Tuesday, April 29, 2025
Google search engine
Homeಬೆಂಗಳೂರುವಿಶ್ವಕರ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರಿಗೆ ಪರಿಚಯಿಸಿ ಡಾ.ಉಮೇಶ್ ಕುಮಾರ್ ಬೆಂಗಳೂರು..!

ವಿಶ್ವಕರ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರಿಗೆ ಪರಿಚಯಿಸಿ ಡಾ.ಉಮೇಶ್ ಕುಮಾರ್ ಬೆಂಗಳೂರು..!

ವಿಶ್ವಕರ್ಮ ಸಂಸ್ಕೃತಿ ಪರಂಪರೆಯು ಜಗತ್ತಿನ ಅತಿ ಶ್ರೀಮಂತ ಸಂಸ್ಕೃತಿಗಳಲ್ಲಿ ಒಂದಾಗಿದ್ದು, ಅದನ್ನು ಮುಂದಿನ ಪೀಳಿಗೆಯವರಿಗೆ ಸೂಕ್ತ ರೀತಿಯಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ಕರೆಕೊಟ್ಟರು.

ಬೆಂಗಳೂರಿನ ಎಚ್. ಎ. ಎಲ್. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಮಾಜದವರು ಆಯೋಜಿಸಿದ್ದ “ವಿಶ್ವಕರ್ಮ ಪೂಜ್ಯೋತ್ಸವ” ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ವಿತರಿಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಉಮೇಶ್ ಕುಮಾರ್ ಅವರುವ “ವಿಶ್ವಕರ್ಮ ಸಮಾಜದಲ್ಲಿ ಜನಿಸಿರುವುದಕ್ಕೆ ನಾವೆಲ್ಲ ಬಹಳ ಹೆಮ್ಮೆ ಪಡಬೇಕು. ಏಕೆಂದರೆ ನಮ್ಮಷ್ಟು ಕೌಶಲ್ಯ ಹೊಂದಿದ ಇನ್ನೊಂದು ಸಮುದಾಯವಿಲ್ಲ. ಹಾಗೆಯೇ ನಮ್ಮಷ್ಟು ಶ್ರಮ ಪಡುವ ಇನ್ನೊಂದು ಸಮುದಾಯವೂ ಇಲ್ಲ. ಇತರ ಎಲ್ಲ ಸಮುದಾಯಗಳಿಗಿಂತ ಹೆಚ್ಚಿನ ಕೌಶಲ್ಯವನ್ನು, ಪಂಚ ಕಸುಬುಗಳ ಮೂಲಕ ಭಗವಾನ್ ವಿಶ್ವಕರ್ಮ ದೇವರು ನಮಗೆ ದಯಪಾಲಿಸಿದ್ದಾರೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆ ಹಾಗೂ ಮಕ್ಕಳಿಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಅವರಲ್ಲಿ ಸಂಸ್ಕೃತಿ-ಪರಂಪರೆಯ ಅರಿವನ್ನು ಹೆಚ್ಚು ಮಾಡಿ, ಅವರೂ ಸಹ ತಮ್ಮ ಸಮುದಾಯದ ಬಗ್ಗೆ ಹೆಮ್ಮೆ ಪಡುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಲಲಿತೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಪ್ರಸನ್ನ, ನರಸಿಂಹ ಖಜಾಂಚಿ ನಂಜುಂಡಸ್ವಾಮಿ ಮುಖಂಡರಾದ ಶಂಕರ್.ಜಿ ಹಾಗೂ ವಿಶೇಷ ಸಂಖ್ಯೆಯಲ್ಲಿ ಬಾಂಧವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...