ಮಲೆನಾಡಿನಲ್ಲಿ ಇತ್ತೀಚೆಗೆ ಮನಿಗಾಗಿ ಹನಿ ಟ್ರ್ಯಾಪ್ ಮಾಡುವ ಪ್ರಕರಣಗಳು ಹೆಚ್ಚಾಗಿದ್ದು ಕೆಲವು ಪ್ರಕರಣಗಳು ಬೆಳಕಿಗೆ ಬಂದರೆ ಕೆಲವು ಪ್ರಕರಣಗಳು ಅವಮಾನಕ್ಕೆ ಮರ್ಯಾದೆ ಅಂಜಿ ಹಣದ ವ್ಯವಹಾರದಲ್ಲಿ ಮುಗಿದುಹೋಗುತ್ತವೆ ಇತ್ತೀಚಿಗಷ್ಟೇ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯ ವಿರುದ್ಧ ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದು ದೂರು ದಾಖಲಾಗಿ ಸಂಬಂಧ ಪಟ್ಟವರು ಜೈಲು ಸೇರಿದ್ದರು ದುರಂತವೆಂದರೆ ಅದೇ ಗ್ಯಾಂಗ್ ತೀರ್ಥಹಳ್ಳಿಯ ಆಭರಣದ ಅಂಗಡಿಯ ಮಾಲೀಕನೊಬ್ಬನಿಗೆ ಇದೇ ತರಹ ಹನಿ ಟ್ರ್ಯಾಪ್ ಮಾಡಿ ಒಂದಷ್ಟು ಹಣವನ್ನು ಪಡೆದಿದ್ದರು ಆ ಬಂಗಾರದ ಅಂಗಡಿಯ ಮಾಲೀಕ ಮರ್ಯಾದಿಗೆ ಅಂಜಿ ಹಣವನ್ನು ನೀಡಿ ದೂರು ನೀಡದೆ ಸುಮ್ಮನಾಗಿದ್ದನು ಅದೇ ಧೈರ್ಯದ ಮೇಲೆ ಆ ಗ್ಯಾಂಗ್ ಈ ದಂಧೆಯನ್ನು ಮುಂದುವರಿಸಿತ್ತು ನಂತರ ಅರಣ್ಯ ಇಲಾಖೆಯ ಅಧಿಕಾರಿಯ ಕೇಸ್ ನಲ್ಲಿ ಸಿಕ್ಕಿಬಿದ್ದರು. ಹೀಗೆ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟಾಗ ಅವರ ವಿರುದ್ಧ ದಾಖಲಾಗುತ್ತದೆ ಪೊಲೀಸ್ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ ಆದರೆ ದೂರು ನೀಡದೆ ಪೊಲೀಸರು ಕ್ರಮ ಕೈಗೊಳ್ಳುವುದು ಕಷ್ಟ ಇಂಥದ್ದೇ ಒಂದು ಪ್ರಕರಣ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣೆಯಲ್ಲಿ ದಾಖಲಾಗಿದೆ.
ಏನಿದು ಪ್ರಕರಣ :
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ವಾಸಿ ಶ್ರೀಕಾಂತ್ ಹೆಗಡೆ ಎನ್ನುವ ವ್ಯಕ್ತಿ ಹಾಗೂ ಕೈಮರದ ನಿವಾಸಿ ರೇಷ್ಮಾ ಎಂಬುವರು ಪರಸ್ಪರ ವಿರುದ್ಧ ದೂರು ನೀಡಿದ್ದಾರೆ.
ಶ್ರೀಕಾಂತ್ ಹೆಗಡೆ ಹಾಗೂ ರೇಷ್ಮಾ ಗೂ ಏನು ಸಂಬಂಧ..?!
