ ಆಯ್ಕೆಯಾದ ಮತಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ಮತಕ್ಷೇತ್ರಗಳ ಚುನಾವಣೆಗಳು 8/10/2024 ರಿಂದ ಆರಂಭವಾಗಬೇಕಿತ್ತು.
ಆದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಸಂಬಂಧ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕೃಷ್ಣಯ್ಯ ದ್ವಿತೀಯ ದರ್ಜೆಯ ಸಹಾಯಕ ಇವರು ಬೆಂಗಳೂರು ನಗರ ಸಿಟಿಲ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು .

ಈ ಸಂಬಂಧ ನ್ಯಾಯಾಲಯವು ಎದುರುದಾರರಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಯಾವುದೇ ಮಾಹಿತಿ ನೀಡದೆ ಎಕ್ಸ್ ಪಾರ್ಟಿ ಮಾಡಿ ಚುನಾವಣೆ ಅಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ತಡೆಯಾಗಿ ನೀಡಿದ್ದು ಈ ಸಂದರ್ಭದಲ್ಲಿ ದೂರುದಾರರು ಸಂಘದ ಹಳೆಯ ಬೈಲಾವನ್ನು ಸಲ್ಲಿಸಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುತ್ತಾರೆ. ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ಪ್ರಕರಣ ದಾಖಲಿಸಿದ್ದು ಮಾನ್ಯ ನ್ಯಾಯಾಲಯ ದಾವೆಗೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿ ಪೂರಕ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಕೃಷ್ಣಯ್ಯನವರು ದೂರು ಸಂಬಂಧಿಸಿದಂತೆ ಬೆಂಗಳೂರು ನಗರ ಸಿಟಿ ಸಿವಿಲ್ ನ್ಯಾಯಾಲಯವು ನೀಡಿದ ಮಧ್ಯಂತರ ತಡೆಯಾಜ್ಞೆ ಆದೇಶಕ್ಕೆ ವಿನಾಯಿತಿ ನೀಡಿ ಚುನಾವಣಾ ಮುಂದುವರಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.

ಉಚ್ಚ ನ್ಯಾಯಾಲಯದ ಆದೇಶದಂತೆ ಆದೇಶದಂತೆ ಈಗಾಗಲೇ ನಿಗದಿಪಡಿಸಿದ ದಿನಾಂಕ 12 /9/ 2024 ಎಲ್ಲಾ ಹಂತದ ಚುನಾವಣೆಗಳು ಯಥವತ್ತಾಗಿ ಮುಂದುವರೆಯಲಿವೆ.
ಆರುಷ್ ರಾಜ್ 9449553305…