Tuesday, April 29, 2025
Google search engine
Homeಶಿವಮೊಗ್ಗಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಹಗರಣದಲ್ಲಿ ಇನ್ನಷ್ಟು ತಿಮಿಂಗಲಗಳು..!

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಹಗರಣದಲ್ಲಿ ಇನ್ನಷ್ಟು ತಿಮಿಂಗಲಗಳು..!

ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಸ್ಕೀಮ್ ನಡಿ ಮಾಡಿರುವ ವಿವಿಧ ರೀತಿಯ ಕಾಮಗಾರಿಗಳು ಅವುಗಳಲ್ಲಿ ನಡೆದಿರುವ ಭ್ರಷ್ಟಾಚಾರ ಹಣ ದುರುಪಯೋಗ ಹಾಗೂ ಹೊಸಮನೆ ಶರಾವತಿ ನಗರ ಬಡಾವಣೆಯಲ್ಲಿ ಮಾಡಿರುವ ಅವೈಜ್ಞಾನಿಕ ಕಾಮಗಾರಿಗಳು ಇವತ್ತಿಗೂ ಓಡಾಡುವಾಗ ಎಲ್ಲರ ಕಣ್ಣಿಗೆ ಕಾಣುವ ನೂರಾರು ಗುಂಡಿಗಳು ಶಿವಮೊಗ್ಗ ನಗರದಲ್ಲಿ ಕಾಣುತ್ತಿದೆ. ಇದಕ್ಕೆ ಅಧಿಕಾರಿಗಳು ನಮಗೆ ಸಂಬಂಧಿಸಿದಲ್ಲದಂತೆ ಈ ಯೋಜನೆಯ ಅವಧಿ ಮುಗಿದಿದೆ. ಕಾರ್ಪೊರೇಷನ್ ಗೆ ಹಸ್ತಾಂತರಗೊಳ್ಳುತ್ತಿದೆ. ಇನ್ನೂ ಇದರಲ್ಲಿ ಎಷ್ಟು ಬಾಕಿ ಹಣ ದೋಚಬೇಕು ಅಷ್ಟು ದೋಚಲು ಹೊರಟಿದ್ದರು.

ಕೆಲವು ಹಿರಿಯ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕಿವಿ ಕೇಳದಂತೆ ಇದ್ದರು. ಒಬ್ಬ ಪ್ರಭಾರ ಮುಖ್ಯ ಇಂಜಿನಿಯರ್ ಕೃಷ್ಣಪ್ಪನ ಹಣದ ದಾಹ ಲೋಕಾಯುಕ್ತ ಬಲೆಗೆ ಬಿದ್ದು ಬೆತ್ತಲು ಮಾಡಿದೆ. ಅಂದರೆ ಅಧಿಕಾರಿಗಳ ಕಿರುಕುಳಕ್ಕೆ ಗುತ್ತಿಗೆದಾರರು ಈ ಎಲ್ಲಾ ಯೋಜನೆಯಲ್ಲಿ ಲಂಚದ ಹಣ ಕೊಟ್ಟು ಕೊಟ್ಟು ಎಷ್ಟು ರೋಸಿ ಹೋಗಿರಬಹುದು ಯೋಚಿಸಿ. ಗುತ್ತಿಗೆದಾರ ಹಾಗೂ ಮುಖ್ಯ ಇಂಜಿನಿಯರ್ ಆಡಿಯೋದಲ್ಲಿ ಮಾತನಾಡಿರುವ ವಿಷಯ ಕೇಳಿದರೆ ಇನ್ನಷ್ಟು ಭ್ರಷ್ಟ ಅಧಿಕಾರಿಗಳು ತಗಲು ಹಾಕಿಕೊಳ್ಳುತ್ತಾರೆ.


ಹಾಗೂ ಸ್ಮಾರ್ಟ್ ಸಿಟಿಯ ಇನ್ನೊಬ್ಬ ಎಕ್ಸಿಕ್ಯೂಟಿವ್ ಇಂಜಿನಿಯರ್ ಈ ಯೋಜನೆಗೆ ಮುಗೀತು ಪಾಲಿಕೆಗೆ ಹಸ್ತಾಂತರಗೊಳ್ಳುತ್ತದೆ ಎಂದುಕೊಂಡು ಇದಕ್ಕೆ ಸಂಬಂಧಪಟ್ಟ ಲ್ಯಾಪ್ ಟಾಪ್ ಹಾರ್ಡ್ ಡಿಸ್ಕ್ ಸುಮಾರು ಹತ್ತು ದಿನಗಳಿಂದ ತೆಗೆದುಕೊಂಡು ಹೋಗಿ ಅದರಲ್ಲಿರುವ ಪ್ರಮುಖ ದಾಖಲೆಗಳನ್ನು ನಾಶ ಮಾಡುವ ಸಂಚು ರೂಪಿಸಿದ್ದಾನೆ.

