
ಗೃಹ ಸಚಿವರು ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರು ವಿಶೇಷ ಕಾಳಜಿವಹಿಸಿ ಆಗುಂಬೆ ಘಾಟ್ ಗೆ 6.04 ಕೋಟಿ ಮಂಜೂರು ಮಾಡಲು ಯಶಸ್ವಿಯಾಗಿದ್ದು.
ಉಡುಪಿ ರಾಷ್ಟ್ರೀಯ ಹೆದ್ದಾರಿ 169(ಎ )ಮಾರ್ಗದ ಆಗುಂಬೆ ಘಾಟಿ 33ನೇ ಕಿಲೋ ಮೀಟರ್ ನಿಂದ 51ನೇ
ಕಿಲೋ ಮೀಟರ್ ವರೆಗೆ ಡಾಮರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ದಿನ ನಿತ್ಯ ಸಾಕಷ್ಟು ವಾಹನಗಳು ಓಡಾಡುವ ಆಗುಂಬೆ ಘಾಟ್ ಗೆ ಮರುಡಾಮರೀಕರಣ, ರಸ್ತೆ ದುರಸ್ತಿ ಮಾಡಿಸಿ ಸಂಚಾರವನ್ನು ಸುಗಮಗೊಳಿಸಲು ಈ ಹಣವನ್ನು ಬಿಡುಗಡೆ ಗೊಳಿಸಲಾಗಿದೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899..