
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸುರಗಿ ಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ದಡಿಯಲ್ಲಿ ಕೈತೋಟದ ಮಹತ್ವ ದ ಬಗ್ಗೆ ಗುಂಪು ಚರ್ಚೆ ಹಾಗೂ ಕುಂಡಲಿ ಮಿಶ್ರಣ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.ಕೈತೋಟದ ಬಗ್ಗೆ ಮಹತ್ವ:-ಸಾಮಾನ್ಯವಾಗಿ ಹಳ್ಳಿಮನೆಗಳ ಹಿತ್ತಲಿನಲ್ಲಿ ಸ್ವಲ್ಪ ಜಾಗವನ್ನು ಬಿಟ್ಟಿಕೊಂಡಿರುತ್ತಾರೆ.
ಈ ಜಾಗದಲ್ಲಿ ಮನೆಗೆ ಬೇಕಾಗಿರುವ ತರಕಾರಿಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಬದನೆಕಾಯಿ, ಕರಿಬೇವು, ಸೊಪ್ಪುಗಳಾದ ಕೊತ್ತಂಬರಿ, ಪಾಲಕ್, ಪುದಿನಾ, ಮೆಂತ್ಯ ,ದಂಟು ಸೊಪ್ಪು,ಹೂವಿನ ಗಿಡಗಳಾದ ಚೆಂಡು, ಸೇವಂತಿಗೆ,ಕನಕಾಂಬರ, ಮಲ್ಲಿಗೆ,ಗುಲಾಬಿ ಹಾಗೂ ಹಣ್ಣುಗಳಾದ ಪೇರಲೆ,ಪಪಾಯ ಗಿಡಗಳನ್ನು ಹಾಕಿಕೊಳ್ಳಬಹುದು. ಹೀಗೆ ಕೈತೋಟ ಮಾಡಿಕೊಳ್ಳುವುದರಿಂದ ತರಕಾರಿಯ ಖರ್ಚು ಕಡಿಮೆ ಮಾಡಿಕೊಳ್ಳಬಹುದಲ್ಲದೆ ರಾಸಾಯನಿಕ ಮುಕ್ತ ತರಕಾರಿಗಳನ್ನು ಸೇವಿಸಬಹುದು. ಹಾಗಾಗಿ ಪ್ರತಿಯೊಂದು ಮನೆಯಲ್ಲಿ ಕೈತೋಟ ಮಾಡಿಕೊಳ್ಳುವುದು ಅವಶ್ಯಕವಾಗಿದೆ.ಕುಂಡಲಿ ಮಿಶ್ರಣ ತಯಾರಿಕೆ-ಪದ್ಧತಿ ಪ್ರಾತ್ಯಕ್ಷಿಕೆ:-ಪ್ರತಿಯೊಬ್ಬರು ತಮ್ಮ ಮನೆಯು ಚೆಂದವಾಗಿ ಕಾಣಬೇಕೆಂದು ಮನೆಯ ಮುಂದೆ ಗಿಡಗಳನ್ನು ಕುಂಡಲಿಗಳಲ್ಲಿ ಹಾಕಿಕೊಂಡಿರುತ್ತಾರೆ.
ಕುಂಡಲಿಗೆ ಬರೀ ಮಣ್ಣನ್ನು ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುವುದಿಲ್ಲ. ಹಾಗಾಗಿ ಮಣ್ಣು,ಮರಳು, ಗೊಬ್ಬರ ಹಾಗೂ ತೆಂಗಿನ ನಾರಿನ (ಕೋ ಕೋ ಪೀಟ್) ಸಮಮಿಶ್ರಣ ತಯಾರಿಸಿಕೊಂಡು ಕುಂಡಲಿಗೆ ಹಾಕಬೇಕು, ನಂತರ ಗಿಡವನ್ನು ನೆಡಬೇಕು. ಹೀಗೆ ಮಾಡಿದರೆ ಗಿಡದ ಬೇರಿಗೆ ಬೇಕಾದ ನೀರು ಗಾಳಿ ಹಾಗೂ ಪೋಷಕಾಂಶಗಳು ದೊರೆಯುತ್ತದೆ ಹಾಗೆಯೇ ಗಿಡವು ಚೆನ್ನಾಗಿ ಬೆಳೆಯುತ್ತದೆ, ಎಂದು ವಿದ್ಯಾರ್ಥಿಗಳು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ರಘುರಾಜ್ ಹೆಚ್ ಕೆ..9449553305…