ಪೊಲೀಸ್ ಇಲಾಖೆಯಲ್ಲಿ, ವಿವಿಧ ಪೊಲೀಸ್ ಠಾಣೆಗಳಲಿ, ದಾಖಲಾದ ಅಪ ರಾಧ ಪ್ರಕರಣಗಳಲ್ಲಿ, ತನಿಖೆ ಪೂರ್ಣ ಗೊಳಿಸಿ, ನ್ಯಾಯಾಲಯಕ್ಕೆ ಅಂತಿಮ ವರದಿಗಳನ್ನು ಸಲ್ಲಿಸಲ್ಪಟ್ಟ ನಂತರ, ನ್ಯಾಯಾಲಯವು ವಿಚಾರಣೆ ನಡೆಸಿ, ಹೊರಡಿಸುತ್ತಿರುವ ಅನೇಕ ತೀರ್ಪುಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮರ್ಪಕವಾಗಿ ತನಿಖೆ ಮಾಡದೇ ಇರುವುದರ ಬಗ್ಗೆ ಅಥವಾ ತನಿಖೆಯಲ್ಲಿನ ಲೋಪದೋಷಗಳ ಬಗ್ಗೆ ಅನೇಕ ಪ್ರಕರಣಗಳಲ್ಲಿ ಘನ ನ್ಯಾಯಾ ಲಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಉಲ್ಲೇಖಿಸ ಲಾಗಿರುತ್ತದೆ. ಆದ್ದರಿಂದ ಹಲವು ಪ್ರಕರಣಗಳಲ್ಲಿ ಆರೋಪಿತರುಗಳಿಗೆ ಇದರ ಲಾಭವಾಗಿ ರುತ್ತದೆ. ಅವರು ಪ್ರಕರಣದಿಂದ ಖುಲಾಸೆ ಯಾಗಿರುತ್ತಾರೆ.ಆರೋಪಿಗಳಿಗೆ ಶಿಕ್ಷೆಯಾಗುವ ಬದಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ ಕರ್ತವ್ಯ ಲೋಪದಿಂದ ಪ್ರಕರಣ ಗಳಲ್ಲಿ ಆರೋಪಿಗಳು ಖುಲಾಸೆಯಾ ಗುತ್ತಾರೆ. ಇಂತಹ ಖುಲಾಸೆಯಾದ ಪ್ರಕರಣ ಗಳನ್ನು ತನಿಖೆಮಾಡಿದ ಅಧಿಕಾರಿಗಳ ಹಾಗೂ ಪ್ರಕರಣಗಳಲ್ಲಿ ಕಾರ್ಯನಿರ್ವಹಿ ಸಿದ ಸಿಬ್ಬಂದಿ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆದೇಶಿ ಸಲಾಗಿದೆ.
೩ ವರ್ಷಕ್ಕೆ ಮೇಲ್ಪಟ್ಟ ಶಿಕ್ಷೆಗೆ ಒಳಪಡುವ ಪ್ರಕರಣಗಳನ್ನು ಗಂಭೀರ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ. ೩ ವರ್ಷಕ್ಕೆ ಒಳ ಪಡುವ ಪ್ರಕರಣಗಳನ್ನು ಸಾಮಾನ್ಯವಾಗಿ ಸಮನ್ಸ್ ಪ್ರಕರಣಗಳೆಂದು ಪರಿಗಣಿಸಲಾ ಗುತ್ತದೆ. ಅದೇನು ಅಷ್ಟು ಗಂಭೀರ ಪ್ರಕರಣ ಗಳು ಆಗಿರುವುದಿಲ್ಲ. ಆದರೆ, ೩ ವರ್ಷದ ಮೇಲ್ಪಟ್ಟ ಪ್ರಕರಣಗಳಿಗೆ ಚಾರ್ಜ್ ಶೀಟ್ (ಆರೋಪ ಪಟ್ಟಿ) ಸಲ್ಲಿಸುವ ಸಮಯದಲ್ಲಿ ಸರಿಯಾದ ಸಾಕ್ಷಿಗಳನ್ನು ಸಂಗ್ರಹಿಸದೇ, ತನಿಖೆಯನ್ನು ಸರಿಯಾಗಿ ಮಾಡದೇ, ನ್ಯಾಯಾಲಯಕ್ಕೆ ಕಳುಹಿಸಿರುತ್ತಾರೆ. ಇವರು ಕಳಿಸಿರುವ ಚಾರ್ಜ್ ಶೀಟ್ ಅನ್ನು ಪಬ್ಲಿಕ್ ಪ್ರಾಸಿಕ್ಯೂಟರ್ (ಪಿ.ಪಿ) ಸರಿಯಾಗಿ ಗಮನಿಸಬೇಕು ನಂತರ ಅದು ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತದೆ. ಒಂದು ವೇಳೆ ಎ.ಪಿ.ಪಿ ಹಾಗೂ ಪಿ.