ಶ್ರೀಕಾಂತ್ ಹೆಗಡೆಗೆ ಮೇಗರವಳ್ಳಿ ಸಮೀಪದ ಕೈಮರ ನಿವಾಸಿಯಾದ ರೇಷ್ಮಾ ಎನ್ನುವ ಯುವತಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ನನಗೆ ಒಂದು ಸೈಟ್ ಅಥವಾ ಮನೆ ಕೊಡಿಸಿ ಎಂದು ಹೇಳಿ ಪರಿಚಯವಾಗುತ್ತಾಳೆ ಆ ಪರಿಚಯ ಹಾಗೆ ಮುಂದುವರೆದುಕೊಂಡು ಹೋಗುತ್ತದೆ ಶ್ರೀಕಾಂತ್ ಹೆಗಡೆ ನನಗೆ ಹುಷಾರಿಲ್ಲ ನಾನು ಆ ತರಹದ ಯಾವುದೇ ವ್ಯವಹಾರ ಮಾಡುತ್ತಿಲ್ಲ ಎಂದರು ಕೇಳದ ರೇಷ್ಮಾ ದಯವಿಟ್ಟು ನನಗೆ ಸೈಟ್ ಕೊಡಿಸಿ ಎಂದು ವಿನಂತಿಸುತ್ತಾಳೆ ನಂತರ ಈ ಸಲುಗೆ ಹಾಗೆ ಮುಂದುವರೆದುಕೊಂಡು ಹೋಗುತ್ತದೆ ರೇಷ್ಮಾ ಶ್ರೀಕಾಂತ್ ಹೆಗಡೆ ಮೇಲೆ ಸಲುಗೆಯಿಂದ ಆತನ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ತೆಗೆದುಕೊಳ್ಳುತ್ತಾಳೆ ಹಾಗೆ ಮುಂದುವರಿದು ಕೆಲವು ಅಶ್ಲೀಲ ಮೆಸೇಜ್ ಗಳನ್ನು ಕಳಿಸಲು ಶುರುಮಾಡುತ್ತಾಳೆ ಶ್ರೀಕಾಂತ್ ಹೆಗಡೆ ಕೂಡ ಕೆಲವು ಅಶ್ಲೀಲ ವಿಡಿಯೋಗಳನ್ನು ರೇಷ್ಮಾ ಗೆ ಕಳಿಸುತ್ತಾರೆ ಹೀಗೆ ಇಬ್ಬರ ನಡುವೆ ಸಲುಗೆ ಪ್ರಾರಂಭವಾಗಿ ಶ್ರೀಕಾಂತ್ ಹೆಗಡೆ ಕಳಿಸಿದ ವೈಯಕ್ತಿಕ ವಿಡಿಯೋಗಳನ್ನು ಇಟ್ಟುಕೊಂಡು ರೇಷ್ಮಾ ಗಂಡ ಅಕ್ರಂ ಹಾಗೂ ತೀರ್ಥಹಳ್ಳಿ ಇಂದಿರಾ ನಗರದ ನಗರದ ನಿವಾಸಿಯಾದ ಆಸಿಫ್ ಸೇರಿಕೊಂಡು ಶ್ರೀಕಾಂತ್ ಹೆಗಡೆ ಹಾಗೂ ಆತನ ಮಗ ಕೃತಾರ್ಥ ಹೆಗಡೆಗೆ ಕರೆ ಮಾಡಿ ಕೆಲವು ಅಶ್ಲೀಲ ವಿಡಿಯೋಗಳು ಮೆಸೇಜುಗಳನ್ನು ಕಳುಹಿಸಿ ನಂತರ ಡಿಲೀಟ್ ಮಾಡಿ 30 ಲಕ್ಷ ಹಣ ನೀಡಬೇಕು ಇಲ್ಲವಾದರೆ ನಿಮ್ಮ ತಂದೆಯ ಎಲ್ಲಾ ವಿಡಿಯೋಗಳನ್ನು ಮೆಸೇಜ್ ಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡುತ್ತಾರೆ ಇದರಿಂದ ಭಯಭೀತರಾದ ಶ್ರೀಕಾಂತ್ ಹೆಗಡೆ ಕುಟುಂಬ ಪೊಲೀಸ್ ಇಲಾಖೆಯ ಮರೆ ಹೋಗುತ್ತದೆ ರೇಷ್ಮಾ ಹಾಗೂ ಅಕ್ರಮ್ ವಿರುದ್ಧ ದೂರು ನೀಡುತ್ತಾರೆ. ನಮ್ಮ ವಿಡಿಯೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎನ್ನುವ ದೂರನ್ನು ನೀಡುತ್ತಾರೆ ಮೇಲಾಗಿ ನಾವು ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ಅಸ್ವಸ್ಥರಾಗಿದ್ದು ಇದರಿಂದ ಬಹಳ ಹಿಂಸೆಆಗುತ್ತಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸುತ್ತಾರೆ ಈ ದೂರು ದಾಖಲಾದ ಬೆನ್ನಲ್ಲೇ ರೇಷ್ಮಾ ಕಡೆಯುವರು ಕೂಡ ದೂರು ನೀಡುತ್ತಾರೆ.
