ಶಿವಮೊಗ್ಗ: ನಗರದ ಆಲುಕೊಳ ಸರ್ವೆ ನಂಬರ್ 27, ದುರ್ಗಾ ಲೇಔಟ್, ಗಾಡಿಕೊಪ್ಪ ,ಬಿ.ಎಚ್. ರಸ್ತೆ ಗಾಡಿಕೊಪ್ಪ ಸರ್ಕಲ್ ನಿಂದ ಎಡಭಾಗ ತಾಂಡ ರಸ್ತೆ ಬಲಭಾಗ ಎರಡನೇ ಕ್ರಾಸ್, ದುರ್ಗಮ್ಮ ದೇವಸ್ಥಾನದಿಂದ ಮುಂದೆ ಪೋಲೀಸ್ ಲೇಔಟ್ ಹಾಗು ದುರ್ಗಾ ಲೇಔಟ್ ನ ಕನೆಕ್ಟಿವಿಟಿ ರಸ್ತೆಗಾಗಿ 30 ಅಡಿ ಜಾಗ ಬಿಡಲಾಗಿದೆ.
ಈ ಬಡಾವಣೆಯಲ್ಲಿ 70×30 ಅಳತೆಯ ನಿವೇಶನ ಮಾಡಿ ೧೯೮೫-೮೬ ರಲ್ಲಿ ಹಂಚಿಕೆ ಮಾಡಲಾಗಿದೆ.ಇದಕ್ಕೂ ಮೊದಲು ೧೯೬೩ ರಲ್ಲಿಯೇ ಜಿಲ್ಲಾಧಿಕಾರಿಯವರು ಒಂದು ಎಕರೆಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿರುತ್ತಾರೆ.
No.R.Did.A5ALN.39/62-63.ಸದರಿ ಬಡಾವಣೆಗೆ ಅನುಕೂಲವಾಗುವಂತೆ ೩೦ ಅಡಿ ಸಂಪರ್ಕ ರಸ್ತೆ ಬಿಡಲಾಗಿದ್ದರೂ ಕೂಡ ರೆವಿನ್ಯೂ ಸ್ವರೂಪದ ಬಡಾವಣೆ ಎಂಬ ಕಾರಣಕ್ಕೆ ರಸ್ತೆ ಜಾಗವನ್ನೇ ಬಂದು ಮಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ.
ಇದೀಗ ಸಂಖ್ಯೆ 63 ರಲ್ಲಿ ಇಡೀ ರಸ್ತೆಜಾಗಕ್ಕೆ ಕಟ್ಟಡ ನಿರ್ಮಿಸಲಾಗುತ್ತಿದೆ. ಸದರಿ ನಿವೇಶನ ಉತ್ತರಕ್ಕೆ 43 ಅಡಿ ಅಗಲ, ದಕ್ಷಿಣಕ್ಕೆ 13 ಅಡಿ ಅಗಲವಿದೆ. ಇದು ಕೋಚ ಇರುವ ನಿವೇಶನವಾಗಿದೆ. ಸದರಿ ನಿವೇಶನ ಅಲಿನೇಶನ್ ಆಗಿಲ್ಲ. ಮಹಾನಗರ ಪಾಲಿಕೆಯಿಂದ ಕಟ್ಟಡ ಪರವಾನಿಗೆ ಪಡೆದಿಲ್ಲ.ಸೂಡ ಅಪ್ರೂಲ್ ಇಲ್ಲ. ರೆವಿನ್ಯೂ ಸ್ವರೂಪ ಈ ನಿವೇಶನದಲ್ಲಿ ಕಟ್ಟಡ ನಿರ್ಮಾಣದ ಯಾವುದೇ ನಿಯಮಗಳನ್ನು ಪಾಲಿಸದೆ ಕಟ್ಟಲಾಗುತ್ತಿದೆ.
೩೦ ಅಡಿ ಸಂಪರ್ಕ ರಸ್ತೆಯಲ್ಲಿ ಸರಿಸುಮಾರು೧೫ ಅಡಿಗೂ ಹೆಚ್ಚು ಜಾಗ ಒತ್ತುವರಿ ಮಾಡಿ ಪಿಲ್ಲರ್ ನಿರ್ಮಿಸಲಾಗಿದೆ. ಇದರಿಂದಾಗಿ ಪೊಲೀಸ್ ಲೇ ಔಟ್ ನ ಕೊಳಚೆ ನೀರು ಸರಿಯಾಗಿ ಹೋಗಲು ಸಾಧ್ಯವಿಲ್ಲ. ಸಂಪರ್ಕ ರಸ್ತೆಗೂ ಜಾಗ ಕಿರಿದಾಗಿದೆ. ನಕಾಶೆಯಲ್ಲಿ ತೋರಿಸಿರುವ 43×13 ಅಡಿ ಅಳದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಯಮ ಉಲ್ಲಂಘನೆ ಮಾಡಿರುವುದರಿಂದ ಎರಡೂ ಬಡಾವಣೆ ನಿವಾಸಿಗಳಿಗೆ ಸಮಸ್ಯೆಯಾಗಲಿದೆ.
ದುರ್ಗಾ ಲೇಔಟ್ ಎರಡನೇ ಕ್ರಾಸ್ ನಲ್ಲಿ ಈಗಾಗಲೇ ದೇವಸ್ಥಾನ ನಿರ್ಮಾಣ ಮಾಡಿರುವುದರಿಂದ ಎರಡೂ ಬದಿಯಲ್ಲಿ ರಸ್ತೆ ಬಂದ್ ಆಗಿದೆ. ಇದು ಕೂಡ ಬಂದ್ ಆದರೆ ಸಂಪರ್ಕ ರಸ್ತೆಯೇ ಇಲ್ಲದಂತಾಗಲಿದೆ.
ಪಾಲಿಕೆ ಅಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮವಾಗುವಂತೆ ನೋಡಿಕೊಂಡು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ…