ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ಕೊನೆಗೂ ಅಂತ್ಯಗೊಂಡಿದ್ದು ಫಲಿತಾಂಶ ಬಾಕಿ ಉಳಿದಿದೆ.
3063 ಮತಗಳಿದ್ದ ಚುನಾವಣೆಯಲ್ಲಿ 2062 ಮತಗಳು ಚಲಾವಣೆಯಾದವು ಸುಮಾರು 67 ಪರ್ಸೆಂಟ್ ಮತ ಚಲಾವಣೆ ಆಗಿದೆ.
ಸುಮಾರು 300ಕ್ಕೂ ಅಧಿಕ ಮರಣ ಹೊಂದಿದ ಸದಸ್ಯರ ಹೆಸರುಗಳು ಹಾಗೆ ಬಾಕಿ ಉಳಿದಿದ್ದವು ಆ ಮತಗಳ ಹೆಸರಿನಲ್ಲಿ ಬೇರೆಯವರು ಮತ ಚಲಾವಣೆ ಮಾಡಬಹುದು ಎನ್ನುವ ಅನುಮಾನವನ್ನು ನಿರ್ದೇಶಕರ ಚುನಾವಣೆಗೆ ನಿಂತ ಕೆಲವೊಂದು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದರು.
ಆದರೆ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗದೆ ಸುಸೂತ್ರವಾಗಿ ಮತದಾನ ಚಲಾವಣೆ ಯಾಗಿದ್ದು 33 ಜನ ಅಭ್ಯರ್ಥಿಗಳ ಭವಿಷ್ಯ ಮತದಾನದ ಪೆಟ್ಟಿಗೆಯಲ್ಲಿದ್ದು ಸುಮಾರು ಒಂಬತ್ತರಿಂದ ಹತ್ತು ಗಂಟೆ ಬಹುತೇಕ ಯಾರು ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ ಎನ್ನುವುದು ಗೊತ್ತಾಗಲಿದೆ.
ಹೊಸಬರು ಒಂದಷ್ಟು ಜನ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.