ಪಿ ಪಬ್ಲಿಕ್ ಪ್ರಾಸಿಕ್ಯೂಟರ್ ಚಾರ್ಜ್ ಶೀಟ್‌ನ್ನು ಪೊಲೀಸ್ ಇಲಾಖೆ ಸಲ್ಲಿಸಿದಾಗ, ಸರಿಯಾಗಿ ಗಮನಿಸಿ, ಅದರಲ್ಲಿರುವ ಲೋಪ ದೋಷ ಗಳನ್ನು ಎತ್ತಿ ಹಿಡಿದು, ನ್ಯಾಯಾಲಯದ ಗಮನಕ್ಕೆ ತಂದರೆ ಆ ಚಾರ್ಜ್ ಶೀಟ್ ಉರ್ಜಿತವಾಗುವುದಿಲ್ಲ. ಪುನಃ ಇನ್ನೊಂದು ಚಾರ್ಜ್ ಶೀಟ್ ಸಲ್ಲಿಸಬೇಕಾಗುತ್ತದೆ. ಆದರೆ, ಹಲವು ಪ್ರಕರಣಗಳಲ್ಲಿ ಪೊಲೀ ಸರು ಸಲ್ಲಿಸಿದ ಚಾರ್ಜ್ ಶೀಟ್‌ನ್ನು ಪರಿ ಶೀಲಿಸಿ ಅನುಮೋದನೆ ಮಾಡಿ ನ್ಯಾಯಾ ಲಯಕ್ಕೆ ಸಲ್ಲಿಸುತ್ತಾರೆ, ನಂತರ ನ್ಯಾಯಾ ಲಯ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿ ನಂಬರ್ ನೀಡುತ್ತದೆ. ಸೆಷನ್ ಕೋರ್ಟ್ ಆದರೆ, ಎಸ್.ಸಿ ನಂಬರ್ ನೀಡುತ್ತಾರೆ. ಕೆಳ ಹಂತದ ನ್ಯಾಯಾಲಯಗಳಲ್ಲಿ ಸಿಸಿ ನಂಬರ್ ನೀಡುತ್ತಾರೆ. ಇದು ಪ್ರಕರಣದ ಪ್ರಕ್ರೀಯೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಪೊಲೀಸ್ ಇಲಾಖೆಯ ಅಧಿಕಾರಿಗಳು / ಸಿಬ್ಬಂದಿಗಳು ಸರಿಯಾದ ಮಾಹಿತಿಯನ್ನು ಸಂಗ್ರಹಿಸಬೇಕು. ಎಲ್ಲೂ ಲೋಪ ದೋಷವಾ ಗಬಾರದು ಒಂದು ವೇಳೆ ಯಾವುದಾದರೂ ಒಂದು ವಿಚಾರದಲ್ಲಿ ಲೋಪಾದೋಷ ವಾದರೂ ನ್ಯಾಯಾಧೀಶರು ಅದನ್ನೆ ಇಟ್ಟು ಕೊಂಡು ಪ್ರಕರಣವನ್ನು ಖುಲಾಸೆ ಮಾಡು ತ್ತಾರೆ. ಅಲ್ಲಿ ಆರೋಪಿತನಿಗೆ ಶಿಕ್ಷೆಯಾಗು ವುದಿಲ್ಲ. ಆದರೆ, ಇಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ ಕರ್ತವ್ಯ ಲೋಪದಿಂದ ಆರೋಪಿ ಬಚಾವ್ ಆಗು ತ್ತಾನೆ. ಹಾಗಾಗ ಬಾರದು ಎಂದು ಪೊಲೀಸ್ ಇಲಾಖೆಯಲ್ಲಿ ಇಂತಹ ಖುಲಾಸೆಗೊಂಡ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒಂದು ಸಮಿತಿಯನ್ನು ರಚಿಸಲಾಗಿರುತ್ತದೆ.
ಜಿಲ್ಲೆಗೆ ಸಂಬಂಧಿಸಿದಂತೆ ಸಮಿತಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಧ್ಯಕ್ಷರಾಗಿರುತ್ತಾರೆ.ಪಬ್ಲಿಕ್ ಪ್ರಾಸಿಕ್ಯೂಟರ್ ಒಳಗೊಂಡ ಜಿಲ್ಲಾ ಸಮಿತಿ ರಚನೆಯಾಗಿರುತ್ತದೆ. ಈ ಸಮಿತಿಯ ಕೆಲಸ ಪ್ರತಿ ತಿಂಗಳು, ಪ್ರತಿ ನ್ಯಾಯಾಲಯದಲ್ಲಿ ಎಷ್ಟು ಪ್ರಕರಣಗಳು ಖುಲಾಸೆಗೊಂಡಿವೆ ಎನ್ನುವುದರ ಬಗ್ಗೆ ಅದರ ಆದೇಶದ ಪ್ರತಿ ತೆಗೆದು ಕೊಳ್ಳಬೇಕು. ಅದರಲ್ಲಿ ಗಂಭೀರ ಪ್ರಕರಣಗಳಲ್ಲಿ ವಿಚಾರಣೆ ಸಮಯದಲ್ಲಿ , ಸಾಕ್ಷಿ ಸಂಗ್ರಹ ಸಮಯದಲ್ಲಿ, ಆದ ಲೋಪದೋಷಗಳಿಂದ ಪ್ರಕರಣಗಳು ಖುಲಾಸೆಗೊಂಡಿರುತ್ತವೆ. ಅಂತಹ ಪ್ರಕರಣ ಗಳು ಆದೇಶ ಪ್ರತಿಗಳನ್ನು ಈ ಜಿಲ್ಲಾ ಸಮಿತಿ ಪರಿಶೀಲನೆ ಮಾಡುತ್ತದೆ. ಆ ಪರಿಶೀಲನೆ ವೇಳೆ ನ್ಯಾಯಾಧೀಶರು ಖುಲಾಸೆಗೆ ಕಾರಣ ವನ್ನು ಉಲ್ಲೇಖಿಸಿ ಬರೆದಿರುತ್ತಾರೆ.
