
ಆಗ್ರಾದಲ್ಲಿ ಶುಕ್ರವಾರ ತರಬೇತಿ ವೇಳೆ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್ ತೆರೆದುಕೊಳ್ಳದೇ ವಾಯುಪಡೆಯ ವಾರೆಂಟ್ ಆಫಿಸರ್, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ಕೃಷಿಕ ಸುರೇಶ್ ಹಾಗೂ ನಾಗರತ್ನ ದಂಪತಿ ಪುತ್ರ, 36 ವರ್ಷದ ಜಿ.ಎಸ್.ಮಂಜುನಾಥ್ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ.
ವಾಯು ಸೇನೆಯಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಾ ಸಂಕೂರು ಹಾಗೂ ಸುತ್ತಲಿನ ಗ್ರಾಮಗಳ ಯುವ ಸಮೂಹಕ್ಕೆ ಸ್ಫೂರ್ತಿ ಆಗಿದ್ದ ಮಂಜುನಾಥ್ ಅವರ ಅಕಾಲಿಕ ಮರಣ ದುಖಃ ತಂದಿದೆ.
ವಾಯುಸೇನೆಯ ಈ ಹೆಮ್ಮೆಯ ಅಧಿಕಾರಿ ಸದಾ ನಮ್ಮೆಲ್ಲರ ಸ್ಮರಣೆಯಲ್ಲಿರುತ್ತಾರೆ.ಮಂಜುನಾಥ್ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ, ಸಂಬಂಧಿಗಳಿಗೆ, ಸಂಕೂರು ಗ್ರಾಮಸ್ಥರಿಗೆ ನೀಡಲಿ ಎಂದು ಸಚಿವರು ಸಂತಾಪ ವ್ಯಕ್ತಪಡಿಸಿದ್ದಾರೆ…