ಬೆಂಗಳೂರು : ಕಾಂತರಾಜ್ ತಂಡ ಸಿದ್ಧಪಡಿಸಿದ ಜಾತಿಗಣತಿ ವರದಿ ಈಗ ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಸುದ್ದಿಯಾಗುತ್ತಿದೆ.
ಸುದ್ದಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ 1.08 ಕೋಟಿ, ಮುಸಲ್ಮಾನ 75 ಲಕ್ಷ, ಲಿಂಗಾಯತ 73 ಲಕ್ಷ, ಒಕ್ಕಲಿಗ 70 ಲಕ್ಷ, ಕುರುಬರು 45 ಲಕ್ಷ, ಪರಿಶಿಷ್ಟ ಪಂಗಡ 42 ಲಕ್ಷ, ಮರಾಠ 16 ಲಕ್ಷ, ವಿಶ್ವಕರ್ಮ 15 ಲಕ್ಷ, ಬ್ರಾಹ್ಮಣ 15 ಲಕ್ಷ, ಬೆಸ್ತರು 14.5 ಲಕ್ಷ, ಈಡಿಗರು 14 ಲಕ್ಷ, ಕ್ರೈಸ್ತರು 12 ಲಕ್ಷ, ಗೊಲ್ಲ (ಯಾದವ) 10.5 ಲಕ್ಷ, ಉಪ್ಪಾರ 7 ಲಕ್ಷ, ಮಡಿವಾಳ 7 ಲಕ್ಷ, ಅರೆ ಅಲೆಮಾರಿ 7 ಲಕ್ಷ, ಕುಂಬಾರ 5 ಲಕ್ಷ, ತಿಗಳರು 5 ಲಕ್ಷ, ಸವಿತಾ ಸಮಾಜ 4.5 ಲಕ್ಷ ಹಾಗೂ ಜೈನರು 3 ಲಕ್ಷ ಎಂದು ತಿಳಿಸಲಾಗಿದೆ.