ನವುಲೆಯ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇ ಶ್ವರ ಬಡಾವಣೆಗೆ (ಬೊಮ್ಮನಕಟ್ಟೆ F ಬ್ಲಾಕ್ backside) ಹೊಂದಿಕೊಂಡಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಸಿಎ ನಿವೇಶನಕ್ಕೆ ಬಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಸಿಮೆಂಟ್ ಬ್ರಿಕ್ಸ್, ಜಿಂಕ್ ಶೀಟ್ ಶೆಡ್ ಗಳನ್ನು ಪಾಲಿಕೆಯ ಅಧಿಕಾರಿಗಳು ಜೆಸಿಬಿ ಯಿಂದ ನೆಲಸಮ ಮಾಡುತ್ತಿದ್ದಾರೆ. ಸಧ್ಯ ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಶಿವಮೊಗ್ಗ: ಅತಿಕ್ರಮಿತ ಜಾಗವನ್ನು ಕಾಪಾಡಿಕೊಳ್ಳಲು ಇಲ್ಲಿಯ ಮಹಾನಗರ ಪಾಲಿಕೆಯ ಮುಂದಾಗಿದ್ದು ಅದರ ಆರಂಭಿಕ ಹಂತವಾಗಿ ಇಂದು ಬೆಳಗ್ಗಿನಿಂದಲೇ ಜೆಸಿಬಿ ಸದ್ದು ಮಾಡಲಾರಂಭಿಸಿದೆ,
ಬೊಮ್ಮನ ಕಟ್ಟೆಯ ಆಶ್ರಯ ಬಡಾವಣೆಯ ಹಿಂಭಾಗದಲ್ಲಿ ಸರ್ಕಾರಿ ನೌಕರರ ನೀಲಮ್ಮ ಜ್ಞಾನೆಶ್ವರ ಬಡಾವಣೆಗೆ ಹೊಂದಿಕೊಂಡ ಸಿಎ ನಿವೇಶನದಲ್ಲಿ ಅನಧಿಕೃತವಾಗಿ ಸುಮಾರು 15ಕ್ಕೂ ಹೆಚ್ಚು ಸಿಮೆಂಟ್ ಬ್ರಿಕ್ಸ್ ಮತ್ತು ತಗಡಿನ ಶೆಡ್ ಗಳು ತಲೆ ಎತ್ತಿದ್ದವು. ಅಲ್ಲದೇ 20×30 ಅಡಿ ಅಳತೆಯ ಎರಡು ಆರ್.ಸಿ.ಸಿ. ಕಟ್ಟಡಗಳೂ ತಲೆ ಎತ್ತಿವೆ ಈ ಅನಧಿಕೃತ ಕಟ್ಟಡಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ, ಅನಧಿಕೃತ ಯುಜಿಡಿ ಸಂಪರ್ಕ, ಅನಧಿಕೃತ ನೀರಿನ ಸಂಪರ್ಕ ಎಲ್ಲವನ್ನೂ ನೀಡಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಅನಧಿಕ್ರತ ಕಟ್ಟಡಗಳ ನಿರ್ಮಾಣಕ್ಕೂ ಮೊದಲು ತಾವು ಪಾಲಿಕೆಯ ಉನ್ನತಾಧಿಕಾರಿಗಳ, ಕೆಲ ಬಿಜೆಪಿ, ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದಿದ್ದೆವು. ತದ ನಂತರವೇ ತಾವು ಕಟ್ಟಡ ನಿರ್ಮಿಸಿದಗದಾಗಿ ಅನಧಿಕೃತ ಕಟ್ಟಡದ ಮಾಲಿಕರು ಅಲವತ್ತುಕೊಂಳ್ಳುತ್ತಿರುವುದು ಕಂಡುಬಂದಿದೆ.
ಇಂದು ಜೆಸಿಬಿ ತಂದು ಕೇವಲ ಸಿಮೆಂಟ್ ಬ್ರಿಕ್ಸ್ ನಿಂದ ಸಣ್ಣ ಪುಟ್ಟ ಶೆಡ್ ಗಳ ನೆಲಸಮ ಮಾಡಿ ಸ್ಥಳೀಯರ ಕಣ್ಣೊರೆಸುವ ಕೆಲಸವಾಗಬಾರದು. ತಲೆ ಎತ್ತಿದ ಆರ್.ಸಿಸಿ ಯ ಎರಡೂ ಕಟ್ಟಡಗಳ ನೆಲಸಮವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇಲ್ಲವಾದಲ್ಲಿ ಪಾಲಿಕೆಯ ಉಳಿದ ಖಾಲಿ ಜಾಗದಲ್ಲಿ ತಾವೂ ಕಟ್ಟಡ ನಿರ್ಮಿಸಿಕೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಕಳೆದ 5-6ತಿಂಗಳ ಹಿಂದೆಯೇ ಸ್ಥಳೀಯ ನಾಗರಿಕರು ಪಾಲಿಕೆಗೆ ತನ್ನ ಜಾಗವನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದರು.ಆದರೆ ಇಂದು ಪಾಲಿಕೆಯ ಇಂಜಿನೀಯರ್ ವಿಷ್ಣು ದೀಕ್ಷತ್ ಆಶ್ರಯ ಅಧಿಕಾರಿ ಶಶಿಧರ್, ಕಂದಾಯ ಅಧಿಕಾರಿ ಮಂಜುನಾಥ್ ಮೊದಲಾದವರ ಉಸ್ತುವಾರಿಯಲ್ಲಿ ಕಟ್ಟಡಗಳ ನೆಲಸಮ ಕಾರ್ಯ ನಡೆದಿದೆ.