ರೇಷ್ಮಾ ದೂರಿನಲ್ಲಿ ಏನಿದೆ..?!
ರೇಷ್ಮಾ ದೂರಿನ ಪ್ರಕಾರ ಕೋಣಂದೂರಿನಲ್ಲಿರುವ ಅವರ ಮನೆ ಮಾರಾಟವಾದ ನಂತರ ಸೈಟ್ ಅಥವಾ ಮನೆ ತೆಗೆದುಕೊಳ್ಳುವ ಉದ್ದೇಶದಿಂದ ಶ್ರೀಕಾಂತ್ ಹೆಗಡೆಯನ್ನು ಸಂಪರ್ಕ ಮಾಡಿ ಶ್ರೀಕಾಂತ್ ಹೆಗಡೆ ಸೈಟ್ ಅಥವಾ ಮನೆ ಕೊಡುಸುವುದಾಗಿ ಭರವಸೆ ನೀಡಿದ್ದರು ನಂತರ ಶ್ರೀಕಾಂತ್ ಹೆಗಡೆ ನಿರಂತರವಾಗಿ ಸಂಪರ್ಕದಲ್ಲಿದ್ದು ಹಲವು ಬಾರಿ ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಮೆಸೇಜ್ ಗಳನ್ನು ವಿಡಿಯೋಗಳನ್ನು ಕಳುಹಿಸುವುದು ಮಾಡುತ್ತಿದ್ದ ಹಾಗೆ ಮುಂದುವರೆದು ಒಂದು ದಿನ ಮನೆಗೆ ಹೋಗಿ ಆಕೆಗೆ ಲೈಂಗಿಕ ಸಂಪರ್ಕ ಮಾಡಲು ಪ್ರಯತ್ನ ಪಟ್ಟ ಈ ವಿಷಯವನ್ನು ನಿನ್ನ ಗಂಡನಿಗೆ ತಿಳಿಸಿದರೆ ನನಗಿರುವ ಜ್ಯೋತಿಷ್ಯದ ಬಲದಿಂದ ನಿನ್ನನ್ನು ನಿನ್ನ ಗಂಡನನ್ನು ಕೊಲೆ ಮಾಡುತ್ತೇನೆ ಎಂದು ಹೆದುರಿಸುತ್ತಾನೆ ಎನ್ನುವ ದೂರನ್ನು ನೀಡಿದ್ದಾಳೆ.
ಅಸಲಿಗೆ ನಡೆದಿದ್ದೇನು..?!
ಶ್ರೀಕಾಂತ್ ಹೆಗಡೆ ರೇಷ್ಮಾ ತನ್ನ ವಿಡಿಯೋಗಳನ್ನು ನನಗೆ ಕಳಿಸಿ ನನ್ನ ವಿಡಿಯೋಗಳನ್ನು ಆಕೆಗೆ ಕಳುಹಿಸಿಕೊಂಡು ಈಗ 30 ಲಕ್ಷ ಹಣಕ್ಕಾಗಿ ಹಣಕ್ಕಾಗಿ ಆಕೆ ಹಾಗೂ ಆಕೆಯ ಪತಿ ಅಕ್ರಮ್ ಬೇಡಿಕೆ ಇಡುತ್ತಿದ್ದಾರೆ ಎನ್ನುವ ದೂರನ್ನು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ರೇಷ್ಮಾ ಕೂಡ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ನನ್ನನ್ನು ಹೆದುರಿಸಲು ಸಾಯಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ದೂರನ್ನು ನೀಡಿದ್ದಾಳೆ.
