ಚನ್ನಪಟ್ಟಣದ ಚುನಾವಣೆಯ ಫಲಿತಾಂಶ ಬರಲು ಇನ್ನೇನು ಕೆಲವೇ ದಿನ ಬಾಕಿ ಇದೆ ಈಗ ಸಿಪಿ ಯೋಗೇಶ್ವರ್ ಗೆ ಬಂಧನದ ಭೀತಿ ಎದುರಾಗಿದೆ.
ಸಿಪಿ ಯೋಗೇಶ್ವರ್ ಮೊದಲನೇ ಪತ್ನಿಯ ಮಗ ಶ್ರವಣ್ ತಂದೆಯ ಮೇಲೆ ಕೇಸ್ ದಾಖಲಿಸಿದ್ದಾರೆ ತನ್ನ ಸಹಿಯನ್ನು ನಕಲಿ ಮಾಡಿದ ಆರೋಪದಡಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದು ನಾಳೆ ವಿಚಾರಣೆ ನಡೆಯಲಿದೆ.
ಏನಿದು ಪ್ರಕರಣ :
ಸಿಪಿ ಯೋಗೇಶ್ವರ್ ಮೊದಲನೇ ಪತ್ನಿ ಹಾಗೂ ಮಗ ಶ್ರವಣ್ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು ಆದರೆ ಇದನ್ನು ಸಿಪಿ ಯೋಗೇಶ್ವರ್ ಪುತ್ರ ಶ್ರವಣ್ ಅವರ ಸಹಿಯನ್ನು ನಕಲು ಮಾಡಿ ತಮ್ಮ ಮಗಳು ನೀಶಾಗೆ ಶ್ರವಣ್ ಹಾಗೂ ಮೊದಲನೇ ಪತ್ನಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ದಾಖಲೆ ನಿರ್ಮಿಸಿದ್ದಾರೆ ಎಂದು ದಾವೆ ಹೊಡಿದ್ದಾರೆ. ಅಲ್ಲದೆ ಈಗ ನನಗೂ ಅದರಲ್ಲಿ ಪಾಲು ಬೇಕು ಎಂದು ಕೇಳುತ್ತಿದ್ದಾರೆ ತನ್ನ ತಂದೆ ಸಿಪಿ ಯೋಗೇಶ್ವರ್ ತನ್ನ ಸಹಿಯನ್ನು ನಕಲು ಮಾಡಿ ಮನೆಯನ್ನು ತನ್ನ ಅಕ್ಕನಿಗೆ ಗಿಫ್ಟ್ ಡಿಡ್ ನೀಡಿದ್ದಾರೆ ಆದರೆ ಇದರಲ್ಲಿ ನನಗೆ ಒಪ್ಪಿಗೆ ಇಲ್ಲ ನನಗೂ ಅದರಲ್ಲಿ ಪಾಲು ಬೇಕು ಎಂದು ಕೇಳುತ್ತಿದ್ದಾರೆ.
ತಂದೆ ಮತ್ತು ಮಗನ ನಡುವೆ ಸಂಭಾಷಣೆ :
ತಂದೆ ಸಿಪಿ ಯೋಗೇಶ್ವರ್ ಹಾಗೂ ಮಗ ಶ್ರವಣ್ ನಡುವೆ ಫೋನ್ ಸಂಭಾಷಣೆ ನಡೆದಿದ್ದು ಇದರಲ್ಲಿ ಸಿಪಿ ಯೋಗೇಶ್ವರ್ ಸ್ಪಷ್ಟವಾಗಿ ಆಸ್ತಿ ಮಾರಾಟವಾಗಬಾರದು ಅಂತ ನಾನೇ ಸಹಿಯನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ ನಾಳೆ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲಿ ಇದು ಸಾಬೀತಾದರೆ ಸಿಪಿ ಯೋಗೇಶ್ವರ್ ಬಂಧನ ವಾಗುವ ಎಲ್ಲಾ ಸಾಧ್ಯತೆ ಇದೆ.