
ಶಿವಮೊಗ್ಗ ಭದ್ರಾವತಿಯಲ್ಲಿ ಇಸ್ಪೀಟ್, ಓಸಿ ದಂಧೆ ,ಎಗ್ಗಿಲ್ಲದೆ ನಡೆಯುತ್ತಿದ್ದು ಭದ್ರಾವತಿಯ ಇಸ್ಪೀಟ್ ಓಸಿ ದಂದೆ ತೂರೆ ಬಿಲ್ಲೆ ಆಟಗಳಿಗೆ ನಿಯಂತ್ರಣ ಹಾಕೋರೆ ಇಲ್ಲವಾಗಿದೆ ಪೊಲೀಸರು ಓಸಿ ಅಡ್ಡಗಳಿಗೆ ಇಸ್ಪೀಟ್ ಅಡ್ಡ ಗಳಿಗೆ ನುಗ್ಗಿದರೆ ಶಾಸಕರ ಅಥವಾ ಶಾಸಕರ ಮಕ್ಕಳ ಹೆಸರು ಹೇಳಿ ಶಿಫಾರಸ್ಸು ಮಾಡಿಸುವ ಮಟ್ಟಕ್ಕೆ ಭದ್ರಾವತಿ ದಂಧೆ ಬೆಳೆದು ನಿಂತಿದೆ.

ಅಧಿಕಾರಿಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟರೆ ಈ ದಂದೆಗೆ ಫುಲ್ ಸ್ಟಾಪ್ ಹಾಕುತ್ತಾರೆ ಆದರೆ ಆ ಸ್ವಾತಂತ್ರ ಎಂಬುವುದು ಭದ್ರಾವತಿಯಲ್ಲಿ ಇಲ್ಲವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ಕೆಲವು ಸ್ಥಳೀಯ ಮುಖಂಡರುಗಳು ಆದರೆ ಆಘಾತಕಾರಿ ಸುದ್ದಿ ಏನೆಂದರೆ ಶಿವಮೊಗ್ಗದ ರೌಡಿಗಳು ಭದ್ರಾವತಿಯ ಇಸ್ಪೀಟ್ ಓಸಿ ದಂಧೆಗೆ ಎಂಟ್ರಿ ಕೊಡುತ್ತಿದ್ದಾರೆ ಜೈಲಿನಿಂದಲೇ ಡೀಲ್ ಗಳು ನಡೆಯುತ್ತಿದೆ ಭದ್ರಾವತಿ ಓಸಿ ಇಸ್ಪೀಟ್ ದಂದೆಯ ಮಾಮೂಲು ಜೈಲಿಗೆ ತಲುಪುತ್ತಿದೆ ಇದನ್ನು ಪೊಲೀಸರು ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ ಇದೆ ಏಕೆಂದರೆ ಇದು ಹೀಗೆ ಮುಂದುವರೆದರೆ ಅಪಾಯಕಾರಿ ಸನ್ನಿವೇಶ ಸೃಷ್ಟಿ ಆಗಬಹುದು ರೌಡಿಗಳು ಆದಾಯದ ಮೂಲ ಕಂಡುಕೊಂಡರೆ ಮುಂದೆ ದೊಡ್ಡ ಮಟ್ಟಕ್ಕೆ ಬೆಳೆಯಬಹುದು ಹಾಗೆ ಗ್ಯಾಂಗ್ ವಾರ್ ಗೆ ಕಾರಣವಾಗಬಹುದು.