ಉದಾಹರಣೆಗೆ : ೧) ಪ್ರಕರಣಕ್ಕೆ ಬಳಸಿದ ಆಯುಧವನ್ನು ಜಪ್ತಿ ಮಾಡಿಲ್ಲ,
೨) ಒಂದು ಮನೆಯ ಒಳಗೆ ಪ್ರಕರಣ ನಡೆದಿದೆ ಎಂದು ಇಂತಹ ಮನೆಯಲ್ಲಿ ಪ್ರಕರಣ ನಡೆದಿದೆ ಎಂದು ಆರೋಪ ಪಟ್ಟಿಯಲ್ಲಿ ಪ್ರಕಟಿಸ ಲಾಗಿರುತ್ತದೆ. ಆದರೆ. ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸದರಿ ಮನೆಯ ಯಾ ರೋಬ್ಬರನ್ನು ವಿಚಾರಣೆಗೆ ಒಳಪಡಿಸಿರುವುದಿಲ್ಲ.
೩) ಒಂದು ಪ್ರಕರಣದಲ್ಲಿ ಬಟ್ಟೆ ಸುಟ್ಟಿದೆ ಎಂದು ಉಲ್ಲೇಖಿಸಲಾಗಿರುತ್ತದೆ. ಆದರೆ, ಸುಟ್ಟಿ ರುವ ಬಟ್ಟೆಯನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷಿಸಿ ನೀಡಿರುವ ವರದಿಯನ್ನು ನ್ಯಾಯಾಲ ಯಕ್ಕೆ ಆರೋಪ ಪಟ್ಟಿಯಲ್ಲಿ ಸಲ್ಲಿಸಿರುವುದಿಲ್ಲ. ಹೀಗೆ ವಿವಿಧ ಪ್ರಕರಣಗಳಲ್ಲಿ ಸಮರ್ಪಕವಾಗಿ ತನಿಖೆ ನಡೆಸದೇ, ಸಾಕ್ಷಿಗಳನ್ನು ಸಂಗ್ರಹಿಸದೇ, ಪ್ರಕರಣ ಖುಲಾಸೆಯಾಗಲು ಸಂಬಂಧಪಟ್ಟ ಅಧಿಕಾರಿಗಳು ಕಾರಣರಾಗಿರುತ್ತಾರೆ. ಇದನ್ನು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದನ್ನು ಉಲ್ಲೇಖಿಸಿರುತ್ತಾರೆ. ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಅಭಿಯೋಗದವರು ಈ ಆರೋಪವನ್ನು ರುಜುವಾತು ಪಡಿಸಲು ವಿಫಲರಾಗಿದ್ದಾರೆ ಎನ್ನುವ ಆದೇಶ ನೀಡುತ್ತಾರೆ. ಅದು ಪೊಲೀಸ್ ಇಲಾಖೆಯ ಮೇಲೆ ಅನುಮಾನ ಛಾಯೆ ಮೂಡಿಸುತ್ತದೆ. ಇಲ್ಲಿ ತನಿಖಾಧಿ ಕಾರಿಗಳ ವಿಫಲತೆ ಎದ್ದು ಕಾಣುತ್ತದೆ. ಆಗ ಸಮಿತಿ ಒಂದು ವರದಿ ನೀಡುತ್ತದೆ. ತನಿಖಾಧಿಕಾರಿಗಳ ವಿಫಲತೆಯಿಂದ ಈ ಪ್ರಕರಣ ಖುಲಾಸೆ ಗೊಂಡಿದೆ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿ ಸಿದಂತೆ ತನಿಖೆ ಮಾಡಿರುವ ತನಿಖಾಧಿಕಾರಿ ಯನ್ನು ಹೊಣೆಗಾರನ್ನಾಗಿ ಮಾಡಿ, ವರದಿಯನ್ನು ಈ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ನೀಡಬೇಕು. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಶಿಸ್ತು ಕ್ರಮ ತೆಗೆದು ಕೊಳ್ಳುವ ಬಗ್ಗೆ ಚಿಂತನೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿ ದಂತೆ ತುಂಬಾ ಗಂಭೀರವಾದ ಪ್ರಕರಣದಲ್ಲಿ ಲೋಪವೆಸಗಿದ್ದರೆ, ಅದಕ್ಕೆ ಇಲಾಖೆ ವಲಯದಲ್ಲಿ ತನಿಖೆಗೆ ಆದೇಶ ನೀಡುತ್ತಾರೆ. ಇಲ್ಲವಾದಲ್ಲಿ ನಿಯಮ ೭ರಡಿಯಲ್ಲಿ ನೋಟಿಸ್ ನೀಡಿ ಅವರಿಂದ ಸಮಜಾಯಿಷಿ ತೆಗೆದುಕೊಂಡು ಆಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ನೀಡುತ್ತಾರೆ.
ಏನೀದು ಆದೇಶ :
ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ126/ಸಿಡಬ್ಲೂಪಿ/2014 ದಿ: 20.10.2014ರ ಆದೇಶಿಸಿರುವಂತೆ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳನ್ನು ಕೇಸಿನ ಕಡತದೊಂದಿಗೆ ಪರಾಮರ್ಶಿಸುವುದರ ಸಲುವಾಗಿ ರಾಜ್ಯದ ಪ್ರತಿ ವಲಯ ಮತ್ತು ನಗರ ಕಮೀಷನ ರೇಟ್‌ಗಳಲ್ಲಿ ಹಾಗೂ ಜಿಲ್ಲಾಘಟಕಗಳಲ್ಲಿ ಸರ್ಕಾರಿ ಅಭಿಯೋಜಕರು ಗಳನ್ನು ಒಳ ಗೊಂಡ Acquittal Review Committee ರಚಿಸಲಾದ ಸಮಿತಿಯು ಕಾರ್ಯ ನಿರ್ವಹಿಸುತ್ತಿರುತ್ತದೆ. ಘನ ನ್ಯಾಯಾಲಯದಲ್ಲಿ ಖುಲಾಸೆ ಗೊಂಡ ಪ್ರಕರಣಗಳಲ್ಲಿನ ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಪೂರಕವಾದ ಸಾಕ್ಷ್ಯ ನುಡಿಯದೆ ಇರುವುದು, ತನಿಖಾ ಪ್ರಕ್ರಿಯೆಯಲ್ಲಿ ಲೋಪವೆಸಗಿರುವುದು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸದೇ ಇರುವುದು ಹಾಗೂ ಸಾಕ್ಷಿ ದಾರರುಗಳನ್ನು ನ್ಯಾಯಾಲ ಯದಲ್ಲಿ ಹಾಜರುಪಡಿಸದೆ ಇರುವ ತನಿಖಾಧಿಕಾರಿಗಳಾದ ಪೊಲೀಸ್ ಅಧಿಕಾರಿ\ಸಿಬ್ಬಂದಿಗಳು ಕರ್ತವ್ಯಲೋಪವೆಸಗಿ ರುವ ಬಗ್ಗೆ ಶಿಸ್ತು ಕ್ರಮ ಜರುಗಿಸಲು Acquittal Review Committee ಶಿಫಾರಸ್ಸು ಮಾಡಬೇಕಾಗುತ್ತದೆ. Acquittal Review Committee ಶಿಫಾರಸ್ಸಿನಂತೆ, ನ್ಯಾಯಾಲಯದಲ್ಲಿ ಖುಲಾಸೆಗೋಂಡ ಅಪರಾಧ ಮೊಕದ್ದಮೆಗಳ ತನಿಖೆಯಲ್ಲಿ ಕರ್ತವ್ಯಲೋಪ ವೆಸಗಿರುವ ತನಿಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದರ ಸಂಬಂಧ ಪ್ರಧಾನ ಕಛೇರಿಯಿಂದ ಉಲ್ಲೇಖಿತದಲ್ಲಿ ಮಾರ್ಗ ಸೂಚಿಗಳನ್ನು ನೀಡಲಾಗಿತ್ತು.ಕರ್ನಾಟಕ ರಾಜ್ಯ ಆಡಳಿತ ನ್ಯಾಯಾ ಮಂಡಳಿ ಅರ್ಜಿ ಸಂಖ್ಯೆ : 517/2023 ಪ್ರಕರಣದಲ್ಲಿ ಆದೇಶ ದಿ: 19.2.2024ರಲ್ಲಿ Acquittal Review Committee ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪೂರ್ವದಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ಗಳನ್ನು ನೀಡಿರುತ್ತದೆ.ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧAcquittal Review Committee ಯ ಶಿಫಾರಸ್ಸಿನ ಆಧಾರದ ಮೇಲೆ ಶಿಸ್ತುಕ್ರಮ ಜರುಗಿಸುವುದರ ಸಂಬಂಧ ಪರಿಷ್ಕೃತ ಮಾರ್ಗ ಸೂಚಿಗಳನ್ನು ಹೊರಡಿಸುವುದರ ಸಲುವಾಗಿ ಈ ಹಿಂದೆ ಪ್ರಧಾನ ಕಛೇರಿಯಿಂದ ಹೊರಡಿಸ ಲಾಗದ ಉಲ್ಲೇಖಿತ ದಿನಾಂಕ : ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಂತಹ ಪ್ರಕರಣದಲ್ಲಿ Acquittal Review Committee ಸಮಿತಿಯ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣ ಗಳ ಪರಾಮರ್ಶಿಸಿದ ನಂತರ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ದ ಶಿಸ್ತುಕ್ರಮ ಜರುಗಿಸುವ ಸಂಬಂಧ ಎಲ್ಲಾ ಖುಲಾಸೆಗೋಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿಯ ಅಧ್ಯಕ್ಷರು, ಘಟಕಾಧಿಕಾ ರಿಗಳು ಶಿಸ್ತುಪ್ರಾಧಿಕಾರಿಗಳಿಗೆ ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಲು ತಿಳಿಸಲಾಗಿದೆ.
