ತೀರ್ಥಹಳ್ಳಿ : ಪಟ್ಟಣದ ರಂಜದ್ ಕಟ್ಟೆ ಸಮೀಪ ಹೊನ್ನಾಳಿ ಮೂಲದ ಇಬ್ಬರು ವ್ಯಕ್ತಿಗಳು ಮಂಗಳೂರಿಗೆ ಹೋಗುತ್ತಿದ್ದಾಗ ಮಧ್ಯ ನಮಾಜ್ ಮಾಡಲು ತಮ್ಮ ವೆಹಿಕಲನ್ನು ನಿಲ್ಲಿಸಿ ತೆರಳಿದ್ದಾಗ ಬರುವಷ್ಟರಲ್ಲಿ ಗಾಡಿಯಲ್ಲಿದ್ದ 30 ಲಕ್ಷ ಕಳ್ಳತನವಾಗಿದೆ.
ಏನಿದು ಪ್ರಕರಣ :
ತೀರ್ಥಹಳ್ಳಿ ಸಮೀಪ ರಂಜದ ಕಟ್ಟೆ ಹತ್ತಿರ ಸ್ಕ್ರಾಪ್ ಬಿಜಿನೆಸ್ ಮಾಡುವ ಮಾಲೀಕರು ಹಾಗೂ ಅವರ ಡ್ರೈವರ್ ಇಬ್ಬರು ವ್ಯಾಪಾರದ ನಿಮಿತ್ತ ಮಂಗಳೂರಿಗೆ ತೆರಳುತ್ತಿದ್ದಾಗ ನಮಾಜ್ ಮಾಡಲು ರಂಜದ್ ಕಟ್ಟೆಯ ಮಸೀದಿ ಹತ್ತಿರ ತಮ್ಮ ಗಾಡಿಯನ್ನು ನಿಲ್ಲಿಸಿ ತೆರಳಿದ್ದಾಗ ಬರುವಷ್ಟರಲ್ಲಿ ತಮ್ಮ ಗಾಡಿ ಅಲ್ಲಿ ಇರಲಿಲ್ಲ ಹುಡುಕಲು ಶುರು ಮಾಡಿದಾಗ ಸ್ಥಳೀಯರು ಇವರಿಗೆ ಸಹಕರಿಸಿದರು ಅಷ್ಟರಲ್ಲಿ ಸ್ವಲ್ಪ ಮುಂದೆ ಗಾಡಿ ಪತ್ತೆಯಾಗಿತ್ತು ಅಷ್ಟರಲ್ಲಿ ಪೋಲಿಸಿನವರು ಬಂದಿದ್ದರು ಆದರೆ ಗಾಡಿಯಲ್ಲಿದ್ದ ಬ್ಯಾಗಿನಲ್ಲಿ 30 ಲಕ್ಷ ಹಣ ಕಳ್ಳತನವಾಗಿ ಬರಿ ಬೆಡ್ ಶೀಟ್ ಮಾತ್ರ ಉಳಿದುಕೊಂಡಿತ್ತು ಪ್ರಕರಣ ಈಗ ತೀರ್ಥಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ತಲುಪಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆದರೆ ಇದ್ದ ಇಬ್ಬರಲ್ಲಿ ಕದ್ದವರು ಯಾರು..?! ಎನ್ನುವ ಪ್ರಶ್ನೆ ಮೂಡುತ್ತದೆ ಏಕೆಂದರೆ ಹಣ ಆ ಗಾಡಿಯಲ್ಲಿ ಇದ್ದಿದ್ದು ಇಬ್ಬರಿಗೆ ಗೊತ್ತು ಮಾಲಿಕ ಕಳ್ಳತನ ಮಾಡಲ್ಲ ಡ್ರೈವರ್ ಕಡೆಯವರು ಏನಾದರೂ ಇದರಲ್ಲಿ ಪಾಲುದಾರರ..?! ಅಥವಾ ಇವರು ಹಣ ತೆಗೆದುಕೊಂಡು ಹೋಗುತ್ತಿರುವ ವಿಷಯ ಗೊತ್ತಾಗಿದ್ದಾದರೂ ಹೇಗೆ..?! ಪೊಲೀಸರ ವಿಚಾರಣೆಯಿಂದ ಎಲ್ಲಾ ಹೊರ ಬರಬೇಕಾಗಿದೆ…
ರಘುರಾಜ್ ಹೆಚ್.ಕೆ..9449553305..