ಹತ್ತು ದಿನಗಳಿಂದ ಯಾರದು ದೂರವಾಣಿ ಕರೆ ಸ್ವೀಕಾರ ಮಾಡುತ್ತಿಲ್ಲ. ಎಂದು ಸ್ಮಾರ್ಟ್ ಸಿಟಿಯ ಕಚೇರಿಯ ಗೋಡೆಗಳು ಹೇಳುತ್ತಿವೆ. ಇವರ ಸಹದ್ಯೋಗಿ ಲೋಕಾಯುಕ್ತ ಬಲೆಗೆ ಬಿದ್ದರೂ ತನಿಖೆಗೆ ಸಹಕರಿಸದೆ ಇವರ ಮುಖವಾಡ ಕಳುಚುತ್ತದೆ ಎಂದು ಬಂದಿರಲಿಲ್ಲ. ಇದರಲ್ಲಿ ಇವರ ಪಾಲು ಅಧಿಕಾರಿಯ ಮನೆಯಲ್ಲಿ ಇತ್ತು ಎಂದು ಹೇಳಲಾಗುತ್ತಿದೆ. ಮತ್ತು ಇವರ ಸಂಚು ಇದರಲ್ಲಿ ಇದೆ ಎಂದು ಅಧಿಕಾರಿಗಳ ವಲಯದಲ್ಲಿ ಹೇಳಲಾಗುತ್ತಿದೆ.

ಇನ್ನೋರ್ವ ಮಹಿಳಾ ಅಧಿಕಾರಿ ಮೀಟಿಂಗ್ ಹೆಸರಿನಲ್ಲಿ ಸತ್ಕಾರದ ಹೆಸರಿನಲ್ಲಿ ಮಾಡಿರುವ ಲಕ್ಷಾಂತರ ರೂಪಾಯಿ ಬಿಲ್ಲುಗಳನ್ನು ಈ ಎಲ್ಲಾ ಹಗರಣಗಳನ್ನ ಸ್ಮಾರ್ಟ್ ಸಿಟಿ ಯೋಜನೆಯ ಮಂಡಳಿಯ ಅಧ್ಯಕ್ಷರಾದ ಕಾವೇರಿ ಮೇಡಂ ರವರು ಪರಿಶೀಲಿಸದೆ ಮೌನಕ್ಕೆ ಹೋಗಿರುವುದು ಸಂಶಯಕ್ಕೆ ಕಾರಣವಾಗುತ್ತದೆ.

ಈಗಲಾದರೂ ತನಿಖೆಗೆ ಆದೇಶಿಸಿ ಭ್ರಷ್ಟಾಚಾರದಿಂದ ಲೂಟಿ ಹೊಡೆದಿರುವ ಹಣವನ್ನ ಅವರಿಂದ ಸರ್ಕಾರಕ್ಕೆ ಮರಳಿ ಪಡೆಯುವ ಪ್ರಯತ್ನ ಮಾಡಲಿ. ವಿವಿಧ ಯೋಜನೆಯ ಕಳಪೆ ಅವೈಜ್ಞಾನಿಕ ಕಾಮಗಾರಿಗಳನ್ನು ಪರಿಶೀಲಿಸಲಿ.

ಈ ಹಿಂದೆ ಇದರ ಅಕ್ರಮಗಳನ್ನು ಭೃಷ್ಟಾಚಾರವನ್ನು ಅವೈಜ್ಞಾನಿಕ ಕಾಮಗಾರಿಗಳ ವಿಚಾರಗಳನ್ನು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ ಕಾಂಗ್ರೆಸ್ ಮುಖಂಡ ಶ್ಯಾಮ್ ಸುಂದರ್ ಈಗ ಲೋಕಾಯುಕ್ತ ಬಲೆಗೆ ತಿಮಿಂಗಲಗಳು ಬೀಳುವ ಹಂತಕ್ಕೆ ಬಂದು ತಲುಪಿಸಿದ್ದಾರೆ. ಲೋಕಾಯುಕ್ತ ತನಿಖೆ ಮುಂದುವರೆಯಲಿ ತಿಂದ ತಿಮಿಂಗಲಗಳು ಇನ್ನಷ್ಟು ಹೊರಬರಲಿ….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...