1. ರಾಜ್ಯದ ವಲಯ, ಕಮೀಷನರೇಟ್ ಹಾಗೂ ಜಿಲ್ಲಾ ಮಟ್ಟದಲ್ಲಿ ನ್ಯಾಯಾಲಯಗಳಲ್ಲಿ ಖುಲಾಸೆಗೊಂಡ ಕ್ರಿಮಿನಲ್ ಪ್ರಕರಣಗಳನ್ನು Acquittal Review Committee ನಲ್ಲಿ ಪರಾಮರ್ಶಿಸಿದಾಗ ತನಿಖಾಧಿಕಾರಿಗಳು ಸದರಿ ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾಲೋಪವೆಸಗಿ ರುವ ಬಗ್ಗೆ ಕಮಿಟಿಯು ಗಮನಿಸಿ ತನಿಖಾ ಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲು ತೀರ್ಮಾನಿಸಿ ಶಿಪಾರಸ್ಸು ಮಾಡುತ್ತಿರುತ್ತಾರೆ.ಕಮಿಟಿಯ ಶಿಫಾರಸ್ಸಿನಂತೆ ಪರಾಮರ್ಶೇ ಗೊಳಗಾದ ಕ್ರಿಮಿನಲ್ ಪ್ರಕರಣಗಳು ದಾಖ ಲಾದ ಘಟಕಗಳಲ್ಲಿನ ಜಿಲ್ಲಾ ಘಟಕಾಧಿಕಾರಿ ಗಳು, ವಿಭಾಗದ ಉಪ ಪೊಲೀಸ್ ಆಯುಕ್ತರು ಗಳು ಆಯಾ ತನಿಖಾಧಿಕಾರಿಗೆ ತನಿಖಾಲೋಪದ ಬಗ್ಗೆ ವಿವರಣೆಯನ್ನು ಪಡೆಯುವುದರ ಸಲುವಾಗಿ ನೋಟೀಸ್ ಹೊರಡಿಸಿ ಜಾರಿ ಮಾಡುವುದು ಸದರಿನೋಟೀಸ್‌ನೊಂದಿಗೆ ತನಿಖಾಲೋಪದ ಬಗ್ಗೆ ನಿರ್ಧಿಷ್ಟ ಮಾಹಿತಿ, ಕೇಸಿನಲ್ಲಿರುವ ಪೂರಕ ದಾಖಲೆ, ಪ್ರಕರಣದ ನ್ಯಾಯಾಲಯದ ತೀರ್ಪಿನ ಪ್ರತಿ, ಖುಲಾಸೆ ಗೊಂಡ ಪ್ರಕರಣಗಳ ಪರಾಮರ್ಶೆ ಸಭೆಯ ನಡವಳಿಯ ಪ್ರತಿಯನ್ನು ಒದಗಿಸತಕ್ಕದ್ದು, ಸದರಿ ನೋಟೀಸ್‌ಗೆ ತನಿಖಾಧಿಕಾರಿಗಳು ನೀಡಲಾಗುವ ನಡವಳಿಯ ಪ್ರತಿಯನ್ನು ಒದಗಿ ಸತಕ್ಕದು ಸದರಿ ನೋಟೀಸ್‌ಗೆ ತನಿಖಾಧಿ ಕಾರಿಗಳು ನೀಡಲಾಗುವ ಸಮಜಾಯಿಷಿಯನ್ನು ಪಡೆದುಕೊಂಡು, ಸಮಜಾಯಿಷಿಯಲ್ಲಿನ ಅಂಶಗಳ ಬಗ್ಗೆ ಪರಿಶೀಲಿಸಿಕೊಂಡು ತನಿಖಾಧಿ ಕಾರಿಗಳು ಅಪರಾಧ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪವೆಸುಗಿರುವುದು ಧೃಡಪಟ್ಟಲ್ಲಿ ಸೂಕ್ತ ಶಿಸ್ತಿನ ಕ್ರಮ ಜರುಗಿಸುವ ಸಲುವಾಗಿ ಆಯಾ ವಲಯಾಧಿಕಾರಿಗಳ, ಪೊಲೀಸ್ ಆಯುಕ್ತರುಗಳ ಮುಖಾಂತರವಾಗಿ ಸದರಿ ತನಿಖಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ, ಶಿಸ್ತುಪ್ರಾಧಿ ಕಾರಿಗಳಿಗೆ ಕೆ.ಎಸ್.ಪಿ. (ಡಿಪಿ) ನಿಯಮಾವಳಿ 1965/89ಮತ್ತು ತಿದ್ದುಪಡಿ 2022ರ ರೀತ್ಯಾ ಲಘು ಶಿಸ್ತು ಕ್ರಮ (ನಿಯಮ7) Rule 7 ಅಥವಾ ಕ್ರಮಬದ್ಧವಾದ ಇಲಾಖಾ ವಿಚಾರಣೆಗಾಗಿ (ನಿಯಮ 6,ಮತ್ತು 8) ಶಿಫಾರಸ್ಸು ಮಾಡತಕ್ಕದ್ದು.
2. ಕ್ರಿಮಿನಲ್ ಪ್ರಕರಣ ದಾಖಲಾದ ಘಟಕದ ಲ್ಲಿನ ಘಟಕಾಧಿಕಾರಿಗಳು ಸಂಬಂಧಪಟ್ಟ ಶಿಸ್ತುಪ್ರಾಧಿಕಾರಿಗಳಿಗೆ, ನಿಯಂತ್ರಣಾಧಿಕಾರಿಗಳಿಗೆ ಪ್ರಸ್ತಾವಣೆಯನ್ನು ಸಲ್ಲಿಸುವ ಪೂರ್ವದಲ್ಲಿ ಕರಡು ದೋಷಾರೋಪಣಾ (ಅನುಬಂಧ ೧ರಿಂದ ೪) ಯೊಂದಿಗೆ ಒದಗಿಸುವುದು.
