ಶಿವಮೊಗ್ಗ : ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ಬಿಸಿಸಿಐ ನೀಡಿದ್ದು ಶಿವಮೊಗ್ಗ ವಲಯದ ಕೆಎಸ್ ಸಿಎ ವಲಯ ಸಂಚಾಲಕರಾದ ಎಚ್ಎಸ್ ಸದಾನಂದ ಅವರನ್ನು ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ವೀಕ್ಷಕರಾಗಿ ಬಿಸಿಸಿಐ ನಾಮನಿರ್ದೇಶನ ಮಾಡಿದೆ.
ಇದೇ ತಿಂಗಳ 24ರಿಂದ 28 ರ ವರೆಗೆ ಪುಣೆಯಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಪಂದ್ಯ ವೀಕ್ಷಕರಾಗಿ ಸದಾನಂದ್ ಅವರನ್ನು ನಾಮ ನಿರ್ದೇಶನ ಮಾಡಿದೆ.
ಕ್ರೀಡೆಯನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದೆ ಇರುವ ಸದಾನಂದ್ ಅವರು ಪ್ರಸ್ತುತ ವಲಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಈ ಹಿಂದೆ ಜೆಎನ್ಎನ್ ಕಾಲೇಜಿನ ಕ್ರೀಡಾ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಹಾಗೆ ಜೆಎನ್ಎನ್ ಆವರಣದಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ.
ಸದಾ ಕ್ರಿಕೆಟ್ ಬಗ್ಗೆ ಒಲವು ಹೊಂದಿರುವ ಸದಾನಂದ್ ಅವರ ಸಾಧನೆ ಅಮೋಘವಾದದ್ದು ಎಂದರೆ ತಪ್ಪಾಗಲಾರದು ಅವರನ್ನು ಬಿಸಿಸಿಐ ನಾಮ ನಿರ್ದೇಶನ ಮಾಡಿರುವುದಕ್ಕೆ ಶಿವಮೊಗ್ಗ ಕ್ರಿಕೆಟ್ ಪ್ರೇಮಿಗಳು ಹಾಗೂ ಕೆಎಸ್‌ಸಿಎ ಶಿವಮೊಗ್ಗ ವಲಯ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.
ರಘುರಾಜ್ ಹೆಚ್.ಕೆ.9449553305.