ಶಿವಮೊಗ್ಗದಲ್ಲಿ ಓಸಿ ಸಂದೀಪನ ಆರ್ಭಟ ಜೋರು ಖಡಕ್ ಆಫೀಸರ್ಸ್ ಇದ್ರು ಓಸಿ ದಂಧೆ ನಿಲ್ಲುತ್ತಿಲ್ಲ ಏಕೆ..?!
ಭದ್ರಾವತಿಯಲ್ಲಿ ಓಸಿ ದಂದೆ, ಇಸ್ಪೀಟ್ ದಂದೆ, ತೂರೆ ಬಿಲ್ಲೆ ಎಗ್ಗಿಲ್ಲದೆ ನಡೆಯುತ್ತಿದ್ದರೆ ಇತ್ತ ಶಿವಮೊಗ್ಗದಲ್ಲಿ ಓಸಿ ಸಂದೀಪನ ಆರ್ಭಟ ಜೋರಾಗಿದೆ ಸಂದೀಪ್ ಹಾಗೂ ಸನ್ನು ಶಿವಮೊಗ್ಗದ ಓಸಿ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ ಇವರ ವ್ಯಾಪ್ತಿ ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಚಿಕ್ಕಮಂಗಳೂರಿಗೆ ಹಬ್ಬಿದೆ ತಮ್ಮದೇ ವೆಬ್ಸೈಟ್ಗಳನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ ದಿನದಲ್ಲಿ ಲಕ್ಷಗಟ್ಟಲೆ ದುಡಿಯುವ ಇವರು ಕೋಟಿ, ಕೋಟಿಗೆ ಬಾಳುತ್ತಾರೆ ಶಿವಮೊಗ್ಗದ ಬಹುತೇಕ 70 ಭಾಗ ಓಸಿ ದಂಧೆ ಸಂದೀಪನ ಕಂಟ್ರೋಲ್ ನಲ್ಲಿದ್ದರೆ ಇನ್ನುಳಿದ 30 ಭಾಗ ಸನ್ನು ಕಂಟ್ರೋಲ್ ನಲ್ಲಿದೆ ಎನ್ನುತ್ತೆ ಓಸಿ ಲೋಕ ತಮ್ಮ ಓಸಿ ಸಾಮ್ರಾಜ್ಯದ ವಿಸ್ತರಣೆಗಾಗಿ ತಮ್ಮ ತಮ್ಮಲ್ಲಿ ಘರ್ಷಣೆ ಮಾಡಿಕೊಳ್ಳುತ್ತಿದ್ದಾರೆ ಓಸಿ ಅಡ್ಡಾದಲ್ಲಿ ರೌಡಿಗಳು ಎಂಟ್ರಿ ಕೊಡುತ್ತಿದ್ದಾರೆ ಒಂದು ನಾವಿರಬೇಕು ಇಲ್ಲ ನೀವು ಇರಬೇಕು ಎನ್ನುವ ಹಂತದಲ್ಲಿ ಇವರ ಹೋರಾಟ ನಡೆಯುತ್ತಿದೆ .

ಶಿವಮೊಗ್ಗದಲ್ಲಿ ಖಡಕ್ ಆಫೀಸರ್ಸ್ ಇದ್ರು ಏಕೆ ನಿಲ್ಲುತ್ತಿಲ್ಲ ಓಸಿ , ಇಸ್ಪೀಟ್ ದಂಧೆ ..?!

ಶಿವಮೊಗ್ಗದ ಖಡಕ್ ಆಫಿಸರ್ ಎಸ್ ಪಿ ಮಿಥುನ್ ಕುಮಾರ್ ಇದ್ದಾರೆ ಅವರ ಟೀಮ್ ನಲ್ಲಿ ಗುರುರಾಜ್ ಸೇರಿದಂತೆ ರವಿ ಪಟೇಲ್ ,ಸಿದ್ದನಗೌಡ, ದೀಪಕ್, ಹರೀಶ್ ಪಾಟೀಲ್ ರಂತಹ ಅನುಭವಿಗಳಿದ್ದಾರೆ ಎಲ್ಲಕ್ಕಿಂತ ಹೆಚ್ಚಾಗಿ ಸೈಬರ್ ಟೀಮ್ ಆಕ್ಟಿವ್ ಆಗಬೇಕು ಸೈಬರ್ ನನ್ನು ಈಗ ಮೇಲ್ದರ್ಜೆಗೆ ಏರಿಸಿದ್ದಾರೆ ಅಲ್ಲಿಗೆ ಡಿ ವೈ ಎಸ್ ಪಿ ಆಗಿ ಕೃಷ್ಣಮೂರ್ತಿ ಬಂದಿದ್ದಾರೆ ಅವರ ಕೆಳಗೆ ಅನುಭವಿ ಉತಮ ಕೆಲಸಗಾರ ಮಂಜುನಾಥ್ ಇದ್ದಾರೆ ಸೈಬರ್ ಟೀಮ್ ಯಾಕ್ಟಿವ್ ಆದರೆ ಇದರ ನಿಯಂತ್ರಣ ಕಷ್ಟವೇನು ಅಲ್ಲ..!