3. ಕರಡು ದೋಷಾರೋಪಣಾ ಸಿದ್ದಪಡಿಸಿ ಕಳುಹಿಸುವಾಗ ನ್ಯಾಯಾಲಯದ ಆದೇಶದಲ್ಲಿ ನಮೂದಿಸಲಾದ ಆರೋಪಗಳ ಅಂಶಗಳಿಗೆ ಸಂಬಂಧಪಟ್ಟಂತೆ, ನ್ಯಾಯಾಲಯದ ಆದೇಶದ ಭಾಗವನ್ನು ಅಂದರೆ, ತನಿಖಾಧಿಕಾರಿಗಳು ಲೋಪವೆಸಗಿರುವ ಬಗ್ಗೆ ಗಮನಿಸಿರುವ ಅಂಶವನ್ನು ಕಟುಟೀಕೆಯನ್ನು ವ್ಯಕ್ತಪಡಿಸಿದ್ದಲ್ಲಿ ಯಥಾವತ್ತಾಗಿ ನಮೂದಿಸಿ ಅದಕ್ಕೆ ಪೂರಕವಾಗಿ ಘಟಣಾವಳಿಯನ್ನು ಸಂಕ್ಷಿಪ್ತವಾಗಿ ವಿವರಿಸಿ, ನ್ಯಾಯಾಲಯದ ಆದೇಶದ ಭಾಗವನ್ನು , ಕಟುಟೀಕೆಯನ್ನು ನಮೂದಿಸಿರುವ ಅಂಶಗಳಿಗೆ ಪೂರಕವಾದ ಅಭಿಯೋಗ ಸಾಕ್ಷಿದಾರರ (ಪಿಡಬ್ಲೂ, ಸಿಡಬ್ಲೂ) ಹೆಸರನ್ನು ಹಾಗೂ ಅಪಾದಿತ ಅಧಿಕಾರಿಯು ಎಸಗಿರುವ ನಿರ್ದಿಷ್ಟ ಆರೋಪಗಳನ್ನು ಅಸ್ಪಷ್ಟವಾಗಿರದೇ ಸ್ಪಷ್ಟವಾಗಿ ನಮೂದಿಸತಕ್ಕದ್ದು, ಅದಕ್ಕೆ ಪೂರಕವಾಗಿರುವಂತಹ ತನಿಖಾ ದಾಖಲಾತಿಗಳ ಪತ್ರ ಸಂಖ್ಯೆ ದಿನಾಂಕದೊಂದಿಗಿನ ಮಾಹಿತಿ, ಪ್ರಕರಣದ ವಿವರ, ಹಿನ್ನೆಲೆಯನ್ನು ಸ್ಪಷ್ಟವಾಗಿ ನಮೂದಿಸಿ ಸಂಬಂಧಪಟ್ಟ ಎಲ್ಲಾ ದಾಖಲಾತಿ ಅಂದರೆ, ಎಫ್‌ಐಆರ್. ಅಭಿಯೋಗ ದಾಖಲಾತಿ, ಅಭಿಯೋಗ ಸಾಕ್ಷಿಗಳ ಪಟ್ಟಿ ತೀರ್ಪಿನ ಪ್ರತಿ, ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹೇಳಿಕೆಯ ಪ್ರತಿಗಳು ಹಾಗೂ ಪ್ರಕರಣದ ಕಡತದಲ್ಲಿ (ಕೇಸ್ ಫೈಲ್) ಇನ್ನಿತರೆ ಅವಶ್ಯ ದಾಖಲೆಗಳನ್ನು ಒದಗಿಸತಕ್ಕದ್ದು.
4. ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರವರುಗಳ ವಿರುದ್ಧ ಶಿಸ್ತುಕ್ರಮಕ್ಕಾಗಿ ಜರುಗಿಸುವ ಪ್ರಕರಣಗಳಲ್ಲಿ ಕಂಡಿಕೆ ೨ ಮತ್ತು ೩ರಲ್ಲಿ ತಿಳಿಸಿರುವಂತೆ ಪೂರ್ಣ ಪ್ರಮಾಣದ ದಾಖಲೆಗ ಳನ್ನು ಪ್ರಧಾನ ಕಛೇರಿಗೆ ಕಳುಹಿಸುವ ಬಗ್ಗೆ ಕ್ರಮ ತೆಗೆದುಕೊಳ್ಳತಕ್ಕದ್ದು.
