ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿಎಸ್ ಷಡಾಕ್ಷರಿ ಅವರು ಈ ಹಿಂದೆ ಶಿವಮೊಗ್ಗದಲ್ಲಿ ಲೆಕ್ಕಾಧಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಶಿವಮೊಗ್ಗದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯೊಳಗೆ ಬರುವ ವಸತಿಗೃಹದಲ್ಲಿ ವಾಸವಾಗಿದ್ದರು ನಂತರ ಅವರ ವರ್ಗಾವಣೆ ಕೋಲಾರಕ್ಕೆ ತದನಂತರ ಬೆಂಗಳೂರಿಗೆ ಆಯಿತು ಆದರೂ ಕೂಡ ವಸತಿಗೃಹವನ್ನು ಷಡಾಕ್ಷರಿ ಯವರು ಖಾಲಿ ಮಾಡಿರಲಿಲ್ಲ ಆದರೆ ಈಗ ಲೋಕೋಪಯೋಗಿ ಇಲಾಖೆಯ ನೀಡಿದ್ದ ವಸತಿ ಗೃಹವನ್ನು ತೆರವುಗೊಳಿಸಿ ಇಲಾಖೆಗೆ ಒಪ್ಪಿಸುವಂತೆ ಕಾರ್ಯಪಾಲಕ ಎಂಜಿನಿಯರ್ ಷಡಾಕ್ಷರಿ ಅವರಿಗೆ ಸೂಚಿಸಿದ್ದಾರೆ.