ಕಳೆದ ಒಂದು ವರ್ಷದ ಹಿಂದೆ ನಡೆಯುತ್ತಿದ್ದ ದಾಳಿಗಳು ಹಾಗೂ ಕೇಸ್ ಗಳು ಈಗ ಹಾಕುತ್ತಿಲ್ಲ ಏಕೆ..?!
ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಓಸಿ , ಇಸ್ಪೀಟ್ ನಿಯಂತ್ರಣಕ್ಕೆ ಬರುತ್ತಿಲ್ಲ ಏಕೆ..?! ಎಸ್ ಪಿ ಮಿಥುನ್ ಕುಮಾರ್ ಮನಸ್ಸು ಮಾಡಿದರೆ ಇದು ದೊಡ್ಡ ಕೆಲಸವಲ್ಲ ಕಳೆದ ಒಂದು ವರ್ಷದ ಹಿಂದೆ ಎಸ್ ಪಿ ಮಿಥುನ್ ಕುಮಾರ್ ಆದೇಶದ ಮೇರೆಗೆ ನಿರಂತರವಾಗಿ ಓಸಿ ಇಸ್ಪೀಟ್ ಅಡ್ಡಾಗಳ ಮೇಲೆ ದಾಳಿಗಳು ನಡೆಯುತ್ತಿದ್ದವು ವಿವಿಧ ಠಾಣೆಗಳಲ್ಲಿ, ಉಪ ಠಾಣೆಗಳಲ್ಲಿ ಕೇಸ್ ಗಳು ದಾಖಲಾಗುತ್ತಿದ್ದವು ಆದರೆ ಇತ್ತೀಚಿಗೆ ಅದ್ಯಾವುದು ಕಾಣಿಸುತ್ತಿಲ್ಲ ಮೂರು ನಾಲ್ಕು ಕೇಸ್ ಬಿಟ್ಟರೆ ಉಳಿದಂತೆ ಠಾಣೆಗಳಲ್ಲಿ ಉಪ ಠಾಣೆಗಳಲ್ಲಿ ಯಾವುದೇ ಕೇಸ್ ಗಳು ದಾಖಲಾಗುತ್ತಿಲ್ಲ ಯಾವುದೇ ದಾಳಿಗಳು ಆಗುತ್ತಿಲ್ಲ ಏಕೆ ಎನ್ನುವುದು ಗೊತ್ತಿಲ್ಲ..?! ಸುದ್ದಿ ಆದಾಗ ಎರಡು ದಿನ ಓಸಿ ಬಿಡ್ಡರ್ ಗಳು ನಿಲ್ಲಿಸುತ್ತಾರೆ ಮತ್ತೆ ಪ್ರಾರಂಭ ಮಾಡುತ್ತಾರೆ ಇವರ ಜೊತೆ ಒಂದಷ್ಟು ಜನ ಕೈಜೋಡಿಸಿದ್ದಾರೆ ಅವರು ಯಾರು..? ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಎಲ್ಲೆಲ್ಲಿ ನಡೆಯುತ್ತಿದೆ ಓಸಿ ಹಾಗೂ ಇಸ್ಪೀಟ್ ದಂಧೆ ಯಾರಿದ್ದಾರೆ ಇದರ ಹಿಂದೆ..? ಜೈಲಿನಲ್ಲಿರುವ ರೌಡಿಗಳಿಗೂ ಹೋಗುತ್ತಿದೆಯಾ ಮಾಮೂಲು..?! ಎಲ್ಲಾ ಡೀಟೇಲ್ಸ್ ನಿಮ್ಮ ನ್ಯೂಸ್ ವಾರಿಯರ್ಸ್ ನಲ್ಲಿ ನಿರೀಕ್ಷಿಸಿ…ವಿಥ್ ಪ್ರೂಫ್ಸ್…

ಪತ್ರಿಕೆಗೆ ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ…
ರಘುರಾಜ್ ಹೆಚ್.ಕೆ..9449553305…