5. Acquittal Review Committee ನಲ್ಲಿ ಶಿಫಾರಸ್ಸು ಮಾಡಿರುವಂತೆ, ಪೊಲೀಸ್ ಇನ್ಸ್‌ಪೆಕ್ಟರ್‌ಗಿಂತ ಕೆಳಹಂತದ ಹುದ್ದೆಗಳ ಅಧಿಕಾರಿಗಳ ವಿರುದ್ಧ ನಿಯಮ-೬ ಮತ್ತು ೮ರಡಿಯಲ್ಲಿ ಶಿಸ್ತು ಕ್ರಮಗಳನ್ನು ಜರುಗಿಸಿದ್ದಲ್ಲಿ ಈ ಕಛೇರಿಯ ಸುತ್ತೋಲೆ ಸಂಖ್ಯೆ : ಹೆಚ್‌ಆರ್‌ಎಂ- 1(8)55/2023-24 ದಿನಾಂಕ :8-11-2023, 04-01-2024 ಮತ್ತು 16-05-2024 ತಿಳಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಿ, ನಂತರದಲ್ಲಿ ಆದೇಶಿಸಲಾಗುವ ಕ್ರಮಬದ್ಧ ಇಲಾಖಾ ವಿಚಾರಣೆಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳ ನ್ನಾಗಿ ನೇಮಕ ಮಾಡುವುದರ ಬಗ್ಗೆ ಕ್ರಮ ತೆಗೆದುಕೊಳ್ಳತಕ್ಕದ್ದು,
6. Acquittal Review Committeeನಲ್ಲಿ ಶಿಫಾರಸ್ಸು ಮಾಡಿರುವಂತೆ ಪೊಲೀಸ್ ಇನ್ಸ್‌ಪೆಕ್ಟರ್‌ಗಿಂತ ಕೆಳಹಂತದ ಹುದ್ದೆಗಳ ಅಧಿಕಾರಿಗಳ ವಿರುದ್ಧದ ಶಿಸ್ತು ಕ್ರಮಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳು 1965/89 ರ ನಿಯಮ -7 ರನ್ವಯ (ಲಘು ಶಿಕ್ಷಾ ಶಿಸ್ತು ಕ್ರಮ) ಶಿಸ್ತು ಪ್ರಾಧಿಕಾರಿಗಳು ಕ್ರಮ ಜರುಗಿಸಿ ದ್ದಲ್ಲಿ, ಪ್ರಧಾನ ಕಛೇರಿ ಸುತ್ತೋಲೆ ಸಂಖ್ಯೆ : ಅಪೀಲು(3) /58/2013-14 ದಿನಾಂಕ : 07-02-2019ರ ಪ್ರಕಾರ ನೈಸರ್ಗಿಕ ನ್ಯಾಯ ಒದಗಿಸಲು ಎಲ್ಲಾ ಅವಕಾಶಗಳನ್ನು ಆರೋಪಿತ ಪೊಲೀಸ್ ಅಧಿಕಾರಿಗಳಿಗೆ ಒದಗಿಸುವುದು, ಆರೋಪಿತ ಪೊಲೀಸ್ ಅಧಿಕಾರಿಗಳು ನಿಯಮ 6ರಡಿಯಲ್ಲಿ ಅಭಿಮತ ನೀಡಿದ್ದಲ್ಲಿ ಕಂಡಿಕೆ-೫ರಂತೆ ಕ್ರಮ ತೆಗೆದುಕೊಳ್ಳುವುದು. ನಿಯಮ-7ರಡಿಯಲ್ಲಿ ವಿಚಾರಣೆಗೆ ಅಭಿಮತ ಸಲ್ಲಿಸಿದ್ದಲ್ಲಿ , ಪ್ರಾಥಮಿಕ ವಿಚಾರಣಾ ವರದಿ ಸಲ್ಲಿಸಿದ್ದ ಅಧಿಕಾರಿಗಳು ನಿಯಮ 6ರಡಿಯಲ್ಲಿ ಅಭಿಮತ ನೀಡಿದ್ದಲ್ಲಿ ಕಂಡಿಕೆ – 5ರಂತೆ ಕ್ರಮ ತೆಗೆದು ಕೊಳ್ಳುವುದು. ನಿಯಮ-7ರಡಿಯಲ್ಲಿ ವಿಚಾರಣೆಗೆ ಅಭಿಮತ ಸಲ್ಲಿಸಿದ್ದಲ್ಲಿ, ಪ್ರಾಥಮಿಕ ವಿಚಾರಣಾ ವರದಿ ಸಲ್ಲಿಸಿದ್ದ ಅಧಿಕಾರಿಯನ್ನು ಹೊರತುಪಡಿಸಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು (ಅವರ ಹುದ್ದೆಗಿಂತ ೨ ಹಂತದ ವೃಂದಕ್ಕೆ ಮುಂಬಡ್ತಿ ಹೊಂದಿದ್ದ ಅಧಿಕಾರಿಗಳನ್ನು) ವಿಚಾರಣಾಧಿಕಾರಿಳನ್ನಾಗಿ ನೇಮಿಸುವುದು.
