ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಗೋವಾದಿಂದ ಬರುವ ಮಧ್ಯ ಸರಬರಾಜಾಗುತ್ತಿದ್ದು ಅದರಲ್ಲೂ ತೀರ್ಥಹಳ್ಳಿ ಸಾಗರ ಹೊಸನಗರ ಭಾಗಗಳಲ್ಲಿ ಇದು ದಂಧೆಯಾಗಿ ಮಾರ್ಪಟ್ಟಿದೆ ದುರಂತವೆಂದರೆ ಅಬಕಾರಿ ಇಲಾಖೆ ಅಧಿಕಾರಿಗಳೇ ಇದನ್ನು ನೋಡಿಕೊಂಡು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ. ದೂರು ನೀಡಿದ್ದರು ಕೂಡ ಕ್ರಮ ಕೈಗೊಳ್ಳುವ ಗೋಜಿಗೆ ಹೋಗುವುದಿಲ್ಲ ಎಂದರೆ ಇವರ ಪಾತ್ರ ಎಷ್ಟಿರಬಹುದು? ನೀವೇ ಊಹಿಸಿ ಅದರಲ್ಲೂ ತೀರ್ಥಹಳ್ಳಿಯಲ್ಲಿ ಒಬ್ಬನಿದ್ದಾನೆ ಇನ್ಸ್ಪೆಕ್ಟರ್ ಆತನಿಗೆ ಗೋವಾ ಮಧ್ಯ ಕಂಡರೆ ಬಲು ಪ್ರೀತಿ ಹಾಗೆ ಮಾರುವವರ ಮೇಲೆ ವಿಶೇಷವಾದ ಗೌರವ ಹಾಗಾಗಿ ಆತ ಏನನ್ನು ಮಾಡುವುದಿಲ್ಲ ದೂರು ಕೊಟ್ಟರು ಕ್ರಮ ಕೈಗೊಳ್ಳುವುದಿಲ್ಲ ಎಲ್ಲೋ ಅಮಾವಾಸ್ಯೆ ಹುಣ್ಣಿಮೆಗೆ ಎಂಬಂತೆ ಒಂದೊಂದು ಕಡೆ ನಿಖರವಾದ ಮಾಹಿತಿಯ ಆಧಾರದ ಮೇಲೆ ಕೇಸ್ ದಾಖಲಿಸುತ್ತಾರೆ ಇಂಥದ್ದೊಂದು ಪ್ರಸಂಗ ಸಾಗರದಲ್ಲಿ ನಡೆದಿದ್ದು ವಿಶ್ವನಾಥ್ ಎಂಬ ವ್ಯಕ್ತಿ ಗೋವದ ಮಧ್ಯ ಸಾಗಿಸುತ್ತಿದ್ದ ಸಂದರ್ಭದಲ್ಲಿ ಆತನನ್ನು ಹಿಡಿದು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.. 138.06 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದು, GA 08 F 3312 ಸಂಖ್ಯೆಯ ಮಾರುತಿ ಸುಜುಕಿ ಕಾರನ್ನು ಸಹ ವಶಪಡಿಸಿಕೊಂಡಿದ್ದಾರೆ.