Home ಶಿವಮೊಗ್ಗವೈಭವ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆಗೆ ಮನವಿ…

ವೈಭವ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆಗೆ ಮನವಿ…

by EDITOR NEWS WARRIORS
0 comments

ಶಿವಮೊಗ್ಗ, >ಸೆಪ್ಟೆಂಬರ್> 22 : ನಗರದಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ಈ ಬಾರಿ ವೈಭವ ಮತ್ತು ಸಾಂಪ್ರದಾಯಿಕವಾಗಿ ಮೈಸೂರು ಮಾದರಿಯಲ್ಲಿ 09 ದಿನಗಳ ಕಾಲ ನಡೆಸಬೇಕೆಂದು ಮಹಾನಗರಪಾಲಿಕೆ ಆಡಳಿತ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಪಾಲಿಕೆ ಸಭೆಯಲ್ಲಿ ಮನವಿ ಮಾಡಿದರು. ನಾಡಹಬ್ಬ ದಸರಾ ಆಚರಣೆಯನ್ನು ನಡೆಸುವ ಸಂಬಂಧ ಇಂದು ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪೂಜ್ಯ ಮಹಾಪೌರರಾದ ಸುನೀತಾ ಎಸ್ ಅಣ್ಣಪ್ಪ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಅವರು ಮನವಿ ಸಲ್ಲಿಸಿದರು. ಸದಸ್ಯರಾದ ಹೆಚ್.ಸಿ.ಯೋಗೀಶ್ ಮಾತನಾಡಿ, ದಸರಾ ಹಬ್ಬ ಆಚರಣೆಗಾಗಿ ಸರ್ಕಾರಕ್ಕೆ ರೂ.2 ಕೋಟಿ ಪ್ರಸ್ತಾವನೆ ಸಲ್ಲಿಸಿರುವುದು ಅಭಿನಂದನಾರ್ಹ. ಈ ಅನುದಾನದೊಂದಿಗೆ ಪಾಲಿಕೆಯ ಬಜೆಟ್ ರೂ.50 ಲಕ್ಷ ಮತ್ತು ಇತರೆ ಉಳಿಕೆ ಅನುದಾನ ಸೇರಿಸಿ, ಸಮಿತಿಗಳನ್ನು ರಚಿಸಿ ಈ ಬಾರಿ ಅದ್ದೂರಿ ಹಬ್ಬ ಆಚರಿಸುವಂತೆ ಸಲಹೆ ನೀಡಿದರು. ಸದಸ್ಯರಾದ ನಾಗರಾಜ ಕಂಕಾರಿ, ಸಾಂಪ್ರದಾಯಿಕ ಅದ್ದೂರಿತನಕ್ಕೆ ಒತ್ತು ನೀಡಬೇಕು. ಹಾಗೂ ಬಜೆಟ್ ಮತ್ತು ಹಬ್ಬದ ಮಾರ್ಗಸೂಚಿ ನಿಗದಿಯಾದ ನಂತರ ಸಭೆ ನಡೆಸಿ ನಿರ್ಧರಿಸುವುದು ಒಳಿತು ಎಂದರು. ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗನಾಥ್ ಮತ್ತು ಸದಸ್ಯರಾದ ರಮೇಶ್ ಹೆಗ್ಡೆ ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಬಾರಿ ವೈಭವದ ದಸರಾ ಆಚರಣೆಗೆ ಹಾಗೂ ಮೈಸೂರಿನಲ್ಲಿ ಆಚರಿಸುವಂತೆ 09 ದಿನಗಳ ಆಚರಣೆಗೆ ಪಾಲಿಕೆ ಸಕಲ ಸಿದ್ದತೆ ಮಾಡಿಕೊಳ್ಳಬೇಕು.ಕೋವಿಡ್ ಪ್ರಮಾಣ ಕಡಿಮೆ ಇದೆ. ಆದರೂ ಸರ್ಕಾರದ ಮಾರ್ಗಸೂಚಿಯನ್ವಯ ಎಚ್ಚರಿಕೆಯಿಂದ ಹಬ್ಬದ ಆಚರಣೆ ಮಾಡಬೇಕು. ಅನುದಾನದ ಬಗ್ಗೆ ಗೊಂದಲ ಬೇಡ. ವಿಜೃಂಭಣೆಯ ಆಚರಣೆಗೆ ಸಭೆ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿದರು. ಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ ಮಾತನಾಡಿ, ದಸರಾ ಆಚರಣೆಗೆ ಸರ್ಕಾರದಿಂದ ಇದುವರೆಗೆ ಯಾವುದೇ ಮಾರ್ಗಸೂಚಿ ಬಿಡುಗಡೆ ಆಗಿಲ್ಲ. ಪ್ರಸ್ತುತ ಮಾರ್ಗಸೂಚಿಯಂತೆ ಮದುವೆ, ಇತರೆ ಸಮಾರಂಭ ಹೊರತುಪಡಿಸಿ ಸಾರ್ವಜನಿಕ ಕಾರ್ಯಕ್ರಮ ಮಾಡುವಂತಿಲ್ಲ. ಸಭಾಂಗಣದ ಶೇ.50 ಆಸನ ವ್ಯವಸ್ಥೆಯಲ್ಲಿ ಸಮಾರಂಭ ನಡೆಸಬೇಕು. ನಗರದಲ್ಲಿ ಪ್ರಸ್ತುತ 16 ಕಂಟೈನ್‍ಮೆಂಟ್ ವಲಯಗಳಿದ್ದು 78 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಬಜೆಟ್ ನಿಗದಿಗೆ ಸಂಬಂಧಿಸಿದಂತೆ ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್ ಬಿಡುಗಡೆಯಾಗದೆ ಸರಳ ಆಚರಣೆ ಮಾಡಲಾಗಿತ್ತು. ಈ ಬಾರಿ ದಸರಾ ಆಚರಣೆಗೆ ರೂ.2 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ.70.17 ಆದಾಯ ತೆರಿಗೆ ಸಂಗ್ರಹ ಆಗಿದ್ದು ಶೇ.100 ಸಂಗ್ರಹವಾದರೆ ರೂ.50 ಲಕ್ಷ ಆಚರಣೆಗೆ ನಿಗದಿಪಡಿಸಲಾಗುವುದು ಎಂದರು. ಮಹಾಪೌರರು ಮಾತನಾಡಿ, ತಾವು ಈಗಾಗಲೇ ಸರ್ಕಾರಕ್ಕೆ ರೂ.2 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಮೈಸೂರು ರೀತಿಯಲ್ಲಿ 9 ದಿನಗಳ ಆಚರಣೆಗೆ ಪಾಲಿಕೆ ಸಿದ್ದತೆ ನಡೆಸಿಕೊಳ್ಳಲು ತಯಾರಿದ್ದು, ಸರ್ಕಾರದಿಂದ ಹಬ್ಬ ಆಚರಣೆ ಮಾರ್ಗಸೂಚಿ ಬಂದ ನಂತರ ಸಮಿತಿಗಳ ರಚನೆ ಮತ್ತು ಆಚರಣೆಗೆ ತಯಾರಿ ಆರಂಭಿಸಲಾಗುವುದು ಎಂದರು. ಸಭೆಯಲ್ಲಿ ಸದಸ್ಯೆ ಅನಿತಾ ರವಿಶಂಕರ್, ಧೀರರಾಜ್, ಮಂಜುನಾಥ್, ಆರ್.ಸಿ.ನಾಯಕ್ ಇತರೆ ಸದಸ್ಯರು ಸಲಹೆಗಳನ್ನು ನೀಡಿದರು.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...