7. ನಿಯಮ-7 ರಡಿಯಲ್ಲಿ ನೇಮಿಸಲಾದ ವಿಚಾರಣಾಧಿಕಾರಿಗಳು, ವಿಚಾರಣೆ ಪ್ರಾರಂಭಿ ಸುವ ಪೂರ್ವದಲ್ಲಿ ಆ ಪೊಲೀಸ್ ಅಧಿಕಾರಿ ಯವರಿಗೆ ಅವರ ಪ್ರಕರಣದಲ್ಲಿ ನಿಯಮ-೬ರಡಿಯಲ್ಲಿ ವಿಚಾರಣೆಗೆ ಸಮ್ಮತಿಸುವುದರ ಅಥವಾ ನಿಯಮ 7ರಡಿಯಲ್ಲಿ ವಿಚಾರಣೆ ಮುಂದುವರಿಸುವ ಬಗ್ಗೆ ಅಂತಿಮ ಸಮ್ಮತಿ ಪತ್ರವನ್ನು ಪಡೆದುಕೊಳ್ಳುವುದ, ನಿಯಮ -೬ರಡಿಯಲ್ಲಿ ಸಮ್ಮತಿ ನೀಡಿದ್ದಲ್ಲಿ ಸಂಬಂಧಪಟ್ಟ ಶಿಸ್ತು ಪ್ರಾಧಿಕಾರಿಗಳಿಗೆ ದಾಖಲಾತಿಗಳನ್ನು ಹಿಂದಿರುಗಿಸುವುದು. ನಿಯಮ -7ರಡಿಯಲ್ಲಿ ವಿಚಾರಣೆಗಾಗಿ ಸಮ್ಮತಿ ಪತ್ರ ನೀಡಿದ್ದಲ್ಲಿ ವಿಚಾರಣೆಯನ್ನು ಪ್ರಾರಂಭಿಸಿ ವಿಚಾರಣಾ ವರದಿಯನ್ನು ಶಿಸ್ತುಪ್ರಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು, ಶಿಸ್ತುಪ್ರಾಧಿಕಾರಿಗಳು ನಿಯಮ-7ರಡಿಯಲ್ಲಿನ ಸಲ್ಲಿಸಲಾದ ವಿಚಾರಣಾಧಿಕಾರಿ ಗಳ ಅಂತಿಮ ಅಭಿಪ್ರಾಯದ ವಿಚಾರಣಾ ವರದಿಯಲ್ಲಿನ ಅಂಶಗಳು ಹಾಗೂ ಆಪಾದಿತರು ಸಲ್ಲಿಸಿರುವ ಸಮಜಾಯಿಷಿಯಲ್ಲಿರುವ ಅಂಶಗಳೊಂದಿಗೆ ಪರಿಶೀಲಿಸಿಕೊಂಡು ಸೂಕ್ತ ಅಂತಿಮ ಆದೇಶ ಹೊರಡಿಸುವುದರ ಬಗ್ಗೆ ಕ್ರಮ ತೆಗೆದುಕೊಳ್ಳತಕ್ಕದ್ದು.
ಶಿವಮೊಗ್ಗದಲ್ಲಿ ಈ ಹಿಂದೆ ನಡೆದ ಒಂದು ಪ್ರಕರಣದ ಬಗ್ಗೆ ನ್ಯಾಯಾಲಯ ನೀಡಿದ ತೀರ್ಪನ್ನು ನೋಡೋಣ ಬನ್ನಿ,
ಈ ಹಿಂದೆ ನಡೆದ ವೆಂಕಟೇಶ್ವರ ಸ್ವೀಟ್ ಹೌಸ್ ಪ್ರಕರಣ ನೆನಪಿರಬಹುದು ಇದರಲ್ಲಿ ಜೋಡಿ ಕೋಲೆಯಾಗಿರುತ್ತದೆ. ಈ ಪ್ರಕರಣ ದಲ್ಲಿ ಸರಿಯಾದ ಸಾಕ್ಷಿಗಳನ್ನು ಸಂಗ್ರಹಿಸದೇ ಆರೋಪಿಗಳ ಪರವಾಗಿ ಸಾಕ್ಷಿಗಳನ್ನು ಸಂಗ್ರಹಿಸಿ, ವಿನಾ ಕಾರಣ ಪ್ರಕರಣಕ್ಕೆ ಸಂಬಂಧವಿಲ್ಲದ ಮನೆ ಕೆಲಸದವನನ್ನು ಆರೋಪಿಯನ್ನಾಗಿ ಮಾಡಿ, ಆಸ್ತಿಯನ್ನು ಲೋಟಿ ಹೊಡೆಯಲು ಮಾಡಿದ ಪೂರ್ವ ನಿಯೋಜಿತ ಕೋಲೆ ಇದಾಗಿತ್ತು. ಈ ಪ್ರಕರಣದ ತನಿಖೆಯನ್ನು ಮಾಡಿದ ರಾಮಾನಾಯ್ಕ್ ಎನ್ನುವ ಇನ್ಸಪೆಕ್ಟರ್ ಖಾಕಿ ಕಳಚಿ ಮನೆಗೆ ಹೋಗುವ ಪರಿಸ್ಥಿತಿ ಬಂದಿತು. ಆ ಸಮಯದಲ್ಲಿ ಅರುಣ್ ಚಕ್ರವರ್ತಿ ಶಿವಮೊಗ್ಗ ಪೊಲೀಸ್ ವರಿಷ್ಠಾಧಿ ಕಾರಿಗಳಾಗಿದ್ದರು ಆದರೆ, ಈ ಪ್ರಕರಣದಲ್ಲಿ ರಾಮನಾಯ್ಕ್ ಹೇಗೆ ಬಚಾವ್ ಆದರೂ ಎನ್ನುವುದನ್ನು ವಿಸ್ತಾರವಾಗಿ ಪತ್ರಿಕೆ ಸಾಕ್ಷಿ ಸಮೇತ ಪ್ರಕಟಿಸಲಿದೆ ಹಾಗೆ ಇನ್ನಷ್ಟು ಪ್ರಕರಣಗಳಲ್ಲಿ ಕೆಲವು ತನಿಖೆ ಅಧಿಕಾರಿಗಳು ತನಿಖೆ ಹಾದಿ ತಪ್ಪಿಸಿ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪರೋಕ್ಷವಾಗಿ ಸಹಾಯ ಮಾಡಿದ್ದರ ಬಗ್ಗೆ ಕೂಡ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪ್ರಕಟಿಸಲಾಗುವುದು ನಿರೀಕ್ಷಿಸಿ…..
ರಘುರಾಜ್ ಹೆಚ್.ಕೆ..9449553305..