ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಕಳೆದ ನಾಲ್ಕು ವರ್ಷಗಳಿಂದ ಖಾಲಿ ಇದ್ದೇನೆ ನನ್ನನ್ನು ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಬೇಡವಾದ ಹುದ್ದೆಗಳನ್ನು ನೀಡಿದೆ ಎನ್ನುವ ಬೇಸರವನ್ನು ಪರೋಕ್ಷವಾಗಿ ಹೊರಹಾಕಿದರು ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಡಿಐಜಿಪಿ ರವಿ ಡಿ ಚನ್ನಣ್ಣನವರ್ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಕೇಂದ್ರ ಸಚಿವ ವಿ ಸೋಮಣ್ಣ ನಂತರ ಮಾತನಾಡಿ ನಮ್ಮ ಸರ್ಕಾರ ವಿದ್ದಾಗ ರವಿಯವರನ್ನು ಚೆನ್ನಾಗಿ ನಡೆಸಿಕೊಂಡಿದ್ದೇವೆ ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ ಆದರೆ ಈ ಸರ್ಕಾರ ಅವರ ಸೇವೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಅವರು ಒಪ್ಪಿದರೆ ಕೇಂದ್ರದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲು ನಾವು ಸಿದ್ಧ ಎನ್ನುವ ಭರವಸೆಯನ್ನು ನೀಡಿದರು ಜೊತೆಗೆ ಹತಾಶರಾಗುವ ಅವಶ್ಯಕತೆ ಇಲ್ಲ ತಾಳ್ಮೆ ಇರಲಿ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದು ಸಮಾಧಾನಪಡಿಸಿದರು.