ಅಸಲಿಗೆ ಈ ಪ್ರಕರಣದಲ್ಲಿ ನಡೆದಿದ್ದೇನು ..?! ಪೊಲೀಸರ ತನಿಖೆಯಲ್ಲಿ ಬಯಲಾಗಬೇಕಾಗಿದೆ ಶ್ರೀಕಾಂತ್ ಹೆಗಡೆ ರೇಷ್ಮಾ ವಿಷಯದಲ್ಲಿ ಇಷ್ಟು ದಿನ ದೂರು ನೀಡದೆ ಮೌನವಾಗಿ ಇದ್ದಿದ್ದು ಏಕೆ..?! ರೇಷ್ಮಾ ಕೂಡ ಶ್ರೀಕಾಂತ್ ವಿರುದ್ಧ ದೂರು ನೀಡದೆ ಮೌನವಾಗಿದ್ದು ಏಕೆ..? ಇಬ್ಬರ ವಿಷಯ ಹೊರಗೆ ಬಂದ ಮೇಲೆ ಬಚಾವಾಗಲು ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಹೀಗೆ ದೂರು ಪ್ರತಿ ದೂರು ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರ..?! 30 ಲಕ್ಷ ಹೊರತುಪಡಿಸಿ ಮುಂಚೆ ರೇಷ್ಮಾ ಮತ್ತು ಶ್ರೀಕಾಂತ್ ಹೆಗಡೆ ನಡುವೆ ವ್ಯವಹಾರ ನಡೆದಿತ್ತಾ..?! ಮಲೆನಾಡಿನಲ್ಲಿ ಅದರಲ್ಲೂ ಮೇಗರವಳ್ಳಿ ಆಗುಂಬೆ ತೀರ್ಥಹಳ್ಳಿ ಭಾಗಗಳಲ್ಲಿ ಈ ತರಹದ ಸಾಕಷ್ಟು ಪ್ರಕರಣಗಳು ಇನ್ನೂ ಹಾಗೆ ಇವೆ ಕೆಲವೊಂದು ಪ್ರಕರಣಗಳ ಬಗ್ಗೆ ಪತ್ರಿಕೆಗೆ ಅಲ್ಪಮಟ್ಟಿನ ಮಾಹಿತಿ ಇದೆ ಕೆಲವರು ತಮಗಿರುವ ಸಂಬಂಧಗಳನ್ನು ಮುಚ್ಚಿಕೊಳ್ಳಲು ಕೆಲವರಿಗೆ ಸೈಟ್ ಕೊಡಿಸಿದ್ದಾರೆ, ಹಣ ನೀಡಿದ್ದಾರೆ, ಹಾಗೆ ಮುಂದುವರೆದು ಅರಣ್ಯ ಇಲಾಖೆಯ ಜಾಗದಲ್ಲಿ ಮನೆ ಮಾಡಿಕೊಟ್ಟಿದ್ದಾರೆ ಇದೆಲ್ಲದರ ಮಾಹಿತಿ ಮುಂದಿನ ದಿನಗಳಲ್ಲಿ ಪತ್ರಿಕೆ ವರದಿ ರೂಪದಲ್ಲಿ ಇಡಲಿದೆ ನಿರೀಕ್ಷಿಸಿ…
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಪತ್ರಿಕೆ ಸಂಗ್ರಹಿಸುತ್ತಿದೆ ನೈಜ ಸತ್ಯ ಹೊರ ತರುವ ಪ್ರಯತ್ನದಲ್ಲಿ ಪತ್ರಿಕೆ ಇದೆ .. ಹಲವು ಓದುಗರ ನಿರೀಕ್ಷೆ ಕೂಡ ಇದೆ ಆಗಿದೆ ಇದರಲ್ಲಿ ಶ್ರೀಕಾಂತ್ ಹೆಗಡೆ ಪಾಲು ಎಷ್ಟಿದೆ..?! ರೇಷ್ಮಾ ಮತ್ತು ಆಕೆಯ ಕುಟುಂಬದ ಪಾಲು ಎಷ್ಟಿದೆ..? ಎನ್ನುವ ಸತ್ಯ ಹೊರ ಬರಬೇಕಾಗಿದೆ… ಈ ತರಹದ ಪ್ರಕರಣಗಳು ಇನ್ನಷ್ಟು ಜನರಿಗೆ ಮಾದರಿಯಾಗಬೇಕಾಗಿದೆ…
ರಘುರಾಜ್ ಹೆಚ್.ಕೆ..9449553305…