
ತೀರ್ಥಹಳ್ಳಿ : ಇತ್ತೀಚಿಗಷ್ಟೇ ತಾಲೂಕಿಗೆ ವರ್ಗಾವಣೆಯಾಗಿ ಬಂದು ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ವ್ಯಕ್ತಿತ್ವದ ಸ್ನೇಹಮಯಿ ತಹಶೀಲ್ದಾರ್ ಜಕ್ಕಣ್ಣಗೌಡರ ಅಕಾಲಿಕ ನಿಧಾನ ತೀವ್ರ ನೋವನ್ನು ಉಂಟು ಮಾಡಿದೆ ಎಂದು ಕ್ಷೇತ್ರದ ಶಾಸಕ ಜ್ಞಾನೇಂದ್ರ ಸಂತಾಪಸೂಚಿಸಿದ್ದಾರೆ.
ನ್ಯಾಯಲಯದ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ತಹಶೀಲ್ದಾರ್ ಜಕ್ಕಣ್ಣಗೌಡರ ರವರು ತಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದು ಬೆಂಗಳೂರಿನಲ್ಲೇ ಇದ್ದ ಶಾಸಕರು ವಿಷಯ ತಿಳಿದ ತಕ್ಷಣವೇ ತಹಸಿಲ್ದಾರ್ ಅವರ ಪಾರ್ಥಿವ ಶರೀರ ಇದ್ದ ಹೋಟೆಲ್ ಗೆ ಭೇಟಿ ನೀಡಿ ಅವರ ಮಕ್ಕಳೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ,,
ಸರಳ ಸಜ್ಜನಿಕೆಯ ಸಾರ್ವಜನಿಕರ ಜೊತೆ ಜೊತೆ ತುಂಬಾ ಸಮಾದಾನದ ವ್ಯಕ್ತಿತ್ವ ಹೊಂದಿದ್ದ ಜಕ್ಕಣ್ಣಗೌಡರ ಅಕಾಲಿಕ ಮರಣದಿಂದಾಗಿ ಆಗಿರುವ ದುಖಃವನ್ನು ಬರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ ಹಿತೈಷಿಗಳಿಗೆ ನೀಡಲಿ ಎಂದು ಎಂಎಡಿಬಿಯ ಅಧ್ಯಕ್ಷರು ಕಾಂಗ್ರೆಸ್ ಮುಖಂಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ಸಂತಾಪ ಸೂಚಿಸಿದ್ದಾರೆ.