ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು ಕೆಲವೊಂದು ಕಡೆ ಅಧಿಕಾರಿಗಳ ದಾಳಿಯಿಂದ ನಿಯಂತ್ರಣಕ್ಕೆ ಬಂದಿದೆ ಆದರೆ ಅದು ಕ್ಷಣ ಮಾತ್ರ ಮತ್ತೆ ಅವರ ಆರ್ಭಟ ಶುರುವಾಗುತ್ತದೆ.

ತುಂಗೆಯ ಒಡಲಿಗೆ ಜೆಸಿಬಿ ಇಟ್ಟು ಕನ್ನ ಹಾಕುವ ಖದೀಮರು ದಂಧೆಯನ್ನು ಬಿಡಲ್ಲ ಅಧಿಕಾರಿಗಳು ಬೆನ್ನು ಹತ್ತಬೇಕು ಆಗ ಮಾತ್ರ ನಿಯಂತ್ರಣ ಸಾಧ್ಯ ನಿರಂತರವಾಗಿ ಎಫ್ಐ ಆರ್ ಗಳು ದಾಖಲಾಗಬೇಕು ಜೆಸಿಬಿ, ಟ್ಯಾಕ್ಟರ್ ,ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಳ್ಳಬೇಕು.
ಗುರುಪುರ ಹಾಡೋನಹಳ್ಳಿಯಲ್ಲಿ ಹಗಲು ರಾತ್ರಿ ಎನ್ನದೇ ಮರಳು ಲೂಟಿ..!

ನಗರದ ಹೊರವಲಯದ ಗುರುಪುರ ಹಾಗೂ ಹಾಡೋನಹಳ್ಳಿಯಲ್ಲಿ ಹಗಲು ರಾತ್ರಿ ಎನ್ನದೇ ಮರಳು ಲೂಟಿ ನಡೆಯುತ್ತಿದ್ದು ಪತ್ರಿಕೆ ಎಕ್ಸ್ಕ್ಲೂಸಿವ್ ಫೋಟೋಗಳನ್ನು ಹಾಕಿ ಸುದ್ದಿ ಮಾಡಿದೆ ಗಣಿ ಇಲಾಖೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಈಗ ದಾಳಿ ಮಾಡಿದರು ಕೂಡ ಸಾಕ್ಷಿ ಸಮೇತ ಎಲ್ಲರೂ ಸಿಕ್ಕಿ ಬೀಳುತ್ತಾರೆ.